ಯೂಸುಫ್ ಪಠಾಣ್ ಗೆ 5 ತಿಂಗಳ ನಿಷೇಧ ಹೇರಿದ ಬಿಸಿಸಿಐ!

ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ಬರೋಡಾ ಆಲ್ ರೌಂಡರ್ ಆಲ್ರೌಂಡರ್ ಯೂಸುಫ್ ಪಠಾಣ್ ಅವರನ್ನು ಎಲ್ಲಾ ಕ್ರಿಕೆಟ್ ಪಂದ್ಯಗಳಿಂದ ಮುಂದಿನ 5 ತಿಂಗಳವರೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧಿಸಿದೆ.   

Last Updated : Jan 9, 2018, 03:50 PM IST
ಯೂಸುಫ್ ಪಠಾಣ್ ಗೆ 5 ತಿಂಗಳ ನಿಷೇಧ ಹೇರಿದ ಬಿಸಿಸಿಐ! title=

ನವ ದೆಹಲಿ : ಉದ್ದೀಪನ ಮದ್ದು ಸೇವನೆ ಆರೋಪದ ಮೇಲೆ ಬರೋಡಾ ಆಲ್ ರೌಂಡರ್ ಆಲ್ರೌಂಡರ್ ಯೂಸುಫ್ ಪಠಾಣ್ ಅವರನ್ನು ಎಲ್ಲಾ ಕ್ರಿಕೆಟ್ ಪಂದ್ಯಗಳಿಂದ ಮುಂದಿನ 5 ತಿಂಗಳವರೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧಿಸಿದೆ. 

ಅವರು "ನಿಷೇಧಿತ ವಸ್ತುವನ್ನು ಅಜಾಗರೂಕತೆಯಿಂದ ಸೇವಿಸಿದ್ದು, ಈ ಅಂಶವು ಸಾಮಾನ್ಯವಾಗಿ ಕೆಮ್ಮು ಸಿರಪ್ಗಳಲ್ಲಿ ಕಂಡುಬರುತ್ತದೆ" ಎಂದು ಬಿಸಿಸಿಐ ಪ್ರಭಾರ ಗೌರವ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 16ರಂದು ನವದೆಹಲಿಯಲ್ಲಿ ನಡೆದ ದೇಶೀಯ ಟಿ 20 ಸ್ಪರ್ಧೆಯಲ್ಲಿ ಬಿಸಿಸಿಐನ ಉದ್ದೀಪನ ಪರೀಕ್ಷೆ ಭಾಗವಾಗಿ ಪಠಾಣ್ ಮೂತ್ರದ ಮಾದರಿಯನ್ನು ನೀಡಿದ್ದರು.

"ಅವರ ಮಾದರಿಯನ್ನು ಪರೀಕ್ಷಿಸಲಾಗಿ ಅದರಲ್ಲಿ ಟರ್ಬ್ಯುಟಲೈನ್ ಇರುವುದು ಕಂಡುಬಂದಿತ್ತು. ಇದು  ಒಳಗೊಂಡಿರುವಂತೆ ಕಂಡುಬಂದಿದೆ, ಇದು ವರ್ಲ್ಡ್ ಆಂಟಿ ಡೋಪಿಂಗ್ ಏಜೆನ್ಸಿ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಈ ವಸ್ತುವೂ ಒಂದಾಗಿದೆ" ಎಂದು ಚೌಧರಿ ಹೇಳಿದ್ದಾರೆ.

ಇನ್ನು ಈ ಸಂಬಂಧ ಬಿಸಿಸಿಐಗೆ ಕ್ರಿಕೆಟಿಗ ಯೂಸುಫ್ ಪಠಾಣ್ ಸ್ಪಷ್ಟನೆ ಕೂಡ ನೀಡಿದ್ದು, ಈ ಹಿಂದೆ ಆರೋಗ್ಯ ಸಂಬಂಧಿ ಕಾರಣಗಳಿಂದಾಗಿ ತಾವು ಕೆಲ ಔಷಧಿಗಳನ್ನು ತೆಗೆದುಕೊಂಡಿದ್ದೆ. ಆದರೆ ಅದರಲ್ಲಿ ಒಂದು ಔಷಧಿ ವೈದ್ಯರು ಸೂಚಿಸಿದ್ದ ಸಂಸ್ಥೆಯ ಔಷಧಿ ದೊರೆತಿರಲಿಲ್ಲ. ಆರೋಗ್ಯದ ವಿಚಾರವಾಗಿ ಅನಿವಾರ್ಯವಾಗಿ ಬೇರೊಂದು ಸಂಸ್ಥೆಯ ಔಷಧಿ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ತಾನು ಉದ್ದೇಶಪೂರ್ವಕವಾಗಿ ಈ ಔಷಧಿ ಸೇವನೆ ಮಾಡಿಲ್ಲ ಎಂದು ಹೇಳಿದ್ದಾರೆ. ಯೂಸುಫ್ ಹೇಳಿಕೆಯನ್ನು ಬಿಸಿಸಿಐ ಸ್ವೀಕರಿಸಿದೆ.

ಬಿಸಿಸಿಐ ಕಳೆದ ಆಗಸ್ಟ್ 15ರಂದು ಯೂಸುಫ್ ಮೇಲೆ ನಿಷೇಧ ಹೇರಿದ್ದು, ಇದೀಗ 5 ತಿಂಗಳ ನಿಷೇಧ ಖಾಯಂ ಮಾಡಿರುವುದರಿಂದ ಇದೇ ಜನವರಿ 14, 2018ರ ಮಧ್ಯರಾತ್ರಿ ಅವರ ಅಮಾನತು ಶಿಕ್ಷೆ ಪೂರ್ಣವಾಗಲಿದೆ. ಹೀಗಾಗಿ ಯೂಸುಫ್ ಮುಂಬರುವ ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.

Trending News