Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ 11 ನೇ ಮತ್ತು ಕೊನೆಯ ದಿನವಾದ ಇಂದೂ ಕೂಡ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದೆ. ಈ ಬಾರಿ ತನ್ನ 40ನೇ ವಯಸ್ಸಿನಲ್ಲಿ ಅಧ್ಬುತ ಕಮಾಲ್ ಮಾಡಿರುವ ಟೇಬಲ್ ಟೆನ್ನಿಸ್ ಪಟು ಅಚಂತಾ ಶರತ್ ಕಮಲ್, ಭಾರತದ ಮಡಿಲಿಗೆ ಮತ್ತೊಂದು ಚಿನ್ನದ ಪದಕವನ್ನು ಸೇರಿಸಿದ್ದಾರೆ. ಲಿಯಾನ್ ಪಿಚ್ ಫೋರ್ಡ್ ಅವರನ್ನು ಅಚಂತಾ ಶರತ್ ಕಮಲ್ ಸೋಲಿಸಿದ್ದಾರೆ. ಭಾರತದ ಪಾಲಿಗೆ ಬರ್ಮಿಂಗ್ ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದು 22ನೇ ಚಿನ್ನದ ಪದಕವಾಗಿದೆ.
#CommonwealthGames2022 | Achanta Sharath Kamal wins Gold in Men's Single Finals in Table Tennis pic.twitter.com/gcThyuYBBQ
— ANI (@ANI) August 8, 2022
ಇದನ್ನೂ ಓದಿ-CWG 2022: ಭಾರತಕ್ಕೆ ಚಿನ್ನದ ‘ಸಿಂಧೂ’ರ – ಬ್ಯಾಡ್ಮಿಂಟನ್ ನಲ್ಲಿ ಬಂಗಾರ
ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಅಚಂತಾ ಶರತ್ ಕಮಲ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅಚಂತಾ ಶರತ್ ಕಮಲ್ ಜೊತೆಗೆ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಕೂಡ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಅನುಭವಿ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಅವರು ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಫೈನಲ್‌ನಲ್ಲಿ 4-1 ರಿಂದ ಸೋಲಿಸಿ ಚಿನ್ನದ ಪದಕವನ್ನು ಕಚ್ಚಿದ್ದಾರೆ.
ಟೇಬಲ್ ಟೆನ್ನಿಸ್ ನಲ್ಲಿ ಚಿನ್ನ ಗೆದ್ದ ಶರತ್ ಕಮಲ್
ಈ ಸ್ಪರ್ಧೆಯಲ್ಲಿ ಸತ್ಯನ್ ಜ್ಞಾನಶೇಖರ್ ಕಂಚಿನ ಪದಕ ಪಡೆದುಕೊಂಡಿದ್ದರೆ, 40 ವರ್ಷದ ಶರತ್ ತನ್ನ ವಯಸ್ಸನ್ನು ಧಿಕ್ಕರಿಸಿ, ಶ್ರೇಯಾಂಕದಲ್ಲಿ ತನಗಿಂತ ಉತ್ತಮನಾಗಿರುವ ಆಟಗಾರನ ವಿರುದ್ಧ ಮೊದಲ ಗೇಮ್‌ನಲ್ಲಿ 11-13, 11-7, 11-2, 11-6, 11-8 ರಿಂದ ಸೋತ ಬಳಿಕವೂ ಕೂಡ ನಂತರ ಸಿಡಿದೆದ್ದಿದ್ದಾರೆ. ಶರತ್ ವಿಶ್ವ ರ‍್ಯಾಂಕಿಂಗ್ 39ನೇ ಸ್ಥಾನದಲ್ಲಿದ್ದರೆ, ಪಿಚ್‌ಫೋರ್ಡ್ 20ನೇ ಸ್ಥಾನದಲ್ಲಿದ್ದಾರೆ.
ಶರತ್ ಅವರ 13ನೇ ಪದಕ ಇದಾಗಿದೆ
ಇದು ಕಾಮನ್‌ವೆಲ್ತ್ ಕ್ರೀತಾಕೂಟದಲ್ಲಿ ಶರತ್ ಅವರ ಒಟ್ಟು 13ನೇ ಪದಕವಾಗಿದೆ. ಅವರು ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ. 2006 ರ ಮೆಲ್ಬೋರ್ನ್ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದ್ದರು ಮತ್ತು ಚಿನ್ನದ ಪದಕವನ್ನು ಗೆದ್ದಿದ್ದರು. ಇದಕ್ಕೂ ಮುನ್ನ ಸತ್ಯನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇಂಗ್ಲೆಂಡ್‌ನ ಪಾಲ್ ಡ್ರಿಂಘಲ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಭಾರತೀಯ ಪುರುಷ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಅದ್ಭುತ ಆಟವನ್ನು ಪ್ರದರ್ಶಿಸಿ ಭಾರತಕ್ಕೆ 21 ಚಿನ್ನವನ್ನು ತಂದುಕೊಟ್ಟಿದ್ದಾರೆ. ಈ ಜೋಡಿ ಇಂಗ್ಲೆಂಡ್ ನ ಬೆನ್ ಲೇನ್ ಹಾಗೂ ಸೀನ್ ವೆಂಡಿ ಅವರನ್ನು ಫೈನಲ್ ಪಂದ್ಯದಲ್ಲಿ ನೇರ ಸೆಟ್ ಗಳಲ್ಲಿ ಮಣಿಸಿದ್ದಾರೆ.
CWG 2022: Shuttlers Chirag-Satwik capture gold in men's doubles category
Read @ANI Story | https://t.co/1vuwhtQ3CY#ChiragShetty #SatwikSairajRankiReddy #CWG2022 pic.twitter.com/hftGaO2WJT
— ANI Digital (@ani_digital) August 8, 2022
ಇದನ್ನೂ ಓದಿ-ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ದೀಪಿಕಾ: ಪತ್ನಿಗೆ ಹೀಗೆ ಶುಭಕೋರಿದ ದಿನೇಶ್ ಕಾರ್ತಿಕ್
ಇನ್ನೊಂದೆಡೆ, ಭಾರತ ಮತ್ತು ಆಸ್ಟ್ರೇಲಿಯಾ ಹಾಕಿ ತಂಡಗಳ ನಡುವೆ ಇಂದು ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಹಾಫ್ ಟೈಮ್ ವರೆಗೆ ಆಸ್ಟ್ರೇಲಿಯಾ ತಂಡ 5-0ಯಿಂದ ಮುನ್ನಡೆಯನ್ನು ಸಾಧಿಸಿತ್ತು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಚಿನ್ನ ಜಯಿಸುವ ಜೋಶ್ ನಲ್ಲಿರುವಂತೆ ತೋರುತ್ತಿದೆ. ಏಕೆಂದರೆ, ಭಾರತದ ಪಾಲಿಗೆ ಪಂದ್ಯಕ್ಕೆ ಮರಳುವುದು ತೀರಾ ಕಷ್ಟ ಸಾಧ್ಯ ಎಂಬಂತೆ ತೋರುತ್ತಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.