ಸರ್ಫಿಂಗ್ ಅಪಘಾತದಲ್ಲಿ ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗನಿಗೆ ಗಂಭೀರ ಗಾಯ

ಮ್ಯಾಥ್ಯೂ ಹೇಡನ್ ಈ ಮಾಹಿತಿಯನ್ನು ತನ್ನ Instagram ಖಾತೆಯಲ್ಲಿ ನೀಡಿದರು.

Last Updated : Oct 8, 2018, 02:36 PM IST
ಸರ್ಫಿಂಗ್ ಅಪಘಾತದಲ್ಲಿ ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗನಿಗೆ ಗಂಭೀರ ಗಾಯ title=
PIC: REUTERS

ಸಿಡ್ನಿ: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಈ ಹಿಂದಿನ ಆಸ್ಟ್ರೇಲಿಯನ್ ಓಪನ್ ಬ್ಯಾಟ್ಸ್ಮನ್ ಹೇಡನ್ ತಮ್ಮ ತಲೆಗೆ ಆಗಿರುವ ಗಾಯದ ಫೋಟೋಗಳನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಏಕಕಾಲದಲ್ಲಿ, ಅವರು ಪರಿಸ್ಥಿತಿ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್ನಲ್ಲಿ ಭಾಗಿಯಾಗಿದ್ದ ಹೇಡನ್ ಅವರ ಕುತ್ತಿಗೆ ಭಾಗಕ್ಕೆ ಪೆಟ್ಟಾಗಿದ್ದು, ತಲೆಗೂ ಗಾಯವಾಗಿದೆ. ರಜಾ ದಿನವಾದ್ದರಿಂದ ಕುಟುಂಬದ ಜೊತೆಗೆ ಹೇಡನ್ ಅವರು ಕ್ವೀನ್ಸ್ ಲೆಂಡ್'ಗೆ ತೆರಳಿದ್ದರು. ಸಮುದ್ರದಲ್ಲಿ ಮಗನೊಂದಿಗೆ ಸರ್ಫಿಂಗ್ ಆಟವಾಡುತ್ತಿದ್ದ ವೇಳೆ ಹೇಡನ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಅವರು Instagram ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. 

ಅಪಘಾತದ ಬಳಿಕ ಹೇಡನ್ ಅವರನ್ನು ಕೂಡಲೇ ಸ್ಕ್ಯಾನಿಂಗ್'ಗೆ ಒಳಪಡಿಸಲಾಗಿದ್ದು, ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ವೇಳೆಯಲ್ಲಿ ನನ್ನನ್ನು ಶೀಘ್ರ ಆಸ್ಪತ್ರೆಗೆ ತಲುಪಿಸಿ ಸ್ಕ್ಯಾನಿಂಗ್'ಗೆ ಸಹಕರಿಸಿದ ಬೆನ್ ಸ್ಯೂ ಕೆಲ್ಲಿಗೆ ಹೇಡನ್ ಅವರು ಧನ್ಯವಾದ ಹೇಳಿದ್ದಾರೆ. ಹೇಡನ್ ಈ ಮಾಹಿತಿಯನ್ನು ತನ್ನ Instagram ಖಾತೆಯಲ್ಲಿ ನೀಡಿದ್ದು, ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ಈ ಗಂಭೀರವಾದ ಗಾಯದ ನಂತರ, ಹೇಡನ್ MRI, CT scan ಗಳನ್ನೂ ಮಾಡಿಸಿದ್ದು, ತಾನು ಮತ್ತೆ ಸಮುದ್ರಕ್ಕೆ ಹೋಗಿ ಸರ್ಫಿಂಗ್ ಆಡುತ್ತೇನೆ. ಏಕೆಂದರೆ ಸಮುದ್ರ ನೀಡುತ್ತದೆ ಮತ್ತು ತೆಗೆದುಕೊಳ್ಳುತ್ತದೆ ಎಂದು ಮ್ಯಾಥ್ಯೂ ಹೇಳಿದ್ದಾರೆ. 

2009 ರಲ್ಲಿ ಮ್ಯಾಥ್ಯೂ ಹೇಡನ್ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಅವರು ತಮ್ಮ ವೃತ್ತಿಜೀವನದಲ್ಲಿ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 

ಅವರು 1994 ರಲ್ಲಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಿದರು. 2003 ರ ವರ್ಲ್ಡ್ ಕಪ್ ಮತ್ತು 2007ರ ವಿಶ್ವ ಕಪ್ನಲ್ಲಿ ಅವರು ಆಡಿದ್ದರು. ಅವರು ಆಸ್ಟ್ರೇಲಿಯದ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಆಡಿದ್ದರು.

Trending News