ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ರೀತಿಯ ಕ್ರಿಕೆಟ್‌ಗಳಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ವಿಶ್ವಕಪ್ ತಂಡದಲ್ಲಿ ಗಾಯಗೊಂಡ ವಿಜಯ್ ಶಂಕರ್ ಬದಲಿಗೆ ಮಾಯಾಂಕ್ ಅಗರ್ವಾಲ್ ಅವರಿಗೆ ಬಿಸಿಸಿಐ ಆದ್ಯತೆ ನೀಡಿದ ಹಿನ್ನಲೆಯಲ್ಲಿ ಅವರ ನಿರ್ಧಾರ ಬಂದಿದೆ. 

Last Updated : Jul 3, 2019, 02:03 PM IST
ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಅಂಬಟಿ ರಾಯುಡು  title=

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ರೀತಿಯ ಕ್ರಿಕೆಟ್‌ಗಳಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ವಿಶ್ವಕಪ್ ತಂಡದಲ್ಲಿ ಗಾಯಗೊಂಡ ವಿಜಯ್ ಶಂಕರ್ ಬದಲಿಗೆ ಮಾಯಾಂಕ್ ಅಗರ್ವಾಲ್ ಅವರಿಗೆ ಬಿಸಿಸಿಐ ಆದ್ಯತೆ ನೀಡಿದ ಹಿನ್ನಲೆಯಲ್ಲಿ ಅವರ ನಿರ್ಧಾರ ಬಂದಿದೆ.

ಅಂಬಟಿ ರಾಯಡು 55 ಏಕದಿನ ಪಂದ್ಯಗಳಲ್ಲಿ 47.05 ರ ಸರಾಸರಿಯಲ್ಲಿ ಮೂರು ಶತಕ ಮತ್ತು 10 ಅರ್ಧಶತಕಗಳೊಂದಿಗೆ 1694 ರನ್ ಗಳಿಸಿದ್ದಾರೆ. ಅವರು ಆಡಿದ ಆರು ಟಿ 20 ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್ 42 ರನ್ ಗಳಿಸಿದರು. ಆದರೆ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಎಂದಿಗೂ ಸಿಗಲಿಲ್ಲ. 2013 ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ರಾಯುಡು, ಈ ವರ್ಷ ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದಾರೆ. 

ಕಳೆದ ವರ್ಷ ರಾಯುಡು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ಏಕದಿನ ಮತ್ತು ಟಿ 20 ಗಳತ್ತ ಗಮನ ಹರಿಸಿದರು. ರಾಯುಡು 17 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಅವರು 97 ಪಂದ್ಯಗಳಿಂದ 6151 ರನ್ ಗಳಿಸಿದ್ದಾರೆ. 'ಹೈದರಾಬಾದ್ ನಾಯಕ ಮತ್ತು ಭಾರತ ಏಕದಿನ ತಂಡದ ಸದಸ್ಯ ಅಂಬಟಿ ರಾಯುಡು ಸೀಮಿತ ಓವರ್ಗಳ ಕ್ರಿಕೆಟ್ ಮತ್ತು ಟಿ 20 ಕ್ರಿಕೆಟ್ ಬಗ್ಗೆ ಗಮನಹರಿಸಲು ರಣಜಿ ಟ್ರೋಫಿ ಸೇರಿ ಎಲ್ಲ ದೀರ್ಘಾವಧಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ "ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಎಂದು ಘೋಷಿಸಿದೆ.

Trending News