ವಿವಾಹಿತ ನಟನನ್ನು ಹುಚ್ಚಳಂತೆ ಪ್ರೀತಿಸಿ.. ಮೋಸ ಹೋಗಿ.. ಕೊನೆಗೆ ಒಂಟಿಯಾಗಿರಲಾಗದೇ ಹಿರಿಯ ನಾಯಕನನ್ನೇ ವರಿಸಿದ ಪ್ರಖ್ಯಾತ ನಟಿ ಈಕೆ!!

Star Actress: ಸಾಯಿರಾ ಬಾನು ಮತ್ತು ದಿಲೀಪ್ ಕುಮಾರ್ ಸುಮಾರು 20 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿದ್ದರು. ಪ್ರೇಮ ವಿವಾಹವಾಗಿದ್ದರೂ ದಿಲೀಪ್ ಕುಮಾರ್ ಗೂ ಮುನ್ನ ಸೈರಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು.

Written by - Savita M B | Last Updated : Nov 3, 2024, 08:07 AM IST
  • ಸಿನಿರಂಗವನ್ನು ಆಳಿಕೆ ಕೆಲವು ಫೇಮಸ್‌ ನಟಿಯರಲ್ಲಿ ಸೈರಾ ಬಾನು ಕೂಡ ಒಬ್ಬರು
  • ಹಾಗಾದ್ರೆ ದಿಲೀಪ್ ಕುಮಾರ್ ಮೊದಲು ಸೈರಾ ಜೀವನದಲ್ಲಿ ಬಂದ ವ್ಯಕ್ತಿ ಯಾರು ಗೊತ್ತಾ?
ವಿವಾಹಿತ ನಟನನ್ನು ಹುಚ್ಚಳಂತೆ ಪ್ರೀತಿಸಿ.. ಮೋಸ ಹೋಗಿ.. ಕೊನೆಗೆ ಒಂಟಿಯಾಗಿರಲಾಗದೇ ಹಿರಿಯ ನಾಯಕನನ್ನೇ ವರಿಸಿದ ಪ್ರಖ್ಯಾತ ನಟಿ ಈಕೆ!!  title=

Star Actress Saira Banu: ಸಿನಿರಂಗವನ್ನು ಆಳಿಕೆ ಕೆಲವು ಫೇಮಸ್‌ ನಟಿಯರಲ್ಲಿ ಸೈರಾ ಬಾನು ಕೂಡ ಒಬ್ಬರು.. ವೃತ್ತಿ ಜೀವನದಂತೆ ಇವರ ವೈಯಕ್ತಿಕ ಜೀವನ ಅಷ್ಟಾಗಿ ಕಲರ್‌ಫುಲ್‌ ಆಗಿರಲಿಲ್ಲ.. ಸೈರಾ ಬಾನು ಮತ್ತು ದಿಲೀಪ್ ಕುಮಾರ್ ಸುಮಾರು 20 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿದ್ದರು. ಪ್ರೇಮ ವಿವಾಹವಾಗಿದ್ದರೂ ದಿಲೀಪ್ ಕುಮಾರ್ ಗೂ ಮುನ್ನ ಸೈರಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು. ಬಾಲಿವುಡ್‌ನಲ್ಲಿ ನಟನಾಗಿರುವ ಈ ವ್ಯಕ್ತಿ ಕೂಡ ಇದಕ್ಕೂ ಮೊದಲೇ ಮದುವೆಯಾಗಿದ್ದರು, ಆದರೆ ನಂತರ ಸೈರಾ ದಿಲೀಪ್ ಕುಮಾರ್ ಅವರನ್ನು ವಿವಾಹವಾದರು. ಹಾಗಾದ್ರೆ ದಿಲೀಪ್ ಕುಮಾರ್ ಮೊದಲು ಸೈರಾ ಜೀವನದಲ್ಲಿ ಬಂದ ವ್ಯಕ್ತಿ ಯಾರು ಗೊತ್ತಾ? 

ನಟಿ ಸೈರಾ ಬಾನೋ ಉರ್ದು ಮಾತನಾಡುವ ಕುಟುಂಬದಲ್ಲಿ 23 ಆಗಸ್ಟ್ 1944 ರಂದು ಜನಿಸಿದರು. ಅವರು ತಮ್ಮ ಬಾಲ್ಯವನ್ನು ಲಂಡನ್‌ನಲ್ಲಿ ಕಳೆದರು. 1961ರಲ್ಲಿ ‘ಜಂಗ್ಲಿ’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ. ಕೆಲವು ವರ್ಷಗಳ ನಂತರ, 22 ನೇ ವಯಸ್ಸಿನಲ್ಲಿ, ಅವರು ನಟ ದಿಲೀಪ್ ಕುಮಾರ್ ಅವರನ್ನು ವಿವಾಹವಾದರು. ದಿಲೀಪ್ ಕುಮಾರ್ ಅವರ ಕೊನೆಯ ವರ್ಷಗಳಲ್ಲಿ ಅವರ ನೆರಳಿನಂತೆ ನಟಿಸಿದ್ದ ಸಾಯಿರಾ ಒಮ್ಮೆ ನಟ ರಾಜೇಂದ್ರ ಕುಮಾರ್ ಅವರನ್ನು ಮದುವೆಯಾಗಲು ಬಯಸಿದ್ದರು. 

ಇದನ್ನೂ ಓದಿ-ಜೈಲಿನಿಂದ ಹೊರಬಂದ ದರ್ಶನ್ ಗೆ ಬಿಗ್ ಶಾಕ್? ಸದ್ಯದಲ್ಲೇ ದಾಸನಿಗೆ ಎದುರಾಗಲಿದೆ ಮತ್ತೊಂದು ಸಂಕಷ್ಟ!!   

ಹೌದು 'ಐ ಮಿಲನ್ ಕಿ ಬೇಲಾ', 'ಜುಕ್ ಗಯಾ ಆಸ್ಮಾನ್' ಮುಂತಾದ ಹಲವು ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇವರ ಜೋಡಿ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಸೈರಾ ರಾಜೇಂದ್ರ ಕುಮಾರ್ ಅವರನ್ನು ಮದುವೆಯಾಗಲು ಬಯಸಿದ್ದರು, ಆದರೆ ರಾಜೇಂದ್ರ ಕುಮಾರ್ ಆಗಲೇ ಮದುವೆಯಾಗಿದ್ದರು. ಅವರಿಗೂ ಇಬ್ಬರು ಮಕ್ಕಳಿದ್ದರು. ರಾಜೇಂದ್ರ ಕುಮಾರ್ ಅವರಿಗೂ ಸೈರಾ ಬಗ್ಗೆ ಅದೇ ರೀತಿಯ ಭಾವನೆ ಇತ್ತು. ಮಾಧ್ಯಮ ವರದಿಗಳ ಪ್ರಕಾರ, ಆ ಸಮಯದಲ್ಲಿ ಇಬ್ಬರೂ ಓಡಿಹೋಗಲು ಯೋಜಿಸುತ್ತಿದ್ದರು, ಆದರೆ ಸೈರಾ ಅವರ ತಾಯಿ ನಸೀಮ್ ಮಧ್ಯಪ್ರವೇಶಿಸಿದರು. ಅದರಲ್ಲೂ ರಾಜೇಂದ್ರ ಮದುವೆಯಾಗಿದ್ದು ಹಿಂದೂ ಕೂಡ ಆಗಿದ್ದರಿಂದ ಸೈರಾಗೆ ಮದುವೆಯಾಗದಂತೆ ಸಲಹೆ ನೀಡಿದ್ದರು.. ಆದರೆ ಸೈರಾ ರಾಜೇಂದ್ರನನ್ನು ಸಂಪೂರ್ಣವಾಗಿ ಪ್ರೀತಿಸುತ್ತಿದ್ದಳು. 

ಆಗ ಉಪಾಯ ಮಾಡಿದ ನಟಿಯ ತಾಯಿ.. ಸೈರಾ ನಟ ದಿಲೀಪ್ ಕುಮಾರ್ ಅವರನ್ನು ಬಾಲ್ಯದಿಂದಲೂ ಇಷ್ಟಪಡುತ್ತಿದ್ದರು.. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ದಿಲೀಪ್ ಕುಮಾರ್ ಅವರನ್ನು ಆಹ್ವಾನಿಸಿದ ನಸೀಮ್.. ಆಗ ದಿಲೀಪ್ ಕುಮಾರ್ ಮತ್ತು ನಸೀಮ್ ರಾಜೇಂದ್ರನನ್ನು ಮದುವೆಯಾಗದಂತೆ ಸೈರಾ ತಿಳಿಸಿ ಹೇಳಿದರು. ಅಂತಿಮವಾಗಿ ಅವರ ಪ್ರಯತ್ನಗಳು ಯಶಸ್ವಿಯಾದವು ಮತ್ತು ಸೈರಾ ರಾಜೇಂದ್ರ ಕುಮಾರ್ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿ.. ತನಗಿಂತ 22 ವರ್ಷ ದೊಡ್ಡವರಾಗಿದ್ದ ದಿಲೀಪ್ ಕುಮಾರ್ ಅವರನ್ನು ವಿವಾಹವಾದರು.  

ಇದನ್ನೂ ಓದಿ-ಬರಿಗೈಯಲ್ಲೇ ಶಾಲಾ ಆವರಣಕ್ಕೆ ನುಗ್ಗಿದ ನಾಗರ ಹಾವು ಹಿಡಿದ ವಿದ್ಯಾರ್ಥಿನಿ..! ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News