3 ತಿಂಗಳ ಬಳಿಕ ಟೀಂ ಇಂಡಿಯಾಗೆ ಈ ಸ್ಪೋಟಕ ಆಲ್ ರೌಂಡರ್ ಎಂಟ್ರಿ! ಆಸೀಸ್ ತಂಡದಲ್ಲಿ ನಡುಕ ಶುರು

IND vs AUS, WTC Final: ಟೀಂ ಇಂಡಿಯಾಗೆ ಮೂರು ತಿಂಗಳ ನಂತರ ಏಕಾಏಕಿ ಅಪಾಯಕಾರಿ ಆಟಗಾರನ ಎಂಟ್ರಿ ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಭಯದ ವಾತಾವರಣ ಮೂಡಿದೆ. ಈ ಆಟಗಾರನ ಎಂಟ್ರಿಯಿಂದ ಆಸ್ಟ್ರೇಲಿಯಾ ತಂಡ ತಲ್ಲಣಗೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಈ ಆಟಗಾರ ಆಸ್ಟ್ರೇಲಿಯಾಕ್ಕೆ ದೊಡ್ಡ ಶತ್ರು ಎಂದು ಸಾಬೀತುಪಡಿಸಲಿದ್ದಾರೆ.

Written by - Bhavishya Shetty | Last Updated : Jun 2, 2023, 01:50 PM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಅಂತಿಮ ಪಂದ್ಯ
    • ಟೀಂ ಇಂಡಿಯಾಗೆ ಮೂರು ತಿಂಗಳ ನಂತರ ಏಕಾಏಕಿ ಅಪಾಯಕಾರಿ ಆಟಗಾರನ ಎಂಟ್ರಿ ಕೊಟ್ಟಿದ್ದಾರೆ
    • ಟೀಂ ಇಂಡಿಯಾದ ಈ ಆಟಗಾರ ಆಸ್ಟ್ರೇಲಿಯಾಕ್ಕೆ ದೊಡ್ಡ ಶತ್ರು ಎಂದು ಸಾಬೀತುಪಡಿಸಲಿದ್ದಾರೆ
3 ತಿಂಗಳ ಬಳಿಕ ಟೀಂ ಇಂಡಿಯಾಗೆ ಈ ಸ್ಪೋಟಕ ಆಲ್ ರೌಂಡರ್ ಎಂಟ್ರಿ! ಆಸೀಸ್ ತಂಡದಲ್ಲಿ ನಡುಕ ಶುರು title=
R Ashwin

IND vs AUS, WTC Final: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಅಂತಿಮ ಪಂದ್ಯವು ಜೂನ್ 7 ರಿಂದ ಜೂನ್ 11 ರವರೆಗೆ ಲಂಡನ್‌ ನ ಓವಲ್ ಮೈದಾನದಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದೆ. ಟೀಂ ಇಂಡಿಯಾಗೆ ರೋಹಿತ್ ಶರ್ಮಾ ನಾಯಕತ್ವ ಇರಲಿದೆ.

ಇದನ್ನೂ ಓದಿ: ಪದಕಗಳನ್ನು ಗಂಗಾ ನದಿಗೆ ಎಸೆದರೆ ನನಗೆ ಗಲ್ಲು ಶಿಕ್ಷೆಯಾಗಲ್ಲ: ಬ್ರಿಜ್ ಭೂಷನ್ ಸಿಂಗ್‌

ಟೀಂ ಇಂಡಿಯಾಗೆ ಮೂರು ತಿಂಗಳ ನಂತರ ಏಕಾಏಕಿ ಅಪಾಯಕಾರಿ ಆಟಗಾರನ ಎಂಟ್ರಿ ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಭಯದ ವಾತಾವರಣ ಮೂಡಿದೆ. ಈ ಆಟಗಾರನ ಎಂಟ್ರಿಯಿಂದ ಆಸ್ಟ್ರೇಲಿಯಾ ತಂಡ ತಲ್ಲಣಗೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಈ ಆಟಗಾರ ಆಸ್ಟ್ರೇಲಿಯಾಕ್ಕೆ ದೊಡ್ಡ ಶತ್ರು ಎಂದು ಸಾಬೀತುಪಡಿಸಲಿದ್ದಾರೆ.

ಈ ಆಟಗಾರ ಟೀಂ ಇಂಡಿಯಾದಲ್ಲಿ ಆಡುತ್ತಿರುವ ಸುದ್ದಿ ಕೇಳಿ ಆಸ್ಟ್ರೇಲಿಯಾ ತಂಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಆಟಗಾರ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (WTC ಫೈನಲ್) ಪ್ರಶಸ್ತಿಯನ್ನು ಸ್ವಂತವಾಗಿ ಗೆಲ್ಲಬಹುದು. ಈ ಮ್ಯಾಚ್ ವಿನ್ನರ್ ಬೇರೆ ಯಾರೂ ಅಲ್ಲ, ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್.

ಸ್ಪಿನ್ ಬೌಲಿಂಗ್ ಮಾತ್ರವಲ್ಲದೆ ಅಶ್ವಿನ್ ಅತ್ಯುತ್ತಮ ಬ್ಯಾಟಿಂಗ್ ನಲ್ಲೂ ಪರಿಣತಿ ಹೊಂದಿದ್ದಾರೆ. ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ ನಲ್ಲಿ 5 ಶತಕಗಳನ್ನು ಬಾರಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 124 ಆಗಿದೆ. ಅಶ್ವಿನ್ ಟೆಸ್ಟ್ ಪಂದ್ಯಗಳಲ್ಲಿ ದಾಖಲೆಯ 474 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 32 ಬಾರಿ 5 ವಿಕೆಟ್ ಪಡೆದಿದ್ದಾರೆ.

ರವಿಚಂದ್ರನ್ ಅಶ್ವಿನ್ ಈಗ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ) ಫೈನಲ್‌ ನಲ್ಲಿ ವಿಧ್ವಂಸಕರಾಗಲಿದ್ದಾರೆ. ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ ನಲ್ಲಿ ಟೀಂ ಇಂಡಿಯಾವನ್ನು ಸ್ವಂತವಾಗಿ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ.

ರವಿಚಂದ್ರನ್ ಅಶ್ವಿನ್ ಮಾರಕ ಸ್ಪಿನ್‌ ಮಾಡುವ ಸಾಮಾರ್ಥ್ಯ ಹೊಂದಿದ್ದಾರೆ. ಇವರು ಪ್ರಸ್ತುತ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್ 1 ಬೌಲರ್ ಆಗಿದ್ದಾರೆ. ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ ನಲ್ಲಿ ಗರಿಷ್ಠ 800 ವಿಕೆಟ್‌ ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್‌ ನಲ್ಲಿ 709 ವಿಕೆಟ್ ಪಡೆದಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್ 92 ಟೆಸ್ಟ್ ಪಂದ್ಯಗಳಲ್ಲಿ 474 ವಿಕೆಟ್ ಪಡೆದಿದ್ದು, 3129 ರನ್ ಕೂಡ ಗಳಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ ನಲ್ಲಿ 5 ಶತಕಗಳನ್ನು ಹೊಂದಿದ್ದು, ಅವರ ಅತ್ಯುತ್ತಮ ಸ್ಕೋರ್ 124 ಆಗಿದೆ.

ಇದನ್ನೂ ಓದಿ: ಉಜ್ಜಯಿನಿ ಸನ್ನಿಧಿಯಲ್ಲಿ ಸಾರಾ ಅಲಿ ಖಾನ್‌ ಪೂಜೆ..! ಕೆಲ ನೆಟ್ಟಿಗರ ಆಕ್ರೋಶ

ರವಿಚಂದ್ರನ್ ಅಶ್ವಿನ್ 113 ಏಕದಿನ ಪಂದ್ಯಗಳಲ್ಲಿ 151 ವಿಕೆಟ್ ಹಾಗೂ 65 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ 707 ರನ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 184 ರನ್ ಗಳಿಸಿದ್ದಾರೆ. 197 ಐಪಿಎಲ್ ಪಂದ್ಯಗಳಲ್ಲಿ 171 ವಿಕೆಟ್ ಮತ್ತು 714 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News