ಭಾರತ-ಪಾಕ್ ಪರ ಆಡಿದ್ದ ಈ ಮೂರು ಆಟಗಾರರು ದೇಶ ವಿಭಜನೆ ಬಳಿಕ ಏನಾದ್ರು ಗೊತ್ತಾ?

ಆದರೆ ಭಾರತ ಮತ್ತು ಪಾಕಿಸ್ತಾನ ವಿಭಜನೆಗೂ ಮುನ್ನ ಪಾಕ್ ಪ್ರದೇಶಗಳು ಭಾರತದ ಜೊತೆಯಿದ್ದವು, ಅದಾಗ ಮೂವರು ಆಟಗಾರರು ಭಾರತಕ್ಕಾಗಿ ಕ್ರಿಕೆಟ್ ಆಡುತ್ತಿದ್ದರು ಎಂದರೆ ನೀವು ನಂಬಲೇಬೇಕು.

Written by - Bhavishya Shetty | Last Updated : Aug 15, 2022, 12:33 PM IST
    • ಭಾರತ ಮತ್ತು ಪಾಕಿಸ್ತಾನ ವಿಭಜನೆಗೂ ಮುನ್ನ ಪಾಕ್ ಪ್ರದೇಶಗಳು ಭಾರತದ ಜೊತೆಯಿದ್ದವು
    • ವಿಭಜನೆಗೂ ಮುನ್ನ ಎರಡೂ ದೇಶಗಳಿಗಾಗಿ ಮೂವರು ಆಟಗಾರರು ಕ್ರಿಕೆಟ್ ಆಡಿದ್ದರು
    • ಆ ಮೂವರು ಕ್ರಿಕೆಟಿಗರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ
ಭಾರತ-ಪಾಕ್ ಪರ ಆಡಿದ್ದ ಈ ಮೂರು ಆಟಗಾರರು ದೇಶ ವಿಭಜನೆ ಬಳಿಕ ಏನಾದ್ರು ಗೊತ್ತಾ?  title=
India-Pakistan

ಎಲ್ಲಾ ಭಾರತೀಯರು ಇಂದು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದ್ದಾರೆ. ಇನ್ನು ಭಾರತದ ವಿಚಾರ ಬಂತೆಂದರೆ ಇಲ್ಲಿನ ಜನರು ದೇಶಾಭಿಮಾನಕ್ಕಿಂತ ಬೇರೊಂದಿಲ್ಲ ಎಂಬ ಮಾತುಗಳನ್ನೇ ಹೇಳುತ್ತಾರೆ. ಇಂತಹ ಮಾತುಗಳು ಹೆಚ್ಚಾಗಿ ಕೇಳಿಬರೋದು ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ. ಅದರಲ್ಲೂ ಭಾರತ ಪಾಕಿಸ್ತಾನ ಪಂದ್ಯ ನಡೆಯುತ್ತಿದ್ದರೆ ಮಾತ್ರ ಭಾರತೀಯರು ಹುಚ್ಚೆದ್ದು ಅಭಿಮಾನ ತೋರ್ಪಡಿಸುತ್ತಾರೆ.

ಆದರೆ ಭಾರತ ಮತ್ತು ಪಾಕಿಸ್ತಾನ ವಿಭಜನೆಗೂ ಮುನ್ನ ಪಾಕ್ ಪ್ರದೇಶಗಳು ಭಾರತದ ಜೊತೆಯಿದ್ದವು, ಅದಾಗ ಮೂವರು ಆಟಗಾರರು ಭಾರತಕ್ಕಾಗಿ ಕ್ರಿಕೆಟ್ ಆಡುತ್ತಿದ್ದರು ಎಂದರೆ ನೀವು ನಂಬಲೇಬೇಕು. ಆದರೆ ಭಾರತ ಮತ್ತು ಪಾಕಿಸ್ತಾನ ಯಾವತ್ತು ವಿಭಜನೆಗೊಂಡು ಬದ್ಧ ವೈರಿಗಳಾಗಿ ಮಾರ್ಪಾಡಾಯಿತೋ ಅಂದು ಈ ಮೂವರು ಪಾಕಿಸ್ತಾನಕ್ಕೆ ತೆರಳಿದರು.

ಇದನ್ನೂ ಓದಿ:  Rishabh Pant : ಊರ್ವಶಿ ಜೊತೆಗಿನ ವಿವಾದದ ನಡುವೆ ಈ ಪೋಸ್ಟ್ ಹಂಚಿಕೊಂಡ ರಿಷಬ್ ಪಂತ್!

ಭಾರತಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕರೆ, ಆಗಸ್ಟ್ 14 ರಂದು ಪಾಕಿಸ್ತಾನವು ಸ್ವತಂತ್ರವಾಯಿತು. ಇದೀಗ ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋಗಿ, ಅದಕ್ಕೂ ಮುನ್ನ ಎರಡೂ ದೇಶಗಳಿಂದ ಕ್ರಿಕೆಟ್ ಆಡಿದ ಮೂವರು ಭಾರತೀಯ ಕ್ರಿಕೆಟಿಗರ ಬಗ್ಗೆ ತಿಳಿದುಕೊಳ್ಳೋಣ.

1. ಅಬ್ದುಲ್ ಹಫೀಜ್ ಕರ್ದಾರ್: ಅಬ್ದುಲ್ ಹಫೀಜ್ ಕರ್ದಾರ್ ಅವರನ್ನು ಪಾಕಿಸ್ತಾನ ಕ್ರಿಕೆಟ್‌ನ ಪಿತಾಮಹ ಎಂದು ಪರಿಗಣಿಸಲಾಗಿದೆ. ಅಬ್ದುಲ್ ಹಫೀಜ್ 1925 ರಲ್ಲಿ ಲಾಹೋರ್‌ನಲ್ಲಿ ಜನಿಸಿದರು. ಪಾಕಿಸ್ತಾನ ಕ್ರಿಕೆಟ್ ತಂಡದ ಮೊದಲ ನಾಯಕರೂ ಆಗಿದ್ದರು. ಅವರು ಭಾರತಕ್ಕಾಗಿ 3 ಟೆಸ್ಟ್ ಪಂದ್ಯಗಳನ್ನು ಮತ್ತು ಪಾಕಿಸ್ತಾನಕ್ಕಾಗಿ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರ ವೃತ್ತಿಜೀವನದಲ್ಲಿ, ಅವರು 26 ಟೆಸ್ಟ್ ಪಂದ್ಯಗಳಲ್ಲಿ 927 ರನ್ ಗಳಿಸಿದ್ದಾರೆ. 21 ವಿಕೆಟ್ಗಳನ್ನು ಸಹ ಪಡೆದಿದ್ದಾರೆ. ಅಬ್ದುಲ್ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನಕ್ಕಾಗಿ ಭಾರತದ ವಿರುದ್ಧ ಆಡಿದರು. 1952ರ ಲಕ್ನೋ ಟೆಸ್ಟ್‌ನಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿದ್ದು ಕರ್ದಾರ್ ಅವರ ನಾಯಕತ್ವದಲ್ಲಿ.

2. ಅಮೀರ್ ಇಲಾಹಿ: ಅಮೀರ್ ಇಲಾಹಿ ಭಾರತ ಮತ್ತು ಪಾಕಿಸ್ತಾನಕ್ಕಾಗಿ ಕ್ರಿಕೆಟ್ ಆಡಿದ ಎರಡನೇ ಕ್ರಿಕೆಟಿಗ. ಅಮೀರ್ 1947 ರಲ್ಲಿ ಭಾರತಕ್ಕಾಗಿ ತಮ್ಮ ಏಕೈಕ ಟೆಸ್ಟ್ ಆಡಿದರು. ಇದಾದ ನಂತರ ಅವರು ಪಾಕಿಸ್ತಾನಕ್ಕಾಗಿ 5 ಟೆಸ್ಟ್ ಪಂದ್ಯಗಳನ್ನು ಆಡಿದರು. ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಕೇವಲ 6 ಟೆಸ್ಟ್ ಪಂದ್ಯಗಳಲ್ಲಿ ಅವರು 7 ವಿಕೆಟ್ ಮತ್ತು 82 ರನ್ ಗಳಿಸಿದರು. ಅವರು ದೇಶೀಯ ಕ್ರಿಕೆಟ್‌ನಲ್ಲಿ ಬಹಳ ಯಶಸ್ವಿಯಾಗಿದ್ದರು. ಬರೋಡಾ ತಂಡದ ಪ್ರಮುಖ ಆಟಗಾರರಾಗಿದ್ದರು. ಅಮೀರ್ ಇಲಾಹಿ ತಮ್ಮ ಲೆಗ್ ಬ್ರೇಕ್‌ಗೆ ಪ್ರಸಿದ್ಧರಾಗಿದ್ದರು. 

ಇದನ್ನೂ ಓದಿ: Mohammed Shami : ಮೊಹಮ್ಮದ್ ಶಮಿ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ ಪತ್ನಿ ಹಸಿನ್ ಜಹಾನ್!

3. ಗುಲ್ ಮೊಹಮ್ಮದ್ : ಗುಲ್ ಮೊಹಮ್ಮದ್ ಅವರು 15 ಅಕ್ಟೋಬರ್ 1921 ರಂದು ಜನಿಸಿದರು. ಸ್ವಾತಂತ್ರ್ಯದ ಮೊದಲು ಅವರು ಭಾರತಕ್ಕಾಗಿ ಕ್ರಿಕೆಟ್ ಆಡಿದರು, ಆದರೆ ವಿಭಜನೆಯ ನಂತರ ಅವರು ಪಾಕಿಸ್ತಾನಕ್ಕೆ ತೆರಳಿದರು. ಗುಲ್ 1946 ಮತ್ತು 1952 ರ ನಡುವೆ ಭಾರತಕ್ಕಾಗಿ 8 ಟೆಸ್ಟ್ ಪಂದ್ಯಗಳನ್ನು ಆಡಿದರು. 1956 ರಲ್ಲಿ ಅವರು ಪಾಕಿಸ್ತಾನಕ್ಕಾಗಿ ತಮ್ಮ ಏಕೈಕ ಕ್ರಿಕೆಟ್ ಆಡಿದರು. ಗುಲ್ ತಮ್ಮ ವೃತ್ತಿಜೀವನದಲ್ಲಿ 9 ಟೆಸ್ಟ್ ಪಂದ್ಯಗಳಲ್ಲಿ 205 ರನ್ ಗಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ವಿಜಯ್ ಹಜಾರೆ ಜೊತೆಗಿನ ಅವರ ಜೊತೆಯಾಟ ಇಂದಿಗೂ ಸ್ಮರಣೀಯವಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News