India vs Australia 2nd Test: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಈ ಟೆಸ್ಟ್ ಸರಣಿಯಲ್ಲಿ ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಕೆಎಸ್ ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಕೆಎಸ್ ಭರತ್ ಎರಡರಲ್ಲೂ ವಿಫಲರಾಗಿದ್ದಾರೆ. ಕೆಎಸ್ ಭರತ್ ಅವರ ಈ ಕಳಪೆ ಪ್ರದರ್ಶನ ಮುಂಬರುವ ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಗದಂತೆ ಮಾಡಬಹುದು.
IND vs AUS, 2nd Test: ಆಸ್ಟ್ರೇಲಿಯ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಸೆಷನ್‌ನಲ್ಲಿ ಮೊಹಮ್ಮದ್ ಶಮಿ ಅವರ ಅಬ್ಬರದ ಬೌಲಿಂಗ್ ಮತ್ತೆ ಮರುಕಳಿಸಿದೆ. ಭಾರತ ತಂಡದ ಅಪಾಯಕಾರಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ತಮ್ಮ ‘ಮ್ಯಾಜಿಕ್ ಬಾಲ್’ ಮೂಲಕ ಆಸ್ಟ್ರೇಲಿಯಾದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದ್ದಾರೆ. ಈ ಮೂಲಕ ಸಂಚಲನ ಮೂಡಿಸಿದ್ದಾರೆ.
IND vs AUS 1st Test, Vikram Rathour Statement: ಆಸ್ಟ್ರೇಲಿಯಾ ವಿರುದ್ಧ 120 ರನ್ ಗಳಿಸಲು ರೋಹಿತ್ ಶರ್ಮಾ ಕಠಿಣ ಪರಿಶ್ರಮ ಪಡಬೇಕಾಯಿತು ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಶುಕ್ರವಾರ ಹೇಳಿದ್ದಾರೆ. ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ, ರನ್ ಗಳಿಸಲು ಏನಾದರೂ ವಿಶೇಷ ಸಾಧನೆ ಮಾಡಬೇಕಾಗಿದೆ ಎಂದರು. ರೋಹಿತ್ 120 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ನಂತರ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅರ್ಧಶತಕ ಗಳಿಸಿ ಅಜೇಯರಾಗಿ ಮರಳಿದರು. ಭಾರತ ಇದುವರೆಗೆ ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್‌ಗಳ ಮುನ್ನಡೆ ಸಾಧಿಸಿದೆ
IND vs AUS Test Match: 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ಪ್ರಕಾರ, ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಹೊರಡುವ ಮೊದಲು ಮಾತನಾಡಿದ ಹೆಡ್, “ಪಾಕಿಸ್ತಾನದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿದ ನಂತರ ನಾನು ನನ್ನ ಬಗ್ಗೆ ಕೊಂಚ ಆಲೋಚನೆ ಮಾಡಿದೆ. ಉಪಖಂಡದಲ್ಲಿ ಆಡಿದ ಕೊನೆಯ ಸರಣಿಯಲ್ಲಿ ನನಗೆ ಬೇಕಾದಷ್ಟು ಧನಾತ್ಮಕವಾಗಿ ಬ್ಯಾಟಿಂಗ್ ಮಾಡಲಿಲ್ಲ ಎಂದು ನಾನು ಅಂದುಕೊಂಡೆ” ಅಂತ ಹೇಳಿದ್ದಾರೆ.