Asia Cup 2022 Schedule - ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಶನಿವಾರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಏಷ್ಯಾ ಕಪ್ 2022ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಟಿ20 ಮಾದರಿಯಲ್ಲಿ ಪಂದ್ಯಾವಳಿಯು ಶ್ರೀಲಂಕಾದಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಇದಕ್ಕಾಗಿ ಅರ್ಹತಾ ಸುತ್ತಿನ ಪಂದ್ಯಗಳು 20 ಆಗಸ್ಟ್ 2022 ರಿಂದ ನಡೆಯಲಿವೆ.
AGM Update: The ACC Members unanimously decided that the tenure of Mr. @JayShah as ACC President and that of the Executive Board along with its Committees will continue until the 2024 AGM @BCCI @TheRealPCB @BCBtigers @ACBofficials @ThakurArunS pic.twitter.com/ah8FKIQ7D4
— AsianCricketCouncil (@ACCMedia1) March 19, 2022
ಸಾಂಕ್ರಾಮಿಕ ರೋಗದಿಂದಾಗಿ ರದ್ದುಗೊಂಡಿದ್ದ ಟೂರ್ನಿ
ಏಷ್ಯಾ ಕಪ್ ಪಂದ್ಯಾವಳಿಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಆದರೆ COVID-19 ಮಹಾಮಾರಿ ಮತ್ತು ಅದರ ನಿರ್ಬಂಧಗಳಿಂದಾಗಿ 2020 ರ ಆವೃತ್ತಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ರದ್ದುಗೊಳಿಸಿತ್ತು. ಕೌನ್ಸಿಲ್ ನಂತರ ಶ್ರೀಲಂಕಾದಲ್ಲಿ ಪಂದ್ಯಾವಳಿಗಾಗಿ ಜೂನ್ 2021 ರ ವಿಂಡೋವನ್ನು ಪ್ರಸ್ತಾಪಿಸಿತ್ತು. ಆದರೆ, ಮಹಾಮಾರಿಯ ಕಾರಣ ಸಂಘಟಕರನ್ನು ಮತ್ತೊಮ್ಮೆ ಅದನ್ನು ರದ್ದುಗೊಳಿಸಿದ್ದರು.
ಭಾರತ ಅತ್ಯಂತ ಯಶಸ್ವಿ ತಂಡ
ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. 1984ರಲ್ಲಿ ಏಷ್ಯಾಕಪ್ ಆರಂಭವಾದಾಗಿನಿಂದ ಭಾರತ ಒಟ್ಟು 13 ಆವೃತ್ತಿಗಳಲ್ಲಿ ಏಳು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತ ತಂಡವು 1984, 1988, 1990/91, 1995, 2010, 2016 ಮತ್ತು 2018 ರಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಶ್ರೀಲಂಕಾ ಐದು ಪ್ರಶಸ್ತಿಗಳನ್ನು ಗೆದ್ದ ಎರಡನೇ ಅತ್ಯಂತ ಯಶಸ್ವಿ ತಂಡವಾಗಿದೆ. ಶ್ರೀಲಂಕಾ 1986, 1997, 2004, 2008 ಮತ್ತು 2014 ರಲ್ಲಿ ಪ್ರಶಸ್ತಿ ಗೆದ್ದಿದೆ. ಶ್ರೀಲಂಕಾ 14 ಪಂದ್ಯಾವಳಿಗಳನ್ನು ಆಡಿದ್ದರೆ, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ 13 ಪಂದ್ಯಾವಳಿಗಳನ್ನು ಆಡಿವೆ. 2000 ಮತ್ತು 2012ರಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದುಕೊಂಡಿದೆ.
ಇದನ್ನೂ ಓದಿ-IND Vs Aus Women's WC: ಟೀಂ ಇಂಡಿಯಾಗೆ ಭಾರಿ ಮುಖಭಂಗ, ವ್ಯರ್ಥವಾದ Mithali-Harmanpreet ಶತಕದ ಜೊತೆಯಾಟ
ಆರು ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ
ಏಷ್ಯಾ ಕಪ್ 2022 ರಲ್ಲಿ ಒಟ್ಟು ಆರು ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ. ಭಾರತ (Team India), ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಒಂದು ಕ್ವಾಲಿಫೈಯರ್ ತಂಡದ ನಡುವೆ ಟೂರ್ನಿ ನಡೆಯಲಿದೆ. ಕ್ವಾಲಿಫೈಯರ್ ಪಂದ್ಯ ಯುಎಇ ಮತ್ತು ಕುವೈತ್ ಮಧ್ಯೆ ನಡೆಯಲಿದೆ.
ಇದನ್ನೂ ಓದಿ-'ಅದು ರಿಕಿ ಪಾಂಟಿಂಗ್ ಆಗಿಲ್ಲದಿದ್ದರೆ...ನಾನು ಅವನ ತಲೆಯನ್ನು ಕತ್ತರಿಸುತ್ತಿದ್ದೆ'
ಏತನ್ಮಧ್ಯೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರಾವಧಿಯನ್ನು ಎಸಿಸಿ ಎಜಿಎಂ ಸರ್ವಾನುಮತದಿಂದ 2024 ರವರಗೆ ವಿಸ್ತರಿದಿದೆ. ಶನಿವಾರ ಕೊಲಂಬೊದಲ್ಲಿ ನಡೆದ ಎಸಿಸಿ ಎಜಿಎಂನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಎಸಿಸಿ, "ಕತಾರ್ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯತ್ವವನ್ನು ಅಸೋಸಿಯೇಟ್‌ನಿಂದ ಎಸಿಸಿ ಪೂರ್ಣ ಸದಸ್ಯ ಸ್ಥಾನಮಾನಕ್ಕೆ ಅಪ್‌ಗ್ರೇಡ್ ಮಾಡಲಾಗಿರುವುದನ್ನು ಎಸಿಸಿ ಅಭಿನಂದಿಸಲು ಬಯಸುತ್ತದೆ" ಎಂದು ಹೇಳಿದೆ.
ಇದನ್ನೂ ಓದಿ-T20 World Cup 2022: ಟಿ-20 ವಿಶ್ವಕಪ್ಗೆ ಈ ಇಬ್ಬರು ಆಟಗಾರರ ಸ್ಥಾನ ಅಪಾಯದಲ್ಲಿದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.