ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ನಡೆಸುತ್ತಿರುವ ಈ ಬಾಲಿವುಡ್ ಬೆಡಗಿ ಯಾರು ಗೊತ್ತಾ?

    

Updated: Jun 6, 2018 , 04:47 PM IST
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ನಡೆಸುತ್ತಿರುವ ಈ ಬಾಲಿವುಡ್ ಬೆಡಗಿ ಯಾರು ಗೊತ್ತಾ?

ನವದೆಹಲಿ: ಹಾರ್ದಿಕ್ ಪಾಂಡ್ಯ ಇತ್ತಿಚಿನ ದಿನಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಇತ್ತ ಬ್ಯಾಟಿಂಗ್ ಗೂ ಸೈ ಬೌಲಿಂಗಿಗೂ ಸೈ ಎನ್ನುತ್ತ ಭಾರತ ತಂಡದಲ್ಲಿ ಪ್ರತಿಭಾನ್ವಿತ ಆಲ್ ರೌಂಡರ್ ಎನಿಸಿಕೊಂಡಿದ್ದಾರೆ.

ಈಗ ಇವರು ಸುದ್ದಿಯಲ್ಲಿರುವುದು ಮಾತ್ರ ಕ್ರಿಕೆಟ್ ಮೈದಾನದ ಪ್ರದರ್ಶನದಿಂದಲ್ಲ, ಬದಲಾಗಿ ಬಾಲಿವುಡ್ ನಟಿ ಜೊತೆಗೆ ಇರುವ ನಂಟಿನ ವಿಚಾರವಾಗಿ ಎಂದು ತಿಳಿದುಬಂದಿದೆ. ಹೌದು ಕೆಲವು ದಿನಗಳ ಹಿಂದಷ್ಟೇ ಸ್ವೀಡಿಸ್-ಗ್ರೀಕ್ ಮೂಲದ ಮಾಡೆಲ್ ಎಲ್ಲಿ ಅವರ್ರಾಂ ಜೊತೆ ಸುದ್ದಿ ಮಾಡಿದ್ದ ಹಾರ್ದಿಕ್ ಪಾಂಡ್ಯ ಈಗ ಮತ್ತೆ ಸುದ್ದಿಯಾಗಿರುವುದು ಬಾಲಿವುಡ್ ನಟಿಯ ಜೊತೆ ಡೇಟಿಂಗ್ ನಡೆಸುತ್ತಿರುವುದರಿಂದಾಗಿ ಎನ್ನಲಾಗುತ್ತಿದೆ.

ಡಿಎನ್ಎ ಇಂಡಿಯಾ.ಡಾಟ್ ಕಾಂ ವೆಬ್ ಸೈಟ್ ವರದಿ ಮಾಡಿರುವಂತೆ ಪಾಂಡ್ಯ ಈಗ ನಟಿ ಇಶಾ ಗುಪ್ತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ.ಈ ವರದಿ ಅನ್ವಯ ಪಾರ್ಟಿಯೊಂದರಲ್ಲಿ ಭೇಟಿಯಾದಾಗಿನಿಂದ ಈ ಜೋಡಿಗಳು ಡೇಟಿಂಗ್ ನಡೆಸುತ್ತಿವೆ ಎನ್ನುತ್ತಿದೆ ಈ ವರದಿ.

ಏನೇ ಆಗಲಿ ಬಾಲಿವುಡ್ ಮತ್ತು ಕ್ರಿಕೆಟ್ ಗೆ ಜನ್ಮ ಜನ್ಮದ ನಂಟು ಎನ್ನವುದಕ್ಕೆ ಇತ್ತೀಚೆಗಿನ ವಿರಾಟ್ ಕೊಹ್ಲಿ,ಅನುಷ್ಕಾ ಶರ್ಮಾ, ಸಾಗರಿಕಾ ಗೋಗಟೆ ಮತ್ತು ಜಹೀರ್ ಖಾನ್ ನಡುವಿನ ಮದುವೆಯೆ ಸಾಕ್ಷಿ ಎನ್ನಲಾಗುತ್ತಿದೆ.