IND vs NZ: ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಗುರುವಾರ ಟೀಂ ಇಂಡಿಯಾವನ್ನು ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಮಾಡಿದೆ. ಬೆಂಗಳೂರು ಟೆಸ್ಟ್ʼನ ಎರಡನೇ ದಿನ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ನ್ಯೂಜಿಲೆಂಡ್ ಬೌಲರ್‌ಗಳು ಅಲ್ಲೋಲ ಕಲ್ಲೋಲಗೊಳಿಸಿದ್ದಾರೆ.
ಇದನ್ನೂ ಓದಿ: Salman Khan : ಸಲ್ಮಾನ್ ಖಾನ್ ಹತ್ಯೆಗೆ ಪ್ಲಾನ್..!! ಬಿಷ್ಣೋಯ್ ಗ್ಯಾಂಗ್ ಶೂಟರ್ ಬಂಧನ..
ಬೆಂಗಳೂರು ಪಿಚ್‌ನಲ್ಲಿದ್ದ ತೇವಾಂಶ ಮತ್ತು ಮೋಡ ಕವಿದ ವಾತಾವರಣದ ಸಂಪೂರ್ಣ ಲಾಭವನ್ನು ನ್ಯೂಜಿಲೆಂಡ್‌ನ ವೇಗದ ಬೌಲರ್‌ಗಳು ಪಡೆದರು. ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಮತ್ತೊಮ್ಮೆ ಟೀಂ ಇಂಡಿಯಾದ ದೊಡ್ಡ ವಿಲನ್ ಎಂದು ಸಾಬೀತುಪಡಿಸಿದ್ದಾರೆ. ಮ್ಯಾಟ್ ಹೆನ್ರಿ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ಅಪ್ ಅನ್ನು ಛಿದ್ರಗೊಳಿಸಿದ್ದಲ್ಲದೆ, ಬೆಂಗಳೂರಿನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮ್ಯಾಟ್ ಹೆನ್ರಿ ಅತ್ಯಂತ ಸ್ಫೋಟಕ ರೀತಿಯಲ್ಲಿ ಬೌಲಿಂಗ್ ಮಾಡಿದ್ದರು. 13.2 ಓವರ್‌ಗಳಲ್ಲಿ 15 ರನ್ ನೀಡಿ 5 ವಿಕೆಟ್ ಪಡೆದ ಅವರ ಎಕಾನಮಿ ರೇಟ್ 1.10 ಆಗಿತ್ತು.
ಮ್ಯಾಟ್ ಹೆನ್ರಿ ಸರ್ಫರಾಜ್ ಖಾನ್ (0), ರಿಷಬ್ ಪಂತ್ (20), ರವೀಂದ್ರ ಜಡೇಜಾ (0), ರವಿಚಂದ್ರನ್ ಅಶ್ವಿನ್ (0) ಮತ್ತು ಕುಲದೀಪ್ ಯಾದವ್ (2) ಪೆವಿಲಿಯನ್‌ಗೆ ಮರಳುವಂತೆ ಮಾಡಿದ್ದರು.
ಇದನ್ನೂ ಓದಿ: ನಾನು ಹೇಳಿದ್ದೀನಿ ಎನ್ನುವ ಕಾರಣಕ್ಕೆ ನೀವು ನಂಬಬೇಡಿ. ಸತ್ಯ, ಸುಳ್ಳನ್ನು ಪರಾಮರ್ಷಿಸಿ ನೋಡಿ'
ಮ್ಯಾಟ್ ಹೆನ್ರಿ ಹಿನ್ನೆಲೆ:
ಮ್ಯಾಥ್ಯೂ ಜೇಮ್ಸ್ ಹೆನ್ರಿ ನ್ಯೂಜಿಲೆಂಡ್ ವೃತ್ತಿಪರ ಕ್ರಿಕೆಟಿಗರಾಗಿದ್ದಾರೆ. ಅವರು ಕ್ಯಾಂಟರ್ಬರಿ ಮತ್ತು ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಪರ ಆಡುವ ಅವರು ಬಲಗೈ ವೇಗದ ಮಧ್ಯಮ ಬೌಲರ್. ಅಂದಹಾಗೆ ಹೆನ್ರಿ 2019–2021 ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ನ್ಯೂಜಿಲೆಂಡ್ ತಂಡದ ಸದಸ್ಯರಾಗಿದ್ದರು. ಇನ್ನು ಇದೇ ಹೆನ್ರಿ ODI ನಲ್ಲಿ ತನ್ನ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದು ಭಾರತದ ವಿರುದ್ಧವೇ. 31 ಜನವರಿ 2014 ರಂದು ಭಾರತದ ವಿರುದ್ಧದ ನಡೆದ ಐದನೇ ODI ಪಂದ್ಯದಲ್ಲಿ ಹೆನ್ರಿ ಪಾದಾರ್ಪಣೆ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ