ಬೆಂಗಳೂರು: ಟಿಪ್ಪು ಸುಲ್ತಾನ್(Tippu Sultan) ಮತಾಂಧ ಎನ್ನುವ ಬಿಜೆಪಿಯವರೇ ಟಿಪ್ಪು ಜಯಂತಿ ಮಾಡಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ಅಪ್ರತಿಮ ಸ್ವಾತಂತ್ರ್ಯ ಸೇನಾನಿ, ದಕ್ಷ ಆಡಳಿತಗಾರ ಟಿಪ್ಪು ಜಯಂತಿ ಮಾಡಲು ಹೆಮ್ಮೆ ಪಡುತ್ತೇನೆ’ ಎಂದು ಹೇಳಿದ್ದಾರೆ.
‘ಟಿಪ್ಪು ಬ್ರಿಟಿಷರ ವಿರುದ್ದ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದರು. ಅವರ ಜಯಂತಿಗೆ ವ್ಯಥೆ ಪಡುವುದಿಲ್ಲ. ಅಲ್ಪಸಂಖ್ಯಾತರನ್ನು ಆರ್‌ಎಸ್‌ಎಸ್ ವಿರೋಧ ಮಾಡುತ್ತಿದೆ. ಇಂದು ಅನೇಕರು ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗ ಜಯಂತಿ(Tipu Jayanti celebrations) ಆಚರಣೆ ಮಾಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರದವರು ನಿಲ್ಲಿಸಿಬಿಟ್ಟರು. ಆದರೆ ಈ ಹಿಂದೆ ಬಿಜೆಪಿ ನಾಯಕರು ಕೂಡ ಟಿಪ್ಪು ಜಯಂತಿ ಮಾಡಿದ್ದರು. ಕೆಜಿಪಿ ಪಕ್ಷ ಕಟ್ಟಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟಿಪ್ಪು ಪೇಟ, ಉಡುಪು ಮತ್ತು ಖಡ್ಗ ಹಿಡಿದು ಪೋಸು ನೀಡಿದ್ದರು. ಅವರ ಜೊತೆ ಸಚಿವ ಆರ್.ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರೂ ಇದ್ದರು’ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಆತ್ಮವಂಚಕ ದಲಿತ ವಿರೋಧಿ ಸಿದ್ದರಾಮಯ್ಯರ ಮಾತು ನಂಬಿಕೆಗೆ ಯೋಗ್ಯವೇ?: ಬಿಜೆಪಿ
ಅಪ್ರತಿಮ
ಸ್ವಾತಂತ್ರ್ಯ ಸೇನಾನಿ,
ದಕ್ಷ ಆಡಳಿತಗಾರ
ಮತ್ತು
ಜಾತ್ಯತೀತನಾಗಿ ಸರ್ವರನ್ನೂ ಪೊರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ.ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ
ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ.ನಾಡ ಬಂಧುಗಳಿಗೆ
ಟಿಪ್ಪು ಜಯಂತಿಯ ಶುಭಾಶಯಗಳು.#TippuJayanthi #ಟಿಪ್ಪುಜಯಂತಿ pic.twitter.com/hlDYFnvPFc— Siddaramaiah (@siddaramaiah) November 10, 2021
ಬಿ.ಎಸ್.ಯಡಿಯೂರಪ್ಪ(BS Yediyurappa), ಆರ್.ಅಶೋಕ್, ಜಗದೀಶ್ ಶೆಟ್ಟರ್ ಅವರು ಟಿಪ್ಪು ದಿರಿಸು ಧರಿಸಿ, ಕೈಯಲ್ಲಿ ಖಡ್ಗ ಹಿಡಿದಿರುವ ಫೋಟೋ ಇದೆ ತೋರಿಸಬೇಕಾ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನಿಸಿದರು. ‘ಟಿಪ್ಪು ಜಯಂತಿಗೆ ಭಾರೀ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ತಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ಟಿಪ್ಪುವನ್ನು ವೈಭವಿಕರಿಸಿ ‘ಟಿಪ್ಪು ಸುಲ್ತಾನ್–ಎ ಕ್ರುಸೇಡರ್ ಫಾರ್ ಚೇಂಜ್’ ಕೃತಿ(Tipu Sultan: A Crusader for Change)ಯನ್ನು ಮುದ್ರಿಸಿತ್ತು. ಪ್ರಸಿದ್ಧ ಇತಿಹಾಸಕಾರ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಬಿ.ಶೇಖ್ ಅಲಿ ಬರೆದಿರುವ ಈ ಕೃತಿಗೆ ಜಗದೀಶ್ ಶೆಟ್ಟರ್ ಅವರೇ ಮುನ್ನುಡಿ ಬರೆದು ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನೆಂದು ಹೊಗಳಿದ್ದಾರೆ’ ಅಂತಾ ಸಿದ್ದರಾಮಯ್ಯ ಹೇಳಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ್(Ram Nath Kovind) ಅವರು ಕೂಡ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡುವಾಗ ಟಿಪ್ಪು ಹೆಸರನ್ನು ಉಲ್ಲೇಖಿಸಿ ದೇಶಪ್ರೇಮಿ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಏನು ಉತ್ತರ ಹೇಳುತ್ತಾರೆ..? ಬಿಜೆಪಿಯವರಿಗೆ ಒಂದು ನಾಲಿಗೆ ಇಲ್ಲ, ನಮಗೆ ಒಂದೇ ನಾಲಿಗೆ ಇದ್ದರೆ ಅವರಿಗೆ ಎರಡೆರಡು ನಾಲಿಗೆ ಇವೆ. ನಾಳು ಏನು ಹೇಳುತ್ತೆವೆಯೋ ಅದಕ್ಕೆ ಬದ್ಧವಾಗಿರುತ್ತೇವೆ. ಜಾತ್ಯತೀತನಾಗಿ ಸರ್ವರನ್ನೂ ಪೊರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ. ರಾಜಕೀಯ ಪ್ರೇರಿತ ಅಪಪ್ರಚಾರಕ್ಕೆ ಕಿವಿಗೊಡದೆ ನೈಜ ಇತಿಹಾಸದ ಪುಟಗಳಿಂದ ಟಿಪ್ಪುವನ್ನು ಅರಿಯೋಣ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗದ ಅನುಮತಿ ಬೇಕಾಗಿದೆ: ಬಸವರಾಜ್ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ