ದ್ರಾವಿಡ್ ಗೆ ಕ್ಷಮೆಯಾಚಿಸಿದ ಅಲನ್ ಡೊನಾಲ್ಡ್..! ಅಷ್ಟಕ್ಕೂ ಕ್ಷಮೆಯಾಚಿಸಿದ್ದು 1997 ರ ಘಟನೆಗೆ...!

ಅಲನ್ ಡೊನಾಲ್ಡ್ ಅವರು 1997 ರಲ್ಲಿ ತ್ರಿ-ರಾಷ್ಟ್ರ ಸರಣಿಯ ಪಂದ್ಯದ ವೇಳೆ ರಾಹುಲ್ ದ್ರಾವಿಡ್ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದಕ್ಕೆ ಅವರಿಗೆ ಮತ್ತೊಮ್ಮೆ ಕ್ಷಮೆಯಾಚಿಸಿದ್ದಾರೆ.

Written by - Zee Kannada News Desk | Last Updated : Dec 16, 2022, 02:38 PM IST
  • ಇನ್ನೊಂದೆಡೆಗೆ ರಾಹುಲ್ ದ್ರಾವಿಡ್ ಕೂಡ ಅಲನ್ ಡೊನಾಲ್ಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
  • ನನ್ನ ವೃತ್ತಿಜೀವನದಲ್ಲಿ ಆಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು.
  • ನಾನು ಅವರ ಕೈಯಲ್ಲಿ ಈಗ ಬೌಲ್ ಇಲ್ಲದೆ ಮತ್ತು ಸನ್ ಸ್ಕ್ರೀನ್ ಇಲ್ಲದೆ ನೋಡುವುದಕ್ಕೆ ಸಂತೋಷವಾಗುತ್ತದೆ.
ದ್ರಾವಿಡ್ ಗೆ ಕ್ಷಮೆಯಾಚಿಸಿದ ಅಲನ್ ಡೊನಾಲ್ಡ್..! ಅಷ್ಟಕ್ಕೂ ಕ್ಷಮೆಯಾಚಿಸಿದ್ದು 1997 ರ ಘಟನೆಗೆ...!   title=

ನವದೆಹಲಿ: ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗುತ್ತಿದ್ದಂತೆ, ಆತಿಥೇಯರ ಬೌಲಿಂಗ್ ಕೋಚ್ ಅಲನ್ ಡೊನಾಲ್ಡ್ ಅವರು 1997 ರಲ್ಲಿ ತ್ರಿ-ರಾಷ್ಟ್ರ ಸರಣಿಯ ಪಂದ್ಯದ ವೇಳೆ ರಾಹುಲ್ ದ್ರಾವಿಡ್ ಅವರನ್ನು ಸ್ಲೆಡ್ಜಿಂಗ್ ಮಾಡಿದ್ದಕ್ಕೆ ಅವರಿಗೆ ಮತ್ತೊಮ್ಮೆ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ : ಕುಕ್ಕರ್ ಬಾಂಬ್ ಸ್ಫೋಟದ ಅನುಮಾನ,‌ ಅಲ್ಪಸಂಖ್ಯಾತರ ಓಟಿಗಾಗಿ ಡಿಕೆಶಿಯಿಂದ ಓಲೈಕೆ ರಾಜಕಾರಣ'

ಈ ಕುರಿತಾಗಿ ಮಾತನಾಡಿದ "ಡರ್ಬನ್‌ನಲ್ಲಿ ನಾನು ಮಾತನಾಡುವಾಗ ಒಂದು ಕೆಟ್ಟ ಘಟನೆ ಸಂಭವಿಸಿದೆ. ದ್ರಾವಿಡ್ ಮತ್ತು ಸಚಿನ್ ನಮ್ಮನ್ನು ಎಲ್ಲಾ ಭಾಗಗಳಿಗೆ ತಲೆನೋವಾಗಿ ಪರಿಣಮಿಸಿದ್ದರು.ಈ ಸಂದರ್ಭದಲ್ಲಿ ನಾನು ಸ್ವಲ್ಪ ಮಿತಿ ಮೀರಿ ವರ್ತಿಸಿದೆ.ನಾನು ರಾಹುಲ್ ದ್ರಾವಿಡ್ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇನೆ.ನಾನು ರಾಹುಲ್ ಜೊತೆ ಕುಳಿತುಕೊಳ್ಳಲು ಇಷ್ಟಪಡುತ್ತೇನೆ. ಮತ್ತು ರಾತ್ರಿಯ ಊಟಕ್ಕೆ ಹೋಗಿ ಆ ದಿನ ಏನಾಯಿತು ಎನ್ನುವುದರ ಬಗ್ಗೆ ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ “ಎಂದು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿಸಂದರ್ಶನವೊಂದರಲ್ಲಿ ಡೊನಾಲ್ಡ್ ಹೇಳಿದ್ದಾರೆ.

ಇದನ್ನೂ ಓದಿ : R Ashok : 'ಡಿಕೆ ಶಿವಕುಮಾರ್ ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು'

ಇನ್ನೊಂದೆಡೆಗೆ ರಾಹುಲ್ ದ್ರಾವಿಡ್ ಕೂಡ ಅಲನ್ ಡೊನಾಲ್ಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ." ಅವರು ಶ್ರೇಷ್ಠ ಬೌಲರ್ ಆಗಿದ್ದರು. ಬಹುಶಃ ನಾನು ನನ್ನ ವೃತ್ತಿಜೀವನದಲ್ಲಿ ಆಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾನು ಅವರ ಕೈಯಲ್ಲಿ ಈಗ ಬೌಲ್ ಇಲ್ಲದೆ ಮತ್ತು ಸನ್ ಸ್ಕ್ರೀನ್ ಇಲ್ಲದೆ ನೋಡುವುದಕ್ಕೆ ಸಂತೋಷವಾಗುತ್ತದೆ.ಅವರು ಭಯ ಹುಟ್ಟಿಸುವ ಬೌಲರ್ ಮತ್ತು ಭಯಂಕರವಾಗಿದ್ದರು.ಈಗ ಅವರನ್ನು ಭೇಟಿ ಮಾಡಿ ವೇಗದ ಬೌಲಿಂಗ್ ಕುರಿತಾಗಿ ಮಾತನಾಡಲು ಇಷ್ಟಪಡುತ್ತೇನೆ.ಈಗ ಅವರು ಯಶಸ್ವಿ ಕೋಚ್ ಆಗಿದ್ದಾರೆ, ಬಹಳಷ್ಟು ಯುವ ವೇಗದ ಬೌಲರ್ಗಳಿಗೆ ತರಬೇತಿ ನೀಡಿದ್ದಾರೆ” ಎಂದು ದ್ರಾವಿಡ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News