ವಿಶ್ವಕಪ್’ಗೂ ಮುನ್ನ ಕೋಚ್ ಬದಲಾವಣೆ: ಹೊಸ ಕೋಚ್ ಆಗಿ ಈ ಅನುಭವಿ ಆಟಗಾರನ ನೇಮಕ

Royal Challengers Bangalore: ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ಅವರು ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖ್ಯ ಕೋಚ್ ಆಗಿ ಸೇರಿಕೊಳ್ಳಲಿದ್ದಾರೆ.

Written by - Bhavishya Shetty | Last Updated : Sep 21, 2023, 07:44 AM IST
    • ಆರ್‌’ಸಿಬಿ ತಂಡ ಐಪಿಎಲ್‌’ನಲ್ಲಿ ಇದುವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ.
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಖ್ಯ ಕೋಚ್ ಅನ್ನು ಬದಲಾಯಿಸಿದೆ.
    • ಮೊದಲ ಟೂರ್ನಿಯಲ್ಲಿ ಆರ್‌’ಸಿಬಿ ತಂಡ ಸ್ಮೃತಿ ಮಂಧಾನ ನಾಯಕತ್ವದಲ್ಲಿ ಆಡಿತ್ತು
ವಿಶ್ವಕಪ್’ಗೂ ಮುನ್ನ ಕೋಚ್ ಬದಲಾವಣೆ: ಹೊಸ ಕೋಚ್ ಆಗಿ ಈ ಅನುಭವಿ ಆಟಗಾರನ ನೇಮಕ title=
Royal Challengers Bangalore

Royal Challengers Bangalore Women's Premier League: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌’ಸಿಬಿ) ತಂಡ ಐಪಿಎಲ್‌’ನಲ್ಲಿ ಇದುವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ. ಆದರೆ ಆರ್’ಸಿಬಿ ಪಂದ್ಯ ನೀಡುವಷ್ಟು ಕ್ರೇಜ್ ಮತ್ಯಾವುದೇ ಪಂದ್ಯ ನೀಡುವುದಿಲ್ಲ ಎಂಬುದು ಕೂಡ ಸತ್ಯ ಸಂಗತಿ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಐಪಿಎಲ್ 2024ರ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಈ ಬೆನ್ನಲ್ಲೇ RCB ತನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಫ್ರಾಂಚೈಸ್ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ ತಂಡದಿಂದ ಬೇರ್ಪಟ್ಟಿದ್ದಾರೆ.

ಇದನ್ನೂ ಓದಿ: Horoscope: ಇಂದು ಈ ರಾಶಿಯವರಿಗೆ ಲಕ್ಷ್ಮೀಪತಿ ಒಲಿಯುವ ದಿನ: ವೃತ್ತಿಯಲ್ಲಿ ಭಾರೀ ಯಶಸ್ಸು

ಇನ್ನೊಂದೆಡೆ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಮುಂದಿನ ಋತುವಿನ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಖ್ಯ ಕೋಚ್ ಅನ್ನು ಬದಲಾಯಿಸಿದೆ.

ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ಅವರು ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖ್ಯ ಕೋಚ್ ಆಗಿ ಸೇರಿಕೊಳ್ಳಲಿದ್ದಾರೆ. ESPNcricinfo ಪ್ರಕಾರ, ನ್ಯೂಜಿಲೆಂಡ್‌'ನ ಬೆನ್ ಸಾಯರ್ ಬದಲಿಗೆ ವಿಲಿಯಮ್ಸ್ ಅವರನ್ನು ಹೊಸ ಕೋಚ್ ಆಗಿ ನೇಮಕಗೊಳಿಸಲಾಗಿದೆ.

ಮೊದಲ ಟೂರ್ನಿಯಲ್ಲಿ ಆರ್‌’ಸಿಬಿ ತಂಡ ಸ್ಮೃತಿ ಮಂಧಾನ ನಾಯಕತ್ವದಲ್ಲಿ ಆಡಿತ್ತು. ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ, ನ್ಯೂಜಿಲೆಂಡ್‌’ನ ಸೋಫಿ ಡಿವೈನ್ ಮತ್ತು ಇಂಗ್ಲೆಂಡ್‌’ನ ಹೀದರ್ ನೈಟ್ ಅವರಂತಹ ಸ್ಟಾರ್ ಆಟಗಾರರ ಉಪಸ್ಥಿತಿಯ ಹೊರತಾಗಿಯೂ, RCB ಐದು ತಂಡಗಳ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಆರ್‌’ಸಿಬಿ ತಂಡ ಎಂಟು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ದಾಖಲಿಸಲು ಶಕ್ತವಾಯಿತು.

ಇದನ್ನೂ ಓದಿ: 2025ರವರೆಗೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ: ಹಣವೋ ಹಣ, ವೃತ್ತಿಯಲ್ಲಿ ಪ್ರಗತಿ, ಸೋಲಿಲ್ಲದ ಜೀವನ ನೀಡಿ ಸದಾ ಕಾಯುವರು ಬುಧ-ಶನಿ

ಲ್ಯೂಕ್ ವಿಲಿಯಮ್ಸ್ ಅವರ ಶ್ರೇಷ್ಠ ದಾಖಲೆ:

ಲ್ಯೂಕ್ ವಿಲಿಯಮ್ಸ್ ಅವರು ಮಹಿಳೆಯರ ಬಿಗ್ ಬ್ಯಾಷ್ ಲೀಗ್‌’ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್‌’ಗೆ ತರಬೇತುದಾರರಾಗಿದ್ದಾರೆ ಮತ್ತು ಅವರ ಮಾರ್ಗದರ್ಶನದಲ್ಲಿ ತಂಡವು 2022-23 ಋತುವಿನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಜೊತೆಗೆ ಎರಡು ಬಾರಿ ರನ್ನರ್ ಅಪ್ ಆಗಿತ್ತು. ದಿ ಹಂಡ್ರೆಡ್ ವುಮೆನ್ಸ್ ಸ್ಪರ್ಧೆಯಲ್ಲಿ ಸಹಾಯಕ ತರಬೇತುದಾರರಾಗಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News