BCCI ANNUAL AWARDS: ಜಸ್ಪ್ರೀತ್ ಬೂಮ್ರಾಗೆ ವಿಶೇಷ ಸಮ್ಮಾನ.. ಏನದು?

BCCI: ಭಾರತ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಉತ್ತಮ ಅಂತಾರಾಷ್ಟ್ರೀಯ ಕ್ರಿಕೆಟರ್ ಗೌರವಕ್ಕೆ ಪಾತ್ರರಾಗಲಿದ್ದಾರೆ. ಇವರ ಜೊತೆಗೆ ಮಾಯಾಂಕ್ ಅಗರ್ವಾಲ್, ಚೇತೆಶ್ವರ್ ಪುಜಾರಾ, ಶೇಫಾಲಿ ವರ್ಮಾ ಹಾಗೂ ಪೂನಂ ಯಾದವ್ ಕೂಡ ಗೌರವಕ್ಕೆ ಪಾತ್ರರಾಗಲಿದ್ದಾರೆ.

Last Updated : Jan 12, 2020, 03:34 PM IST
BCCI ANNUAL AWARDS: ಜಸ್ಪ್ರೀತ್ ಬೂಮ್ರಾಗೆ ವಿಶೇಷ ಸಮ್ಮಾನ.. ಏನದು? title=

ಮುಂಬೈ: ಟೀಂ ಇಂಡಿಯಾ ಅತ್ಯುತ್ತಮ ಪೇಸರ್ ಜಸ್ಪ್ರೀತ್ ಬೂಮ್ರಾ ಅವರಿಗೆ BCCI ನ ವಾರ್ಷಿಕ ಸನ್ಮಾನ ಸಮಾರಂಭದಲ್ಲಿ 'ಅತ್ಯುತ್ತಮ ಇಂಟರ್ನ್ಯಾಷನಲ್ ಕ್ರಿಕೆಟರ್' ಗೌರವ ನೀಡುವ ಕುರಿತು ಘೋಷಣೆಯಾಗಲಿದೆ. ಇದರ ಜೊತೆಗೆ 2018-19ನೇ ಸಾಲಿನ ಪಾಲಿ ಉಮರ್ಗೀರ್ ಪ್ರಶಸ್ತಿಯನ್ನು ಸಹ ನೀಡಿ ಅವರನ್ನು ಗೌರವಿಸಲಾಗುತ್ತಿದೆ. ಭಾನುವಾರ ಮುಂಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬೂಮ್ರಾ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಮಾರಂಭದಲ್ಲಿ ವೀರೇಂದ್ರ ಸೆಹ್ವಾಗ್ ಅವರ ವಿಶೇಷ ಲೆಕ್ಚರ್ ಕೂಡ ಹಮ್ಮಿಕೊಳ್ಳಲಾಗಿದೆ. 

ಸದ್ಯ ಬೂಮ್ರಾ ವಿಶ್ವದ ನಂಬರ್ 1 ಏಕದಿನ ಪಂದ್ಯದ ಬೌಲರ್ ಆಗಿದ್ದಾರೆ. 2018ರಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವೇಳೆ ಬೂಮ್ರಾ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಇತ್ತೀಚೆಗಷ್ಟೇ ಅವರು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಐದೈದು ವಿಕೆಟ್ ಕಬಳಿಸಿದ ಏಷ್ಯಾದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

26 ವರ್ಷ ವಯಸ್ಸಿನ ಬೂಮ್ರಾ ಇದುವರೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 62 ವಿಕೆಟ್ ಗಳನ್ನೂ ಕಬಳಿಸಿದ್ದು, ಏಕದಿನದ ಒಟ್ಟು 58 ಪಂದ್ಯಗಳಲ್ಲಿ 103 ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ನಡೆದ ಟಿ20 ಸಿರೀಸ್ ನಲ್ಲಿ ಬೂಮ್ರಾ ಭಾರತ ತಂಡಕ್ಕೆ ಮರಳಿದ್ದರು. ಇದಕ್ಕೂ ಮೊದಲು ಆಗಸ್ಟ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಬೆನ್ನು ನೋವಿನ ಕಾರಣ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು.

ಬುಮ್ರಾ ಸೇರಿದಂತೆ ಇತ್ತೀಚೆಗಷ್ಟೇ ಅರ್ಜುನ ಅವಾರ್ಡ್ ಪಡೆದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಅವರಿಗೆ 'ಅತ್ತ್ಯುತ್ತಮ ಮಹಿಳಾ ಇಂಟರ್ನ್ಯಾಷನಲ್ ಕ್ರಿಕೆಟ್ ಆಟಗಾರ್ತಿ' ಗೌರವ ನೀಡಲಾಗುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹಾಗೂ ಮಾಜಿ ನಾಯಕ ಕೆ. ಶ್ರೀಕಾಂತ್ ಅವರಿಗೆ 'ಕರ್ನಲ್ ಸಿ.ಕೆ. ನಾಯ್ಡು ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ನೀಡಿ ಗೌರವಿಸಲಾಗುತ್ತಿದೆ.

2018-19 ನೇ ಸಾಲಿನಲ್ಲಿ ಅತ್ಯಧಿಕ ರನ್ ದಾಖಲಿಸಿದ ಚೆತೇಶ್ವರ ಪೂಜಾರಾ ಅವರಿಗೆ ದಿಲೀಪ್ ಸರ್ದೇಸಾಯಿ ಅವಾರ್ಡ್ ನೀಡಿ ಗೌರವಿಸಲಾಗುವುದು. ಈ ಅವಧಿಯಲ್ಲಿ ಒಟ್ಟು 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೂಜಾರಾ, ಶೇ.52.07 ಸರಾಸರಿಯೊಂದಿಗೆ 677 ರನ್ ಗಳನ್ನು ಕಲೆಹಾಕಿದ್ದಾರೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶಗಳ ವಿರುದ್ಧ ನಡೆದ ಪಂದ್ಯಗಳಲ್ಲಿ ದ್ವೀಶತಕ ಸಿಡಿಸಿದ ಭಾರತೀಯ ತಂಡದ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಅವರಿಗೆ 'ಅತ್ಯುತ್ತಮ ಇಂಟರ್ನ್ಯಾಷನಲ್ ಟೆಸ್ಟ್ ಡೆಬ್ಯೂ' ಅವಾರ್ಡ್ ನೀಡಲಾಗುತ್ತಿದೆ. ಇನ್ನೊಂದೆಡೆ ಮಹಿಳೆಯರ ವಿಭಾಗದಲ್ಲಿ ಇದೆ ಪ್ರಶಸ್ತಿಯನ್ನು ಶೇಫಾಲಿ ವರ್ಮಾ ಅವರಿಗೆ ನೀಡಲಾಗುತ್ತಿದೆ. ಮಾಯಾಂಕ್ ಅವರು ಒಟ್ಟು 9 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು ಮೂರು ಶತಕ, ಮೂರು ಅರ್ಧ ಶತಕಗಳ ಸಹಾಯದಿಂದ ಶೇ. 67.07 ಸರಾಸರಿಯಂತೆ 872 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಷೆಫಾಲಿ, 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 222 ರನ್ ಗಳನ್ನು ಗಳಿಸಿದ್ದಾರೆ.

Trending News