ಶೀಘ್ರದಲ್ಲೇ ODI ನಾಯಕತ್ವದ ಬದಲಾವಣೆಗೆ ಮುಂದಾಯಿತೇ ಬಿಸಿಸಿಐ..?

ಭಾರತದ ನೂತನ T20I ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕಗೊಂಡ ಬೆನ್ನಲ್ಲೇ, ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವದ ಭವಿಷ್ಯದ ಬಗ್ಗೆ ವಿರಾಟ್ ಕೊಹ್ಲಿಯೊಂದಿಗೆ ಬಿಸಿಸಿಐ ಉನ್ನತ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

Written by - Zee Kannada News Desk | Last Updated : Nov 11, 2021, 09:11 PM IST
  • ಭಾರತದ ನೂತನ T20I ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕಗೊಂಡ ಬೆನ್ನಲ್ಲೇ, ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವದ ಭವಿಷ್ಯದ ಬಗ್ಗೆ ವಿರಾಟ್ ಕೊಹ್ಲಿಯೊಂದಿಗೆ ಬಿಸಿಸಿಐ ಉನ್ನತ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಶೀಘ್ರದಲ್ಲೇ ODI ನಾಯಕತ್ವದ ಬದಲಾವಣೆಗೆ ಮುಂದಾಯಿತೇ ಬಿಸಿಸಿಐ..? title=
file photo

ನವದೆಹಲಿ: ಭಾರತದ ನೂತನ T20I ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕಗೊಂಡ ಬೆನ್ನಲ್ಲೇ, ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವದ ಭವಿಷ್ಯದ ಬಗ್ಗೆ ವಿರಾಟ್ ಕೊಹ್ಲಿಯೊಂದಿಗೆ ಬಿಸಿಸಿಐ ಉನ್ನತ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ- Gautam Gambhir: ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಭಾರತಕ್ಕೆ ಐಸಿಸಿ ಪ್ರಶಸ್ತಿ ಗೆಲ್ಲುತ್ತಾರೆ- ಗೌತಮ್ ಗಂಭೀರ್

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕತ್ವದ ಹೊರೆಯಿಂದ ಕೊಹ್ಲಿ (Virat Kohli) ಯನ್ನು ಮುಕ್ತಗೊಳಿಸಲು ಮಂಡಳಿಯು ಬಯಸುತ್ತದೆ ಎಂದು BCCI ಯ ಮೂಲಗಳು ತಿಳಿಸಿವೆ, ಇದರಿಂದಾಗಿ ಅವರು ತಮ್ಮ ಬ್ಯಾಟಿಂಗ್‌ನ ಮೇಲೆ ಕೇಂದ್ರೀಕರಿಸಬಹುದು ಮತ್ತು ಅವರು ಎಂದಿನ ಫಾರ್ಮ್‌ಗೆ ಮರಳಬಹುದು ಎನ್ನಲಾಗಿದೆ.ಜನವರಿ 11, 2022 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿಪಕ್ಷೀಯ ಸರಣಿಯ ನಂತರ ಟೀಮ್ ಇಂಡಿಯಾದ ODI ನಾಯಕತ್ವದಲ್ಲಿ ಬದಲಾವಣೆಗಳು ಆಗಬಹುದು ಎಂದು ಮೂಲಗಳು ತಿಳಿಸಿವೆ.ರೋಹಿತ್ ಶರ್ಮಾ 50-ಓವರ್ ಸ್ವರೂಪದಲ್ಲಿಯೂ ನಾಯಕತ್ವ ವಹಿಸಲಿದ್ದಾರೆ. ಇನ್ನೂ ಉಪನಾಯಕನಾಗಿ ಕೆ.ಎಲ್ ರಾಹುಲ್ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ : ಟಿಪ್ಪು ಮತಾಂಧ ಎನ್ನುವ ಬಿಜೆಪಿಯವರೇ ಟಿಪ್ಪು ಜಯಂತಿ ಮಾಡಿದ್ರು: ಸಿದ್ದರಾಮಯ್ಯ

ಮುಂಬರುವ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಗೆ ಸಂಬಂಧಿಸಿದಂತೆ, ನವೆಂಬರ್ 25 ರಿಂದ ಕಾನ್ಪುರದಲ್ಲಿ ಪ್ರಾರಂಭವಾಗುವ 1 ನೇ ಟೆಸ್ಟ್‌ಗೆ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕೊಹ್ಲಿಯ ಅನುಪಸ್ಥಿತಿಯಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.ಎರಡನೇ ಟೆಸ್ಟ್ ಪಂದ್ಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್ ಸರಣಿಯ ಆರಂಭದ ನಡುವೆ ಬಹಳ ಕಡಿಮೆ ಅಂತರವಿರುವುದರಿಂದ ಕೀವಿಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ- ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ವಿರುದ್ಧ ಇಡಿಯಿಂದ ಸಮನ್ಸ್ ಜಾರಿ

ನವೆಂಬರ್ 17 ರಂದು ಜೈಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಗೆ ಬಿಸಿಸಿಐ 16 ಸದಸ್ಯರ ತಂಡವನ್ನು ಮಂಗಳವಾರ ಪ್ರಕಟಿಸಿದ್ದರಿಂದ ರೋಹಿತ್ ಶರ್ಮಾ ಅವರನ್ನು T20I ತಂಡದ ನಾಯಕರನ್ನಾಗಿ ನೇಮಿಸಲಾಯಿತು.ಭಾರತವು ದಕ್ಷಿಣ ಆಫ್ರಿಕಾದಲ್ಲಿ ಡಿಸೆಂಬರ್ 17 ರಿಂದ ಮೂರು ಟೆಸ್ಟ್ ಪಂದ್ಯಗಳನ್ನು ಆಡಲು ನಿರ್ಧರಿಸಿದೆ. ಅದರ ನಂತರ ಮೂರು ಪಂದ್ಯಗಳ ODI ಮತ್ತು ನಾಲ್ಕು ಪಂದ್ಯಗಳ T20I ಸರಣಿಯು ನಡೆಯಲಿದೆ.

ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದಿಂದ ಹಿಂದೆ ಸರಿದ ನಂತರ ಜನವರಿ 2017 ರಲ್ಲಿ ಕೊಹ್ಲಿ ಅವರನ್ನು ಸೀಮಿತ ಓವರ್‌ಗಳ ತಂಡಗಳ ನಾಯಕರನ್ನಾಗಿ ನೇಮಿಸಲಾಯಿತು. ಅವರು 2015 ರ ಆರಂಭದಿಂದ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಮತ್ತು 2019 ರ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ಗೆ ಭಾರತವನ್ನು ಕೊಹ್ಲಿ  ಕೊಂಡೊಯ್ದಿದ್ದರು, ಆದರೆ ನಾಯಕನಾಗಿ ಜಾಗತಿಕ ಪಂದ್ಯಾವಳಿಗಳಲ್ಲಿ ಅವರು ಗೆಲ್ಲಲು ವಿಫಲರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News