ಮುಂಬೈ ಏರ್ಪೋರ್ಟ್ ನಲ್ಲಿ ಕ್ರಿಕೆಟರ್ ಕ್ರುನಾಲ್ ಪಾಂಡ್ಯ ಡಿಆರ್‌ಐ ವಶಕ್ಕೆ

 ಅಗತ್ಯಕ್ಕಿಂತ ಹೆಚ್ಚಿನ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಆರೋಪದ ಮೇಲೆ ಕ್ರಿಕೆಟಿಗ ಕ್ರುನಾಲ್ ಪಾಂಡ್ಯ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಗುರುವಾರ ವಶಕ್ಕೆ ಪಡೆದಿದೆ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.

Last Updated : Nov 12, 2020, 10:49 PM IST
 ಮುಂಬೈ ಏರ್ಪೋರ್ಟ್ ನಲ್ಲಿ ಕ್ರಿಕೆಟರ್ ಕ್ರುನಾಲ್ ಪಾಂಡ್ಯ ಡಿಆರ್‌ಐ ವಶಕ್ಕೆ  title=

ನವದೆಹಲಿ: ಅಗತ್ಯಕ್ಕಿಂತ ಹೆಚ್ಚಿನ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಆರೋಪದ ಮೇಲೆ ಕ್ರಿಕೆಟಿಗ ಕ್ರುನಾಲ್ ಪಾಂಡ್ಯ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಗುರುವಾರ ವಶಕ್ಕೆ ಪಡೆದಿದೆ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.

ಕ್ರುನಾಲ್ ಯುಎಇಯಿಂದ ವಿಮಾನದ ಮೂಲಕ ಆಗಮಿಸಿದಾಗ ನಂತರ ಡಿಆರ್ಐ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದರು ಎನ್ನಲಾಗಿದೆ.ನವೆಂಬರ್ 10 ರಂದು ದುಬೈನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು.

ಐಪಿಎಲ್ 2020 ರಲ್ಲಿ ಕ್ರುನಾಲ್ 16 ಪಂದ್ಯಗಳಲ್ಲಿ ಕೇವಲ 109 ರನ್ ಗಳಿಸಿ ಆರು ವಿಕೆಟ್ ಪಡೆದರು.ಇದುವರೆಗೆ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ 71 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ 2017 ರ ಫೈನಲ್‌ನಲ್ಲಿ ಮುಂಬೈ ತಂಡವು ಪ್ರಶಸ್ತಿ ಗೆಲ್ಲಲು ಮಹತ್ವದ ಪಾತ್ರವಹಿಸಿದ್ದರು 

Trending News