Marlon Samuels banned for 6 years: ವಿಶ್ವಕಪ್ ಮುಗಿದ ಬೆನ್ನಲ್ಲೇ ವಿಶ್ವಕಪ್ ಚಾಂಪಿಯನ್ ತಂಡದ ಮಾಜಿ ಆಟಗಾರನಿಗೆ 6 ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್’ನ ಬ್ಯಾಟ್ಸ್‌ಮನ್’ಗೆ ಕಠಿಣ ಶಿಕ್ಷೆ ನೀಡಲಾಗಿದೆ. ಇವರು 2012 ಮತ್ತು 2016ರಲ್ಲಿ ವೆಸ್ಟ್ ಇಂಡೀಸ್ ಪರ ಆಟವಾಡಿ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದರು, ಈ ಆಟಗಾರ ಬೇರಾರು ಅಲ್ಲ ಮರ್ಲಾನ್ ಸ್ಯಾಮ್ಯುಯೆಲ್ಸ್. ಇವರಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) 6 ವರ್ಷಗಳ ಕಾಲ ನಿಷೇಧ ಹೇರಿದೆ.
ಇದನ್ನೂ ಓದಿ: 26 ಬಾರಿ ವಿಶ್ವಕಪ್ ಗೆದ್ದ ಭಾರತದ ಏಕೈಕ ಆಟಗಾರ ಯಾರೆಂದು ಗೊತ್ತಾ? ತಿಳಿದರೆ ಶಾಕ್ ಆಗೋದು ಗ್ಯಾರಂಟಿ
ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್’ನ ಮಾಜಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಮೇಲೆ ನಿಷೇಧ ಹೇರಲಾಗಿದೆ. ಮಾಹಿತಿ ನೀಡಿದ ಐಸಿಸಿ, “ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಸ್ವತಂತ್ರ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿ ಉಲ್ಲಂಘಿಸಿದ ಆರೋಪದ ಮೇಲೆ ಆರು ವರ್ಷಗಳ ಕಾಲ ಮರ್ಲಾನ್ ಸ್ಯಾಮುಯೆಲ್ಸ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ” ಎಂದು ಹೇಳಿದೆ. ಈ ಮಾಜಿ ಚಾಂಪಿಯನ್ ಬ್ಯಾಟ್ಸ್‌ಮನ್ ನೀತಿ ಸಂಹಿತೆಯ 2.4.2, 2.4.3, 2.4.6 ಮತ್ತು 2.4.7 ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಯಾಮ್ಯುಯೆಲ್ಸ್ 2019 ರಲ್ಲಿ ಆಫ್ರಿಕನ್ ಸ್ಟಾರ್ ಹಾಶಿಮ್ ಆಮ್ಲಾ ನೇತೃತ್ವದ ಕರ್ನಾಟಕ ಟಸ್ಕರ್ಸ್ ತಂಡದ ಭಾಗವಾಗಿದ್ದರು.
ಐಸಿಸಿಯ ಮಾನವ ಸಂಪನ್ಮೂಲ ಮತ್ತು ಸಮಗ್ರತೆಯ ಘಟಕದ ಮುಖ್ಯಸ್ಥ ಅಲೆಕ್ಸ್ ಮಾರ್ಷಲ್ ಮಾತನಾಡಿ, 'ಸ್ಯಾಮ್ಯುಯೆಲ್ಸ್ ಸುಮಾರು 20 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ, ಈ ಸಮಯದಲ್ಲಿ ಅವರು ಅನೇಕ ಭ್ರಷ್ಟಾಚಾರ ವಿರೋಧಿ ಸೆಷನ್’ಗಳಲ್ಲಿ ಭಾಗವಹಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಸಂಹಿತೆಯಲ್ಲಿ ಏನೆಲ್ಲಾ ವಿಷಯಗಳನ್ನು ಸೇರಿಸಲಾಗಿದೆ ಎಂಬುದು ಅವರಿಗೆ ತಿಳಿದಿದೆ. ಮಾರ್ಷಲ್ ಅವರು ಈಗ ನಿವೃತ್ತರಾಗಿದ್ದರೂ, ಈ ಅಪರಾಧಗಳು ನಡೆದಾಗ ಅವರು ಭಾಗಿಯಾಗಿದ್ದರು. ಈ ನಿಷೇಧವು ನಿಯಮಗಳನ್ನು ಮುರಿಯಲು ಉದ್ದೇಶಿಸಿರುವವರಿಗೆ ಬಲವಾದ ಸಂದೇಶವಾಗಿದೆ” ಎಂದಿದ್ದಾರೆ.
ಅಂದಹಾಗೆ 2012 ಮತ್ತು 2016 ರ ಟಿ 20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಗೆದ್ದಿದೆ. ಈ ಎರಡೂ ಟೂರ್ನಿಗಳಲ್ಲಿ ಮರ್ಲಾನ್ ಸ್ಯಾಮ್ಯುಯೆಲ್ಸ್ ಟಾಪ್ ಸ್ಕೋರರ್ ಆಗಿದ್ದರು. ಇನ್ನು ಸ್ಯಾಮ್ಯುಯೆಲ್ಸ್ ಅವರು ನವೆಂಬರ್ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ವೆಸ್ಟ್ ಇಂಡೀಸ್’ನ ಈ ಅದ್ಭುತ ಬ್ಯಾಟ್ಸ್‌ಮನ್ ತಂಡಕ್ಕಾಗಿ 300 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.
ಇದನ್ನೂ ಓದಿ: ಬಿಗ್’ಬಾಸ್ ಮನೆಯೊಳಗೆ ಬಂದು ಗಂಡನಿಗೆ ಚಪ್ಪಲಿಯಲ್ಲೇ ಹೊಡೆದ ಹೆಂಡತಿ!
ಸ್ಯಾಮುಯೆಲ್ಸ್ ಅವರ ಹೆಸರಿನಲ್ಲಿ 11,134 ಅಂತರಾಷ್ಟ್ರೀಯ ರನ್’ಗಳವೆ, ಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 71 ಟೆಸ್ಟ್, 207 ODI ಮತ್ತು 67 T20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ 11,134 ರನ್ಗಳನ್ನು ಗಳಿಸುವುದರ ಜೊತೆಗೆ, ಅವರು 152 ವಿಕೆಟ್ಗಳನ್ನು ಸಹ ಪಡೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ