Cricket Records: ಇಂಗ್ಲೆಂಡ್ ನ ಈ ಆಟಗಾರನ ಹೆಸರಿನಲ್ಲಿವೆ 199 ಶತಕಗಳು, ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್!

First Class Cricket Record: ವಿಶ್ವದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಯಾರು ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ ಎಂಬುದರ ಕುರಿತು ಒಂದು ಪಟ್ಟಿ ಸಿದ್ಧಗೊಂಡಿದೆ. ಈ ಪಟ್ಟಿಯ ಪ್ರಕಾರ ವಿಶ್ವದ 25 ಕ್ರಿಕೆಟಿಗರು 100ಕ್ಕೂ ಹೆಚ್ಚು ಶತಕ ಸಿಡಿಸಿದ್ದಾರೆ. ಇದರಲ್ಲಿ ಒಂದೇ ಒಂದು ಭಾರತೀಯನ ಹೆಸರು ಕೂಡ ಶಾಮಿಲಾಗಿಲ್ಲ ಎಂಬುದು ಮಾತ್ರ ಅಚ್ಚರಿಯ ಸಂಗತಿ. ಇನ್ನೂ ಆಶ್ಚರ್ಯಕಾರಕ ಎಂದರೆ ಸಚಿನ್ ತೆಂಡೂಲ್ಕರ್ ಪ್ರತಮದರ್ಜೆ ಕ್ರಿಕೆಟ್ ನ ಈ ಅತಿ ಹೆಚ್ಚು ಶತಕಗಳ ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿದ್ದಾರೆ.(Sports News In Kannada)  

Written by - Nitin Tabib | Last Updated : Mar 1, 2024, 03:11 PM IST
  • ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ದಾಖಲೆಯ ಪಟ್ಟಿಯಲ್ಲಿ 42 ನೇ ಸ್ಥಾನದಲ್ಲಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ 81 ಶತಕಗಳಿವೆ.
  • ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಈ ಮಾದರಿಯಲ್ಲಿ 81 ಶತಕಗಳನ್ನು ಹೊಂದಿದ್ದಾರೆ.
  • ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಜಹೀರ್ ಅಬ್ಬಾಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಶತಕಗಳನ್ನು ಹೊಂದಿದ್ದಾರೆ.
Cricket Records: ಇಂಗ್ಲೆಂಡ್ ನ ಈ ಆಟಗಾರನ ಹೆಸರಿನಲ್ಲಿವೆ 199 ಶತಕಗಳು, ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್! title=

Cricket Records: ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರಂತೆಯೇ ವಿಶ್ವದಲ್ಲಿ ಈ ಆಟದಲ್ಲಿ ಹಲವು ದಂತಕಥೆಗಳಿವೆ. ಕೆಲವರು ಸಾಕಷ್ಟು ಶತಕಗಳನ್ನು ಗಳಿಸುವ ಮೂಲಕ ಖ್ಯಾತಿಯನ್ನು ಪಡೆದರೆ, ಕೆಲವರು ಅತಿ ಹೆಚ್ಚು ವಿಕೆಟ್ ಗಳನ್ನು ಕಬಳಿಸಿ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಉದಾಹರಣೆಗೆ, ಆಟಗಾರ ಬ್ಯಾಟ್ಸ್ ಮನ್ ಆಗಿದ್ದರೆ, ಆತ ಎಷ್ಟು ರನ್ ಗಳಿಸಿದ ಅಥವಾ ಎಷ್ಟು ಶತಕ ಗಳಿಸಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಬೌಲರ್‌ನ ವಿಷಯದಲ್ಲೂ  ಅಷ್ಟೆ,  ಆ ಬೌಲರ್ ಎಷ್ಟು ವಿಕೆಟ್ ಪಡೆದಿದ್ದಾನೆ ಎಂದು ಎಲ್ಲರೂ ನೋಡುತ್ತಾರೆ. ಇಂದು ನಾವು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ ಯಾರು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Sports News In Kannada)

ಹೌದು ವಿಶ್ವ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇಂಗ್ಲಿಷ್ ಬ್ಯಾಟ್ಸ್‌ಮನ್ ವೊಬ್ಬ 199 ಶತಕಗಳನ್ನು ಗಳಿಸಿದ್ದಾರೆ ಎಂದು ಹೇಳಿದರೆ, ನೀವೂ ನಿಬ್ಬೆರಗಾಗುವಿರಿ. ಈ ಮಾದರಿಯಲ್ಲಿ ಒಟ್ಟು 25 ಬ್ಯಾಟ್ಸ್‌ಮನ್‌ಗಳು 100ಕ್ಕೂ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಮೊದಲ 25 ಬ್ಯಾಟ್ಸ್ ಮನ್ ಗಳಲ್ಲಿ  ಭಾರತೀಯರೇ ಇಲ್ಲ. ಇಂಗ್ಲೆಂಡ್‌ನ ಜಾನ್ ಹಾಬ್ಸ್ 834 ಪ್ರಥಮ ದರ್ಜೆ ಪಂದ್ಯಗಳಲ್ಲಿ 199 ಶತಕಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 61760 ರನ್‌ಗಳು ಸಿಡಿದಿವೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಮತ್ತು ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ ಈ ಜಾನ್ ಹಾಬ್ಸ್.

ಇದನ್ನೂ ಓದಿ-Viral Video: ಈ ರೀತಿ ಕೂಡ ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡಬಹುದಾ?

ಪ್ರಥಮ ದರ್ಜೆ ಪಂದ್ಯಗಳಲ್ಲಿ ಹಾಬ್ಸ್ ನಂತರ, ಇಹೆಚ್ ಹೆಂಡ್ರೆನ್ 170 ಶತಕಗಳು, ಡಬ್ಲ್ಯುಆರ್ ಹ್ಯಾಮಂಡ್ 167 ಶತಕಗಳು, ಸಿಪಿ ಮೀಡ್ 153 ಶತಕಗಳು, ಜಿ ಬಾಯ್ಕಾಟ್ 151 ಶತಕಗಳು, ಹೆಚ್ ಸಟ್‌ಕ್ಲಿಫ್ 151 ಶತಕಗಳು, ಎಫ್‌ಇ ವೂಲಿ 145 ಶತಕಗಳು, ಜಿಎ ಹಿಕ್ 19 ಶತಕ, 28 ಶತಕ 136 ಶತಕಗಳು, ಡಬಲ್ಯುವಿ ಗ್ರೇಸ್ 124 ಶತಕಗಳು, ಡಿಸಿಎಸ್ ಕಾಂಪ್ಟನ್ 123 ಶತಕಗಳು, ಟಿಡಬಲ್ಯು ಗ್ರೇವ್ನಿ 122 ಶತಕಗಳು, ಡಿಜಿ ಬ್ರಾಡ್ಮನ್ 117 ಶತಕಗಳು, ಎಂಆರ್ ರಾಮ್‌ಪ್ರಕಾಶ್ 114 ಶತಕಗಳು, ಐವಿಎ ರಿಚರ್ಡ್ಸ್ 114 ಶತಕಗಳು, ಝಹೀರ್ ಮತ್ತು ಎಂಸಿಡಿ ಕ್ಯಾಡ್ ಹ್ಯಾಮ್ 108, 107 ಶತಕಗಳು, ಟಿಡಬಲ್ಯು ಹೇವರ್ಡ್ 104 ಶತಕಗಳು, ಜಿಎಂ ಟರ್ನರ್ 103 ಶತಕಗಳು, ಜೇಹೆಚ್ ಎಡ್ರಿಚ್ 103 ಶತಕಗಳು, ಎಲ್ಇಜಿ ಏಮ್ಸ್ 102 ಶತಕಗಳು, ಜಿಇ ಟಿಲೇಡೆಸ್ಲಿ 102 ಶತಕಗಳು ಮತ್ತು ಡಿಎಲ್ ಅಮಿಸ್102 ಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ-Viral Video: ಲೈವ್ ಕಾಮಿಡಿ ಷೋನಲ್ಲಿ ಅತಿಥಿಗೆ ಹನಿಮೂನ್ ಕುರಿತು ಪ್ರಶ್ನೆ ಕೇಳಿದ ಕಾಮಿಡಿಯನ್... ಗತಿ ಏನಾಗಿದೆ ನೀವೇ ನೋಡಿ!

ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ದಾಖಲೆಯ ಪಟ್ಟಿಯಲ್ಲಿ 42 ನೇ ಸ್ಥಾನದಲ್ಲಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ ಹೆಸರಿನಲ್ಲಿ 81 ಶತಕಗಳಿವೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಈ ಮಾದರಿಯಲ್ಲಿ 81 ಶತಕಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಜಹೀರ್ ಅಬ್ಬಾಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಶತಕಗಳನ್ನು ಹೊಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News