ವಿಶ್ವಕಪ್ ಟೂರ್ನಿಯ ನಂತರ ಧೋನಿ ನಿರಂತರವಾಗಿ ಕ್ರಿಕೆಟ್ ಟೂರ್ನಿಗಳಿಗೆ ಗೈರುಹಾಜರಾಗುತ್ತಿದ್ದಾರೆ. ಇನ್ನೊಂದೆಡೆಗೆ ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹಿತ ಈ ವಿಚಾರವಾಗಿ ಚರ್ಚಿಸುವುದಾಗಿ ಹೇಳಿದ್ದರು. ಆದಾಗ್ಯೂ ಧೋನಿ ಮಾತ್ರ ಬಹಿರಂಗವಾಗಿ ಮಾತನಾಡಿಲ್ಲ.
ಎಂ.ಎಸ್. ಧೋನಿ ಕ್ರಿಕೆಟ್ ಭವಿಷ್ಯದ ವಿಚಾರವಾಗಿ ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿದ್ದಾರೆ, ಅಗತ್ಯವಿದ್ದಾಗ ಅವರು ಸಂಪರ್ಕಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಕೊಹ್ಲಿ ಹೇಳಿದ್ದಾರೆ.
ಕ್ರಿಕೆಟಿನ ಎಲ್ಲ ಮಾದರಿಯಲ್ಲಿ ಯಶಸ್ವಿಯಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿರಂತರವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಆದರೆ ಅವರ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರರು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದ್ದಾರೆ. ಈಗ ಅಂತವರ ಸಾಲಿಗೆ ಗೌತಮ್ ಗಂಭೀರ್ ಕೂಡ ಸೇರಿದ್ದಾರೆ.
ಮೂರು ಪಂದ್ಯಗಳ ಟಿ 20 ಸರಣಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಪರಸ್ಪರ ಅಣಿಯಾಗುತ್ತಿರುವ ಸಂದರ್ಭದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎಂ.ಎಸ್.ಧೋನಿ ಅವರನ್ನು ಶ್ಲಾಘಿಸಿದರು, 'ಅವರು ಯಾವಾಗಲೂ ಭಾರತೀಯ ಕ್ರಿಕೆಟ್ ಬಗ್ಗೆ ಯೋಚಿಸುತ್ತಾರೆ ಮತ್ತು ಅವರ ಅನುಭವಕ್ಕೆ ಯಾವುದೇ ಪರ್ಯಾಯವಿಲ್ಲ ಎಂದು ಹೇಳಿದರು.
ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿರುವ ಎಂ.ಎಸ್.ಧೋನಿ ಈಗ ಪ್ಯಾರಾಚೂಟ್ ರೆಜಿಮೆಂಟ್ನ ಪ್ರಾದೇಶಿಕ ಸೇನಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಈ ನಿರ್ಧಾರಕ್ಕೆ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಸಂಸದ ಎಂ.ಎಸ್.ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂ.ಎಸ್.ಧೋನಿ ಹುಟ್ಟುಹಬ್ಬಕ್ಕೆ ಇನ್ನು ಒಂದು ದಿನ ಬಾಕಿ ಇದೆ. ಆದರೆ ಇಂತಹ ದಂತಕಥೆ ಆಟಗಾರನ ಬಗ್ಗೆ ಐಸಿಸಿ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಎಂ.ಎಸ್.ಧೋನಿ ತಮ್ಮ ನಡೆಯಿಂದಲೇ ಜಗತ್ತಿನ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಈಗ ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ಕಾರಣಕ್ಕಾಗಿ ಪಾಕ್ ಅಭಿಮಾನಿಯೊಬ್ಬ ಭಾರತ ತಂಡಕ್ಕೆ ಬೆಂಬಲ ನೀಡುತ್ತಿದ್ದಾನೆ.
ಜಾರ್ಖಂಡದ ರಾಂಚಿಯಂತಹ ಸಣ್ಣ ನಗರದಿಂದ ಬಂದ ಎಂ.ಎಸ್.ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಗುರುತನ್ನು ಮೂಡಿಸಿದ್ದಾರೆ. ಅವರ ಆಟದ ಪ್ರಭಾವ ಕೇವಲ ದೇಶಿಯ ಆಟಗಾರರಿಗೆ ಅಲ್ಲ ವಿದೇಶಿ ಆಟಗಾರರಿಗೂ ಸ್ಪೂರ್ತಿದಾಯಕವಾಗಿದೆ.ಇದಕ್ಕೆ ಈಗ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡಿವಿಲಿಯರ್ಸ್ ಹೇಳಿರುವ ಮಾತೆ ಸಾಕ್ಷಿ.
ಆಸ್ಟ್ರೇಲಿಯಾದ ಆಟಗಾರ ಆರನ್ ಫಿಂಚ್ ಅವರು ಭಾರತದ ಧೋನಿ ಹಾಗೂ ವಿರಾಟ್ ಕೊಹ್ಲಿಯನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರರೆಂದು ಕರೆದಿದ್ದಾರೆ.ಭಾರತಕ್ಕೆ ಪ್ರವಾಸ ಬಂದಂತಹ ಸಂದರ್ಭದಲ್ಲಿ ಅವರಿಗೆ ಸರಣಿ ಮುಕ್ತಾಯವಾದ ನಂತರ ಧೋನಿ ಹಾಗೂ ವಿರಾಟ್ ಕೊಹ್ಲಿ ಜರ್ಸಿಗಳನ್ನು ನೀಡಲಾಗಿತ್ತು.ಈಗ ಈ ಜರ್ಸಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಎಂ.ಎಸ್ ಧೋನಿ ನಾಯಕತ್ವವನ್ನು ಕಳಚಿರಬಹುದು ಆದರೆ ಇಂದಿಗೂ ಕೂಡ ಕೊಹ್ಲಿಯಂತ ಆಟಗಾರರಿಗೆ ಹಿಡಿದು ಎಲ್ಲರಿಗೂ ಅವರು ಮಾದರಿ. ಕೇವಲ ವಿಕೆಟ್ ಕೀಪರ್ ಆಗಿ ಅಲ್ಲದೆ ನಾಯಕನಾಗಿ ಕೂಡ ಅವರ ಪ್ರಭಾವ ತಂಡದ ಮೇಲೆ ಸಾಕಷ್ಟು ಇದೆ.
ಗಂಗೂಲಿ 'ಎ ಸೆಂಚುರಿ ಈಸ್ ನಾಟ್ ಎನಫ್' ಎಂಬ ಆತ್ಮಚರಿತ್ರೆಯನ್ನು ಹೊರತಂದಿದ್ದಾರೆ. ಅದರಲ್ಲಿ ಅವರು, 2003 ರ ವಿಶ್ವ ಕಪ್ ತಂಡದಲ್ಲಿ ಎಂ.ಎಸ್.ಧೋನಿ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.