IND vs ENG, Druv Jurrel: ರಾಜ್ ಕೋಟ್ ಟೆಸ್ಟ್’ನಲ್ಲಿ ಟೀಂ ಇಂಡಿಯಾಗೆ ಇಬ್ಬರು ಆಟಗಾರರು ಪಾದಾರ್ಪಣೆ ಮಾಡಿದ್ದಾರೆ. ಮೊದಲು, ಸರ್ಫರಾಜ್ ಖಾನ್ ತಮ್ಮ ಚೊಚ್ಚಲ ಪಂದ್ಯದಲ್ಲೇ 66 ಎಸೆತಗಳಲ್ಲಿ 62 ರನ್ ಗಳಿಸಿ ಸುದ್ದಿ ಮಾಡಿದರೆ, ಇದೀಗ ಧ್ರುವ್ ಜುರೆಲ್ ಕೂಡ ಟೀಮ್ ಇಂಡಿಯಾ ಪರ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಈ ಇನ್ನಿಂಗ್ಸ್’ನಲ್ಲಿ ಧ್ರುವ್ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ಸಹಾಯದಿಂದ ಅಮೋಘ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ಮನೆ ತೆರವು ಗೊಳಿಸಲು ನೋಟೀಸ್ :ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ ವೃದ್ಧ ದಂಪತಿ
ಬಿಸಿಸಿಐ ಮೆಚ್ಚುಗೆ:
ಭಾರತ ತಂಡದ ಪರ 312ನೇ ಟೆಸ್ಟ್ ಆಟಗಾರ ಎನಿಸಿಕೊಂಡಿರುವ ಧ್ರುವ್ ಜುರೆಲ್ 46 ರನ್ ಗಳಿಸಿದ್ದಾರೆ. ಅರ್ಧಶತಕ ವಂಚಿತರಾದರೂ ಸಹ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದು ಸುಳ್ಳಲ್ಲ. ಈ ಇನ್ನಿಂಗ್ಸ್’ನಲ್ಲಿ 104 ಎಸೆತಗಳನ್ನು ಆಡಿದ್ದಾರೆ. ಗಂಟೆಗೆ ಸುಮಾರು 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮಾರ್ಕ್ ವುಡ್ ಎಸೆತದಲ್ಲಿ ಧ್ರುವ್ ಸಖತ್ ಸಿಕ್ಸರ್ ಬಾರಿಸಿದ್ದಾರೆ.
ಅಲ್ಲದೆ, ಧ್ರುವ್ ಜುರೆಲ್ ಟೆಸ್ಟ್ ಚೊಚ್ಚಲ ಪಂದ್ಯದಲ್ಲೇ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ನಯನ್ ಮೊಂಗಿಯಾ ಎಂಬವರು 30 ವರ್ಷಗಳ ಹಿಂದೆ ಈ ಸಾಧನೆ ಮಾಡಿದ್ದರು. ಈಗ ಧ್ರುವ್ ಜುರೆಲ್ ಆ ಸ್ಥಾನಕ್ಕೆ ಹೆಜ್ಜೆಯಿಟ್ಟಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.
ಚೊಚ್ಚಲ ಟೆಸ್ಟ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್
- ದಿಲಾವರ್ ಹುಸೇನ್- 59 ರನ್ (ಇಂಗ್ಲೆಂಡ್, 1934)
- ಧ್ರುವ್ ಜುರೆಲ್- 46 ರನ್ (ಇಂಗ್ಲೆಂಡ್, 2024)
- ನಯನ್ ಮೊಂಗಿಯಾ- 44 ರನ್ (ಶ್ರೀಲಂಕಾ, 1994)
ಇದನ್ನೂ ಓದಿ: “ಸೂರ್ಯ ಉದಯಿಸುವುದು ತನ್ನದೇ ಸಮಯದಲ್ಲಿ...”- ಸರ್ಫರಾಜ್ ಖಾನ್ ತಂದೆಯ ಭಾವನಾತ್ಮಕ ಹೇಳಿಕೆ
ಭಾರತ ತಂಡ ಎರಡನೇ ದಿನದಾಟದ ಆರಂಭದಲ್ಲಿ 7 ವಿಕೆಟ್ ಕಳೆದುಕೊಂಡು 331 ರನ್ ಗಳಿಸಿತ್ತು. ಬಳಿಕ ರವಿಚಂದ್ರನ್ ಅಶ್ವಿನ್ ಜತೆಗೂಡಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ ಧ್ರುವ್ ಜುರೆಲ್ 8ನೇ ವಿಕೆಟ್’ಗೆ 77 ರನ್‌ಗಳ ಜೊತೆಯಾಟ ನೀಡಿದರು. ಜುರೆಲ್ ತಮ್ಮ ನಿಖರ ಪ್ರದರ್ಶನ ತೋರಿ, ಭಾರತದ ಸ್ಕೋರ್ 400 ದಾಟುವಂತೆ ಮಾಡಿದರು. ಕೊನೆಯಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಟೀಂ ಇಂಡಿಯಾದ ಸ್ಕೋರ್ ಅನ್ನು 445ಕ್ಕೆ ಕೊಂಡೊಯ್ದರು. ಇದೀಗ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ಮುಂದುವರಿದಿದ್ದು, ಪ್ರವಾಸಿ ತಂಡ ಎಷ್ಟು ರನ್ ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ