ಕಲ್ಯಾಣ‌ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಬದ್ಧ - ಉನ್ನತ ಶಿಕ್ಷಣ ಸಚಿವ

Higher Education Minister Dr. M.C. Sudhakar: ಸೋಮವಾರ ನಡೆದ ಗುಲಬರ್ಗಾ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಭಾಗಿಯಾದರು. 

Written by - Zee Kannada News Desk | Last Updated : Jun 19, 2023, 04:00 PM IST
  • ಘಟಿಕೋತ್ಸವ ಭಾಗಿಯಾಗಿ ಪದವಿ ಪ್ರದಾನ ಮಾಡಿದ ಉನ್ನತ ಶಿಕ್ಷಣ ಸಚಿವ
  • ಕಲ್ಯಾಣ‌ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಬದ್ಧ ಎಂದ ಡಾ.ಎಂ.ಸಿ.ಸುಧಾಕರ್
  • ಗುಲಬರ್ಗಾ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ
ಕಲ್ಯಾಣ‌ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಬದ್ಧ - ಉನ್ನತ ಶಿಕ್ಷಣ ಸಚಿವ  title=

ಕಲಬುರಗಿ : ಸೋಮವಾರ ನಡೆದ ಗುಲಬರ್ಗಾ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಭಾಗಿಯಾದರು. ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ  ಕಾರ್ಯಕ್ರಮದಲ್ಲಿ  ಸಾಧಕರಿಗೆ ಗೌರವ ಡಾಕ್ಟರೇಟ್ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 

ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ತಾವು ಸಚಿವರಾದ ನಂತರ ಪ್ರಥಮ‌ ಬಾರಿಗೆ ವಿ.ವಿ.ಘಟಿಕೋತ್ಸವದಲ್ಲಿ ಭಾಗವಹಿಸುವುತ್ತಿರುವುದು ತಮಗೆ ಹೆಮ್ಮೆ‌ ಎನಿಸುತ್ತಿದೆ. ಈ ಭಾಗದ ಶಿಕ್ಷಣ ಪ್ರಗತಿಗೆ 371ಜೆ‌ ಮೀಸಲಾತಿ ಪೂರಕವಾಗಿದೆ ಎಂದರು.

ಇದನ್ನೂ ಓದಿ: Rahul Gandhi : ಎರಡೆರಡು ಸ್ನಾತಕೋತ್ತರ ಪದವಿ, ಮ್ಯಾನೇಜರ್‌ ಆಗಬೇಕಿದ್ದ ರಾಹುಲ್ ಗಾಂಧಿ, ರಾಜಕೀಯ ತಿರುವು ಪಡೆದಿದ್ದೇ ರೋಚಕ

ಗುಲಬರ್ಗಾ ವಿವಿ. ಶೈಕ್ಷಣಿಕ ಪ್ರಗತಿಯಲ್ಲಿ ಉತ್ತಮ‌ ಹೆಜ್ಜೆ ಇಡುತ್ತಿದೆ ಎಂದ‌ ಸಚಿವರು, ಇತ್ತೀಚೆಗೆ ಖಾಸಗಿ‌ ವಿ.ವಿ ಗಳು ಶಿಕ್ಷಣದಲ್ಲಿ ಸ್ಪರ್ಧೆ ನೀಡುತ್ತಿದ್ದು, ಅದನ್ನು ನಮ್ಮ‌ ವಿಶ್ವವಿದ್ಯಾಲಯಗಳು ಸವಾಲಾಗಿ ಸ್ವೀಕರಿಸಿ‌ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ‌ ನೀಡಬೇಕು ಎಂದರು.

 ಆ ವೇಳೆ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ:

ಶಿಲ್ಪಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ‌ ಕಲಬುರಗಿ ಜಿಲ್ಲೆಯ ನಾಡೋಜ ಮಾನಯ್ಯ ಬಡಿಗೇರ್, ಶಿಕ್ಷಣ‌ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗೆ ತಾತ್ಯಾರಾವ ಕಾಂಬ್ಳೆ ಹಾಗೂ 
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಾಧನೆಗೆ ಬೆಂಗಳೂರು ಮೂಲದ ಎನ್.ಎಸ್.ಶ್ರೀನಾಥ ಅವರಿಗೆ ರಾಜ್ಯಪಾಲರು ಮತ್ತು ಮುಖ್ಯ ಅತಿಥಿಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಹೆಚ್ಚಾದ ಮಹಿಳಾ ಪ್ರವಾಸ..ರೊಚ್ಚಿಗೆದ್ದ ಪುರುಷರು;ವಿಡಿಯೋ ವೈರಲ್‌ ! 

ಇದೇ‌‌ ಸಂದರ್ಭದಲ್ಲಿ 26,590 ಸ್ನಾತಕ ಪದವಿ, 4,171 ಸ್ನಾತಕೋತ್ತರ ಪದವಿ ಸೇರಿ 30,761 ಅಭ್ಯರ್ಥಿಗಳಿಗೆ ಪದವಿ ಘೋಷಿಸಿ 129 ಅಭ್ಯರ್ಥಿಗಳಿಗೆ ಪಿ.ಎಚ್.ಡಿ. ಹಾಗೂ 72 ವಿದ್ಯಾರ್ಥಿಗಳಿಗೆ 165 ಚಿನ್ನದ ಪದಕ ಹಾಗೂ 23 ವಿದ್ಯಾರ್ಥಿಗಳಿಗೆ 15 ನಗದು ಚಿನ್ನದ ಬಹುಮಾನ ವಿತರಿಸಲಾಯಿತು.

ಗುಲಬರ್ಗಾ ವಿ.ವಿ ಕುಲಪತಿ ಪ್ರೊ. ದಯಾನಂದ ಅಗಸರ್, ಕುಲಸಚಿವ ಡಾ.ಬಿ.ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ.ಜ್ಯೋತಿ ಧಮ್ಮ‌ಪ್ರಕಾಶ ಸೇರಿದಂತೆ ವಿವಿಧ ಅಕಾಡೆಮಿಕ್, ಸಿಂಡಿಕೇಟ್ ಸದಸ್ಯರು, ವಿವಿಧ‌ ನಿಕಾಯದ ಡೀನ್, ಅಧಿಕಾರಿಗಳು, ಬೋಧಕ-ಬೋಧಕೇತರ ವೃಂದ, ಪದವಿ ಪಡೆದ ವಿದ್ಯಾರ್ಥಿಗಳು ಅವರ ಕುಟುಂಬ ವರ್ಗದವರು ಭಾಗವಹಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News