ಮುಂಬೈ: ಇಲ್ಲಿನ ವಾಂಖೇಡ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ತಂಡವು ದೆಹಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 15 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ದೆಹಲಿ ತಂಡವು ಆರಂಭದಿಂದಲೇ ವಿಕೆಟ್ ಗಳನ್ನು ಪಡೆಯಲು ಸಾಕಷ್ಟು ಶ್ರಮವಹಿಸಬೇಕಾಯಿತು. ಆದರೆ ಅದು ಕೊನೆಯಲ್ಲಿ ಯಶಸ್ವಿಯಾದರೂ ಕೂಡ ಆದಾಗಲೇ ರಾಜಸ್ಥಾನ್ ರಾಯಲ್ಸ್ ತಂಡವು ಬೃಹತ್ ಮೊತ್ತವನ್ನು ಪೇರಿಸಿಯಾಗಿತ್ತು.
ಇದನ್ನೂ ಓದಿ: ದಿನೇಶ್ ಕಾರ್ತಿಕ್ ಪತ್ನಿಯನ್ನೇ ಪಟಾಯಿಸಿ ಮದುವೆಯಾಗಿದ್ದ ಕ್ರಿಕೆಟರ್ ಮುರಳಿ ವಿಜಯ್..!
ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆರಂಭಿಕ ಆಟಗಾರ ಜೋಸ್ ಬಟ್ಲರ್ ಭರ್ಜರಿ ಒಂಬತ್ತು ಬೌಂಡರಿ ಹಾಗೂ ಒಂಬತ್ತು ಸಿಕ್ಸರ್ ಗಳ ಮೂಲಕ ಕೇವಲ 65 ಎಸೆತಗಳಲ್ಲಿ 116 ರನ್ ಗಳಿಸುವ ಮೂಲಕ ತಂಡಕ್ಕೆ ಆರಂಭದಲ್ಲಿಯೇ ಭದ್ರ ಬುನಾದಿಯನ್ನು ಹಾಕಿದರು.
ಇನ್ನೊಂದೆಡೆಗೆ ಇವರಿಗೆ ಸಾಥ್ ನೀಡಿದ ಕನ್ನಡಿಗ ಪಡಿಕಲ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ಮೂಲಕ ಕೇವಲ 35 ಎಸೆತಗಳಲ್ಲಿ 54 ರನ್ ಗಳಿಸಿದರು.ನಂತರ ಬಂದಂತಹ ಸಂಜು ಸ್ಯಾಮ್ಸನ್ ಕೂಡ ಕೊನೆಯಲ್ಲಿ 19 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಐದು ಬೌಂಡರಿಗಳ ಮೂಲಕ 46 ರನ್ ಗಳಿಸಿ ಅಜೇಯರಾಗಿ ಉಳಿದರು.ಆ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು ಅಂತಿಮವಾಗಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 222 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು.
Buttler bags another Player of the Match award for his excellent knock of 116 as @rajasthanroyals win by 15 runs.#TATAIPL #DCvRR pic.twitter.com/3V37XM1n6A
— IndianPremierLeague (@IPL) April 22, 2022
ಇದನ್ನೂ ಓದಿ: IPL 2022 : ಹಳ್ಳಿಯಿಂದ ಬಂದ ಈ ಆಟಗಾರ ಈಗ 'ಸಿಎಸ್‌ಕೆ ತಂಡ'ದ ಸ್ಪೋಟಕ ಬೌಲರ್!
ಇದಾದ ನಂತರ ರಾಜಸ್ಥಾನ ರಾಯಲ್ಸ್ ತಂಡವು ನೀಡಿದ 223 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದೆಹಲಿ ಕ್ಯಾಪಿಟಲ್ಸ್ ತಂಡವು ಗೆಲುವಿನ ಹೋರಾಟ ನಡೆಸಿತಾದರೂ ಕೂಡ ಕೊನೆಗೆ ಅದು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 207 ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
That's that from Match 34. @rajasthanroyals take this home by a 15-run win.
Scorecard - https://t.co/IOIoa87Os8 #DCvRR #TATAIPL pic.twitter.com/D2JXBfMTSp
— IndianPremierLeague (@IPL) April 22, 2022
ದೆಹಲಿ ಪರವಾಗಿ ರಿಷಬ್ ಪಂತ್ 44, ಪೃಥ್ವಿ ಶಾ 37, ಪಾವೆಲ್ 36, ಲಲಿತ್ ಯಾದವ್ 37, ಡೇವಿಡ್ ವಾರ್ನರ್ 28 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಂದಿದ್ದರಾದರೂ ಕೂಡ ಕೊನೆಯಲ್ಲಿ ಕೇವಲ 15 ರನ್ ಗಳ ಕೊರತೆಯನ್ನು ಎದುರಿಸಿತು.ರಾಜಸ್ತಾನದ ಪರವಾಗಿ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಕನ್ನಡಿಗ ಪ್ರಸಿದ್ದ ಕೃಷ್ಣಾ ಮೂರು ಹಾಗೂ ಆರ್.ಅಶ್ವಿನ್ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ತಂಡದ ರನ್ ಗತಿಗೆ ಕಡಿವಾಣ ಹಾಕಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.