One Over 6 Wickets: 6 ಬಾಲ್ ಗಳಲ್ಲಿ 6 ವಿಕೆಟ್, ಬೌಲರ್ ಯಾರು ಗೊತ್ತಾ?

Cricket Latest News: ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಋತುರಾಜ್ ಗಾಯಕವಾದ ಒಂದೇ ಓವರ್ ನಲ್ಲಿ 7 ಸಿಕ್ಸರ್ ಬಾರಿಸಿ ಇತಿಹಾಸ ಬರೆದಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಆದರೆ, ಇದೀಗ ಬೌಲರ್ ಒಬ್ಬರು ಒಂದೇ ಓವರ್ ನಲ್ಲಿ 6 ವಿಕೆಟ್ ಪಡೆದು ಅದ್ಭುತ ಸಾಧನೆ ಮೆರೆದಿದ್ದಾರೆ.  

Written by - Nitin Tabib | Last Updated : Dec 2, 2022, 04:50 PM IST
  • ಮಹಾರಾಷ್ಟ್ರದ ಪನ್ವೇಲ್ ಹಲವು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವ ಒಂದು ನಗರವಾಗಿದೆ.
  • ಉಸ್ಲಾರಿ ಖುರ್ದ್‌ನಲ್ಲಿ ನಡೆಯುತ್ತಿರುವ ಗಾಂವದೇವಿ ಉಸಾರಯಿ ಚಕ್ಸ್ 2022 ಪಂದ್ಯಾವಳಿಯಲ್ಲಿ, ಲಕ್ಷ್ಮಣ್ ಎಂಬ ಈ ಬೌಲರ್
  • ಒಂದೇ ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಡೊಂಡ್ರಾಚಾಪಡಾ ಮತ್ತು ಗಾವದೇವಿ ಪೇಠ ನಡುವೆ ಈ ಪಂದ್ಯ ನಡೆಯುತ್ತಿತ್ತು.
One Over 6 Wickets: 6 ಬಾಲ್ ಗಳಲ್ಲಿ 6 ವಿಕೆಟ್, ಬೌಲರ್ ಯಾರು ಗೊತ್ತಾ?  title=
Six Balls Six Wickets

6 Wickets In A Over: ಕೆಲವು ದಿನಗಳ ಹಿಂದೆಯಷ್ಟೇ ವಿಜಯ್ ಹಜಾರೆ ಟ್ರೋಫಿ 2022 ರ ಕ್ವಾರ್ಟರ್‌ಫೈನಲ್‌ನಲ್ಲಿ ತಮಿಳುನಾಡಿನ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಒಂದು ಓವರ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಇತಿಹಾಸ ಬರೆದಿರುವ ಸಂಗತಿ ಇದುವರೆಗೆ ಸ್ಮೃತಿ ಪಟಲದಲ್ಲಿರುವಾಗಲಿದೆ. ಇದೀಗ  ಬೌಲರ್ ಒಬ್ಬರು ಒಂದೇ ಓವರ್ ನಲ್ಲಿ ಅಂದರೆ ಆರು ಎಸೆತಗಳಲ್ಲಿ ಆರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಗೆ ಅಟ್ಟಿ ಸಾಧನೆಯನ್ನು ಮಾಡಿದ್ದಾರೆ . ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲರ್‌ಯೊಬ್ಬರು ಒಂದೇ ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಉರುಳಿಸಿದಂತಹ ಸಾಧನೆ ಇದುವರೆಗೆ ಯಾರು ಮಾಡಿಲ್ಲ, ಆದರೆ ಈ ದಾಖಲೆ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ನಡೆಯುತ್ತಿರುವ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿರ್ಮಾಣಗೊಂಡಿದೆ. 

ಇದನ್ನೂ ಓದಿ-Dwayne Bravo Retirement : ಐಪಿಎಲ್‌ಗೆ ಗುಡ್ ಬೈ ಹೇಳಿದ ಡ್ವೇನ್ ಬ್ರಾವೋ..!

ಮೊದಲ ಓವರ್ ನಲ್ಲೇ 6 ಬ್ಯಾಟ್ಸ್ ಮನ್ ಪೆವಿಲಿಯನ್ ಗೆ ಕಳುಹಿಸಿದ ಬೌಲರ್
ಮಹಾರಾಷ್ಟ್ರದ ಪನ್ವೇಲ್ ಹಲವು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವ ಒಂದು ನಗರವಾಗಿದೆ. ಉಸ್ಲಾರಿ ಖುರ್ದ್‌ನಲ್ಲಿ ನಡೆಯುತ್ತಿರುವ ಗಾಂವದೇವಿ ಉಸಾರಯಿ ಚಕ್ಸ್ 2022 ಪಂದ್ಯಾವಳಿಯಲ್ಲಿ, ಲಕ್ಷ್ಮಣ್ ಎಂಬ ಈ ಬೌಲರ್ ಒಂದೇ ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಡೊಂಡ್ರಾಚಾಪಡಾ ಮತ್ತು ಗಾವದೇವಿ ಪೇಠ ನಡುವೆ ಈ ಪಂದ್ಯ ನಡೆಯುತ್ತಿತ್ತು. ಡೊಂಡ್ರಾಚಾಪಡಾ ಗೆಲುವಿಗೆ 43 ರನ್‌ಗಳ ಅಗತ್ಯವಿತ್ತು. ಆದರೆ ಮೊದಲ ಓವರ್‌ನಲ್ಲಿಯೇ ತಂಡದ ಆರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದ್ದಾರೆ. ಈ ಓವರ್‌ನಲ್ಲಿ ಲಕ್ಷ್ಮಣ್ ಒಂದೇ ಒಂದು ರನ್ ನೀಡಿಲ್ಲ ಅಥವಾ ಯಾವುದೇ ಹೆಚ್ಚುವರಿ ಬೌಲ್ ಎಸೆದಿಲ್ಲ ಎಂಬುದು ಇಲ್ಲಿ ವಿಶೇಷವಾಗಿದೆ.

ಇದನ್ನೂ ಓದಿ-Ricky Ponting : ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್‌ ರಿಕಿ ಪಾಂಟಿಂಗ್‌ಗೆ ಹೃದಯಾಘಾತ!

ಮಲಿಂಗಾ ಹಾಗೂ ಚಮಿಂಡಾ ವಾಸ್ 4 ವಿಕೆಟ್ ಪಡೆದಿದ್ದಾರೆ
ಇದಕ್ಕೂ ಮೊದಲು 2017ರಲ್ಲಿ ಗೋಲ್ಡನ್ ಪಾಯಿಂಟ್ ಕ್ರಿಕೆಟ್ ಕ್ಲಬ್ ಪರ ಆಟವಾದಿದ್ದ ಎಲೆಡ್ ಕೈರೆ, 6 ಬಾಲ್ ಗಳಲ್ಲಿ 6 ವಿಕೆಟ್ ಪಡೆದುಕೊಂಡಿದ್ದರು. ಆ ಮ್ಯಾಚ್ ನಲ್ಲಿ ಅವರು ಒಟ್ಟು 8 ವಿಕೆಟ್ ಗಳನ್ನು ಪಡೆದುಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಕುರಿತು ಹೇಳುವುದಾದರೆ, ಲಸಿತ್ ಮಲಿಂಗಾ ಹಾಗೂ ಚಾಮಿಂಡಾ ವಾಸ್ ಅವರ ಹೆಸರಿನಲ್ಲಿ ಒಂದೇ ಓವರ್ ನಲ್ಲಿ ಅತಿ ಹೆಚ್ಚು ಅಂದರೆ 4 ವಿಕೆಟ್ ಗಳನ್ನು ಪಡೆದ ದಾಖಲೆ ಇದೆ. ಬಾಂಗ್ಲಾದೇಶ ವಿರುದ್ಧ ವಾಸ್ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರೆ, 2007ರ ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಾಲಿಂಗ ಒಂದೇ ಓವರ್‌ನಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News