ಬಂಗಾಳ ಕ್ರಿಕೆಟ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಅವಿಶೇಕ್ ದಾಲ್ಮಿಯಾ ಆಯ್ಕೆ

ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ಹೊಸ ಅಧ್ಯಕ್ಷರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅವಿಶೇಕ್ ದಾಲ್ಮಿಯಾ ಆಯ್ಕೆಯಾಗಿದ್ದಾರೆ.

Last Updated : Feb 5, 2020, 10:39 PM IST
ಬಂಗಾಳ ಕ್ರಿಕೆಟ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಅವಿಶೇಕ್ ದಾಲ್ಮಿಯಾ ಆಯ್ಕೆ title=
Photo courtesy: ANI

ನವದೆಹಲಿ: ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ (ಸಿಎಬಿ) ಹೊಸ ಅಧ್ಯಕ್ಷರಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅವಿಶೇಕ್ ದಾಲ್ಮಿಯಾ ಆಯ್ಕೆಯಾಗಿದ್ದಾರೆ.

ಅವಿಶೇಕ್ ದಾಲ್ಮಿಯಾ ತಮ್ಮ 38 ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಸಿಎಬಿ ಮುಖ್ಯಸ್ಥರಾದರು. ಸೌರವ್ ಗಂಗೂಲಿಯ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ ಅವರು ಸಿಎಬಿಯ ಹೊಸ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಸೌರವ್ ಗಂಗೂಲಿ ಜೊತೆಗೂಡಿ, 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ  ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಯೋಜಿಸುವಲ್ಲಿ ಅವಿಶೇಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಅವಿಶೇಕ್ ಅವರು 2012-13ರಲ್ಲಿ ಭಾರತೀಯ ಫುಟ್ಬಾಲ್ ಅಸೋಸಿಯೇಶನ್‌ನ ಆಡಳಿತ ಮಂಡಳಿಯ ಸದಸ್ಯರಾದ ನಂತರ ಕ್ರೀಡಾ ಆಡಳಿತಕ್ಕೆ ಪ್ರವೇಶಿಸಿದರು.

ಅವರ ತಂದೆ ಜಗಮೋಹನ್ ದಾಲ್ಮಿಯಾ ಅವರನ್ನು ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಭಾರಿ ಬದಲಾವಣೆಗಳನ್ನು ತಂದ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಜಗಮೋಹನ್ ದಾಲ್ಮಿಯಾ 1979 ರಲ್ಲಿ ಬಂಗಾಳದ ಕ್ರಿಕೆಟ್ ಸಂಘದ ಪ್ರತಿನಿಧಿಯಾಗಿ ಬಿಸಿಸಿಐಗೆ ಸೇರಿಕೊಂಡರು ಮತ್ತು 1983 ರಲ್ಲಿ ಬಿಸಿಸಿಐ ಸಂಸ್ಥೆ ಖಜಾಂಚಿಯಾದರು.

Trending News