Bindyarani Devi : ಕಾಮನ್‌ವೆಲ್ತ್ ಕ್ರೀಡಾಕೂಟದ ಎರಡನೇ ದಿನ ಭಾರತೀಯ ಕ್ರೀಡಾಪಟುಗಳು ಅತ್ಯಂತ ಯಶಸ್ವಿಯಾಗಿ ಮುನ್ನಡೆ ಸಾಧಿಸಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ದೇಶದ ವೇಟ್‌ಲಿಫ್ಟರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವೇಟ್‌ಲಿಫ್ಟರ್ ಬಿಂದಿಯಾರಾಣಿ ದೇವಿ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ದೇಶಕ್ಕೆ ನಾಲ್ಕನೇ ಪದಕವನ್ನು ಗೆದ್ದು ಬಿಗಿದ್ದರೆ. 55 ಕೆಜಿ ತೂಕ ವಿಭಾಗದಲ್ಲಿ ಅವರು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈಗ ಭಾರತ ವೇಟ್ ಲಿಫ್ಟಿಂಗ್ ನಲ್ಲಿ ಮಾತ್ರ ನಾಲ್ಕು ಪದಕಗಳನ್ನು ಗೆದ್ದಿರುವುದು ವಿಶೇಷವಾಗಿದೆ.
ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಬಿಂದಿಯಾರಾಣಿ
ಭಾರತದ ವೇಟ್ ಲಿಫ್ಟರ್ ಬಿಂದಿಯಾರಾಣಿ ದೇವಿ ದೇಶಕ್ಕೆ ನಾಲ್ಕನೇ ಪದಕ ತಂದುಕೊಟ್ಟಿದ್ದಾರೆ. ಸ್ನ್ಯಾಚ್‌ನಲ್ಲಿ 86 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ 55 ಕೆಜಿ ವಿಭಾಗದಲ್ಲಿ 116 ಕೆಜಿ ಭಾರ ಎತ್ತಿದರು. ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇವರ ನೈಜೀರಿಯಾದ ಆದಿಜತ್ ಒಲರಿನೊಯ್ ಚಿನ್ನದ ಪದಕ ಗೆದ್ದರು. ಒಲಾರಿನೊಯ್ ಒಟ್ಟು 203 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದು ಗೇಮ್ಸ್ ದಾಖಲೆ ನಿರ್ಮಿಸಿದರು. ಇಂಗ್ಲೆಂಡ್‌ಗೆ ಕಂಚಿನ ಪದಕ ಲಭಿಸಿದೆ.
SUPER SENSATIONAL SILVER FOR BINDYARANI 🔥🔥
Bindyarani Devi 🏋♀️wins 🥈in the Women's 55kg with a total lift of 202kg, after an amazing come back 💪💪
Snatch - 86 kg (PB & Equalling NR)
Clean & Jerk - 116 kg (GR & NR)With this 🇮🇳 bags 4️⃣🏅 @birminghamcg22#Cheer4India pic.twitter.com/iFbPHpnBmK
— SAI Media (@Media_SAI) July 30, 2022
ಇದನ್ನೂ ಓದಿ : ಶೂಟಿಂಗ್ ನಲ್ಲಿ 4 ಚಿನ್ನ, 2 ಕಂಚಿನ ಪದಕ ಗೆದ್ದ ತಮಿಳು ನಟ ಅಜಿತ್
1 ಕೆಜಿ ಯಿಂದ ಬಿಂದಿಯಾರಾಣಿ ಕೈ ತಪ್ಪಿದ ಚಿನ್ನ
ಬಿಂದಿಯಾರಾಣಿ ಅದ್ಭುತ ಆಟದ ಪ್ರದರ್ಶನ ತೋರಿದರು. ಅವರು ಸ್ನ್ಯಾಚ್‌ನಲ್ಲಿ 86 ಕೆಜಿ ಎತ್ತುವ ಮೂಲಕ ಅವರು ಮೂರನೇ ಸ್ಥಾನದಲ್ಲಿದ್ದರು, ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ, ಅವರು ತಮ್ಮ ಆಟವನ್ನು ಸುಧಾರಿಸಿ ಬೆಳ್ಳಿ ಪದಕವನ್ನು ಗೆದ್ದರು. ಒಂದು ಕಿಲೋ ಹೆಚ್ಚು ಎತ್ತಿದ್ದರೆ ಬಿಂದಿಯಾರಾಣಿ ಚಿನ್ನ ಗೆಲ್ಲುತ್ತಿದ್ದರು. ಬಿಂದಿಯಾರಾಣಿ ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದ್ದಿದ್ದರು.
ಇಲ್ಲಿಯವರಿಗೆ ಭಾರತ ನಾಲ್ಕು ಪದಕ
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದೆ. ಇವುಗಳಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ, ಗುರುರಾಜ ಪೂಜಾರಿ ಕಂಚಿನ ಪದಕ, ಸಂಕೇತ್ ಮಹದೇವ್ ಬೆಳ್ಳಿ ಪದಕ ಹಾಗೂ ಬಿಂದಿಯಾರಾಣಿ ಬೆಳ್ಳಿ ಪದಕ ಗೆದ್ದಿದ್ದಾರೆ. ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಉತ್ತಮ ಸಾಧನೆ ತೋರಿದೆ.
ಚಿನ್ನ ಗೆದ್ದ ಮೀರಾಬಾಯಿ ಚಾನು
ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ದೇಶವನ್ನು ನಿರಾಸೆಗೊಳಿಸಿಲ್ಲ. 49 ಕೆಜಿ ತೂಕ ವಿಭಾಗದಲ್ಲಿ ಚಿನ್ನ ಗೆದಿದ್ದರೆ. ಮೀರಾಬಾಯಿ ಚಾನು ಸಂಪೂರ್ಣ ಏಕಪಕ್ಷೀಯ ರೀತಿಯಲ್ಲಿ ಚಿನ್ನದ ಪದಕವನ್ನು ವಶಪಡಿಸಿಕೊಂಡರು. ಮೀರಾಬಾಯಿ ಸ್ನ್ಯಾಚ್‌ನಲ್ಲಿ 88 ಕೆಜಿ ಎತ್ತಿದರು. ಅದೇ ವೇಳೆ ಕ್ಲೀನ್ ಅಂಡ್ ಜರ್ಕ್ ನಲ್ಲಿ ಒಟ್ಟು 113 ಕೆ.ಜಿ. ಈ ಮೂಲಕ ಅವರ ಒಟ್ಟು ಸ್ಕೋರ್ 201 ಆಗಿತ್ತು. ಅಷ್ಟೇ ಅಲ್ಲ ಕಾಮನ್ ವೆಲ್ತ್ ದಾಖಲೆಯೊಂದಿಗೆ ಮೀರಾಬಾಯಿ ಈ ಚಿನ್ನದ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ : Commonwealth Games 2022: ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಖಾತೆ ತೆರೆದ ಮೀರಾಬಾಯಿ ಚಾನು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.