ಅದೃಷ್ಟ ಅಂದ್ರೆ ಇದೇ ಅನ್ಸುತ್ತೆ...! ಸ್ಟಂಪ್ ಮಧ್ಯೆಯೇ ಬಾಲ್ ಹೋದ್ರೂ ಔಟಾಗ್ಲಿಲ್ಲ ಬ್ಯಾಟ್ಸ್’ಮನ್- ವಿಡಿಯೋ ನೋಡಿ

Cricket Viral Video: ಈ ವೈರಲ್ ವೀಡಿಯೊದಲ್ಲಿ ಚೆಂಡು ವಿಕೆಟ್ ಮಧ್ಯದಿಂದ ಹೊರಹೋಗುವುದನ್ನು ಕಾಣಬಹುದು. ಆದರೆ ಇದರ ಹೊರತಾಗಿಯೂ ಬ್ಯಾಟ್ಸ್‌ಮನ್ ಔಟಾಗಿಲ್ಲ. ಕ್ರಿಕೆಟ್‌ ಸಂಬಂಧಿಸಿದ ಈ ತಮಾಷೆಯ ವಿಡಿಯೋ, ಸೂರತ್‌ ಮೂಲದ್ದು ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Feb 11, 2024, 05:35 PM IST
    • ಕ್ರಿಕೆಟ್ ಮೈದಾನದಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತವೆ
    • ಈ ವಿಡಿಯೋ ನೋಡಿದ್ರೆ ಅದೃಷ್ಟ ಅಂದ್ರೆ ಇದುವೇ ಅನ್ಸುತ್ತೆ ಅಂತಾ ಹೇಳದೆ ಇರಲಾರಿರಿ.
    • ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲೂ ಇಂತಹ ಸನ್ನಿವೇಶಗಳು ಕಂಡುಬಂದಿವೆ
ಅದೃಷ್ಟ ಅಂದ್ರೆ ಇದೇ ಅನ್ಸುತ್ತೆ...! ಸ್ಟಂಪ್ ಮಧ್ಯೆಯೇ ಬಾಲ್ ಹೋದ್ರೂ ಔಟಾಗ್ಲಿಲ್ಲ ಬ್ಯಾಟ್ಸ್’ಮನ್- ವಿಡಿಯೋ ನೋಡಿ title=
Cricket Viral Video

Cricket Viral Video: ಕ್ರಿಕೆಟ್ ಮೈದಾನದಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ್ರೆ ಅದೃಷ್ಟ ಅಂದ್ರೆ ಇದುವೇ ಅನ್ಸುತ್ತೆ ಅಂತಾ ಹೇಳದೆ ಇರಲಾರಿರಿ.

ಇದನ್ನೂ ಓದಿ: ಅಮಿತ್ ಶಾ ಬರಿಗೈಯಲ್ಲಿ ಬಂದಿದ್ದಾರೆ, ಬಡವರು-ರೈತರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ: ಸಿಎಂ

ವೈರಲ್ ವೀಡಿಯೊದಲ್ಲಿ ಚೆಂಡು ವಿಕೆಟ್ ಮಧ್ಯದಿಂದ ಹೊರಹೋಗುವುದನ್ನು ಕಾಣಬಹುದು. ಆದರೆ ಇದರ ಹೊರತಾಗಿಯೂ ಬ್ಯಾಟ್ಸ್‌ಮನ್ ಔಟಾಗಿಲ್ಲ. ಕ್ರಿಕೆಟ್‌ ಸಂಬಂಧಿಸಿದ ಈ ತಮಾಷೆಯ ವಿಡಿಯೋ, ಸೂರತ್‌ ಮೂಲದ್ದು ಎಂದು ಹೇಳಲಾಗುತ್ತಿದೆ.

ಅಂದಹಾಗೆ ಈ ವಿಡಿಯೋದಲ್ಲಿ ಕಾಣುತ್ತಿರುವಂತೆ, ಬೌಲರ್ ಬ್ಯಾಟ್ಸ್’ಮನ್’ಗೆ ಬಾಲ್ ಎಸೆಯುತ್ತಿದ್ದಂತೆ, ದೊಡ್ಡ ಶಾಟ್ ಹೊಡೆಯಲು ಬ್ಯಾಟರ್ ಮುಂದಾಗುತ್ತಾನೆ. ಆದರೆ ಆ ಬಾಲ್ ಮಿಸ್ ಆಗಿ ಸ್ಟಂಪ್ ಮಧ್ಯದಲ್ಲಿ ಹೋಗುತ್ತದೆ. ಇದನ್ನು ಕಂಡು ಮೈದಾನದಲ್ಲಿದ್ದವರು ಮಾತ್ರವಲ್ಲದೆ, ಇಡೀ ಕ್ರಿಕೆಟ್ ಲೋಕವೇ ಶಾಕ್ ಆಗಿದೆ.

ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲೂ ಇಂತಹ ಸನ್ನಿವೇಶಗಳು ಕಂಡುಬಂದಿವೆ. ಚೆಂಡು ಸ್ಟಂಪ್‌’ಗೆ ಬಿದ್ದರೂ ಬೇಲ್ಸ್ ಬೀಳದೆ ಇರುವುದರಿಂದ ಬ್ಯಾಟ್ಸ್‌’ಮನ್ ಔಟಾಗದೆ ಮೈದಾನದಲ್ಲೇ ಉಳಿಯುತ್ತಾನೆ.

 

ಇದನ್ನೂ ಓದಿ: ನಿತ್ಯ ಮುಂಜಾನೆ ಉಪಹಾರಕ್ಕೂ ಮುನ್ನ ನೆನೆಹಾಕಿದ ಜೀರಿಗೆ ತಿನ್ನಿ: ಈ ಕಾಯಿಲೆಗಳಿಂದ ಸಿಗುತ್ತೆ ರಿಲೀಫ್

ಅಂದಹಾಗೆ ಇಂತಹದ್ದೇ ಘಟನೆ 1997-98ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ನಡೆದಿತ್ತು. ಮುಷ್ತಾಕ್ ಅಹ್ಮದ್ ಅವರು ಆಫ್ರಿಕನ್ ಬ್ಯಾಟ್ಸ್‌ಮನ್‌’ಗೆ ಎಸೆದ ಚೆಂಡು ಸ್ಟಂಪ್ ನಡುವೆಯೇ ಹೋಗಿತ್ತು. ಆದ್ರೆ ಅದೃಷ್ಟ ಹೇಗಿತ್ತೆಂದರೆ ಬೇಲ್ಸ್ ಬೀಳದೆ, ಬ್ಯಾಟ್ಸ್‌ಮನ್ ಔಟ್ ಆಗದೆ ಉಳಿದಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News