ಕ್ರಿಕೆಟರ್ ಧೋನಿಗೆ ಬಾತ್​ರೂಮ್​ನಲ್ಲಿ ಕೂಲ್​ ಅನ್ಸುತ್ತಂತೆ! ಏಕೆ ಗೊತ್ತಾ?

ಎಂ.ಎಸ್.ಧೋನಿ ತಮಗೆ ಎಲ್ಲಿ ಕೂಲ್ ಎನಿಸುತ್ತದೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ. 

Last Updated : Jul 24, 2018, 01:08 PM IST
ಕ್ರಿಕೆಟರ್ ಧೋನಿಗೆ ಬಾತ್​ರೂಮ್​ನಲ್ಲಿ ಕೂಲ್​ ಅನ್ಸುತ್ತಂತೆ! ಏಕೆ ಗೊತ್ತಾ? title=

ನವದೆಹಲಿ: ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ಕೂಲ್ ಆಗೇ ಇರ್ತಾರೆ. ಹಾಗಾಗೇ ಎಲ್ಲರೂ ಅವರನ್ನು ಕೂಲ್ ಕ್ಯಾಪ್ಟನ್ ಅಂತ ಕರೆಯುತ್ತಾರೆ. ಆದರೆ ಇದೀಗ ಎಂ.ಎಸ್.ಧೋನಿ ತಮಗೆ ಎಲ್ಲಿ ಕೂಲ್ ಎನಿಸುತ್ತದೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ. 

ಇತ್ತೀಚೆಗಷ್ಟೆ ಮಹೇಂದ್ರಸಿಂಗ್ ಧೋನಿ ಅವರ ತಮ್ಮ ಸ್ನೇಹಿತ ಪೂರ್ಣ ಪಟೇಲ್ ವಿವಾಹಕ್ಕೆ ತೆರಳಿದ್ದ ಸಂದರ್ಭದಲ್ಲಿ ಪತ್ನಿ ಸಾಕ್ಷಿ ಧೋನಿ ಜೊತೆ ಡ್ಯಾನ್ಸ್ ಮಾಡಿದ್ದ ವೀಡಿಯೋ ಸಖತ್ ವೈರಲ್ ಆಗಿತ್ತು. ಆದರೆ ಇದೀಗ ಧೋನಿ, ಬಾತ್ ರೂಮಲ್ಲಿ ತಮ್ಮ ಸ್ನೇಹಿತರೊಬ್ಬರು ತುಂಬಾ ಕೂಲ್ ಆಗಿ ಕಾಣ್ತಿದ್ದೀರಾ ಯಾಕೆ? ಎಂದು ಕೇಳಿದ ಪ್ರಶ್ನೆಗೆ "ಇದು ಬಾತ್ ರೂಂ ಆಲ್ವಾ ಅದಿಕ್ಕೆ" ಎಂದು ಧೋನಿ ಉತ್ತರಿಸಿದ್ದಾರೆ. ಅವರು ಹೀಗೆ ಹೇಳಿರೋದನ್ನು ಸ್ನೇಹಿತ ರಾಹುಲ್ ವೈದ್ಯ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ಅಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೋ ಸಖತ್ ವೈರಲ್ ಆಗಿದೆ. ಅದನ್ನು ನೀವೇ ಒಮ್ಮೆ ನೋಡಿ...

Trending News