Sachin Tendulkar : ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಕರೆಯಲಾಗುತ್ತದೆ.ಏಕದಿನದಲ್ಲಿ 18,426 ರನ್ ಮತ್ತು ಟೆಸ್ಟ್‌ನಲ್ಲಿ 15,921 ರನ್ ಸಚಿನ್ ಖಾತೆಯಲ್ಲಿದೆ. ಸಚಿನ್ ತೆಂಡೂಲ್ಕರ್ ಬ್ಯಾಟ್ಸ್‌ಮನ್ ಆಗಿ ಬಹಳ ಯಶಸ್ವಿಯಾಗಿದ್ದರು.ಆದರೆ, ಅವರ ವೃತ್ತಿಜೀವನದಲ್ಲಿ ನಾಯಕನ ಸ್ಥಾನದಿಂದ ಕೆಳಗಿಳಿಯುವ ಸಂದರ್ಭ ಬಂದಿತ್ತು.ತಾನು ನಾಯಕನ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಸಚಿನ್ ಬಂದಾಗ, ಹೊಸ ನಾಯಕನನ್ನು ಹುಡುಕುವ ಸವಾಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಮುಂದಿತ್ತು.
ನಾಯಕನ ಸ್ಥಾನದಿಂದ ಕೆಳಗಿಳಿದ ಸಚಿನ್ :
ಸಚಿನ್ ತೆಂಡೂಲ್ಕರ್ 1996 ರಿಂದ 2000 ರವರೆಗೆ ಟೀಮ್ ಇಂಡಿಯಾದ ನಾಯಕರಾಗಿದ್ದರು.1999ರಲ್ಲಿ,ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಭಾರತವು 0-3 ಸೋಲನ್ನು ಎದುರಿಸಬೇಕಾಯಿತು.ಇದಾದ ಬಳಿಕ ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಏಕದಿನ ತ್ರಿಕೋನ ಸರಣಿಯಲ್ಲೂ ಭಾರತದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಆಸ್ಟ್ರೇಲಿಯಾ ಪ್ರವಾಸದ ನಂತರ,ಭಾರತವು 2000ರಲ್ಲಿ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 0-2 ಸೋಲನ್ನು ಎದುರಿಸಬೇಕಾಯಿತು.ಈ ನಿರಾಶಾದಾಯಕ ಪ್ರದರ್ಶನದ ನಂತರ ಸಚಿನ್ ಟೀಂ ಇಂಡಿಯಾ ನಾಯಕತ್ವಕ್ಕೆ ವಿದಾಯ ಹೇಳಿದ್ದರು.
ಇದನ್ನೂ ಓದಿ : ರೋಹಿತ್ ಶರ್ಮಾ-ಯೋಗೆಶ್ ಪಟೇಲ್ ಫೋಟೋದಲ್ಲಿ ಪವಾಡ! ಭುಜದ ಮೇಲೆ ಮೂರನೇ ಕೈ ಪ್ರತ್ಯಕ್ಷ.. ವಿಚಿತ್ರ ಕಂಡು ಫಾನ್ಸ್ ಶಾಕ್
ಸಚಿನ್ ವೃತ್ತಿ ಜೀವನದ ದೊಡ್ಡ ನೋವು :
ಸಚಿನ್ ತೆಂಡೂಲ್ಕರ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ ಆ ಕಷ್ಟದ ಸಮಯದಲ್ಲಿ ಚಂದು ಬೋರ್ಡೆ ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರರಾಗಿದ್ದರು. ತಮ್ಮನ್ನು ಕ್ಯಾಪ್ಟನ್ಸಿಯಿಂದ ಮುಕ್ತಗೊಳಿಸುವಂತೆ ಸ್ವತಃ ಸಚಿನ್ ಕೇಳಿಕೊಂಡಿದ್ದರಂತೆ. ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ನಾಯಕತ್ವದಲ್ಲಿ ಆಸಕ್ತಿ ಹೊಂದಿಲ್ಲ.ಬದಲಾಗಿ ತಮ್ಮ ಬ್ಯಾಟಿಂಗ್‌ನತ್ತ ಗಮನ ಹರಿಸಲು ಬಯಸುತ್ತಾರೆ ಎಂದು ಚಂದು ಬೋರ್ಡೆ ಹೇಳಿದ್ದರು.ಚಂದು ಬೋರ್ಡೆ ಅವರು 1984 ರಿಂದ 1986 ರವರೆಗೆ ಮತ್ತು 1999 ರಿಂದ 2002 ರವರೆಗೆ ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರರಾಗಿದ್ದರು.ಸಚಿನ್ ತೆಂಡೂಲ್ಕರ್ 1996 ರಿಂದ 2000 ರವರೆಗೆ ಟೀಮ್ ಇಂಡಿಯಾದ ನಾಯಕರಾಗಿದ್ದರು.
ಹೊಸ ನಾಯಕನಾಗಿ ಗಂಗೂಲಿಗೆ ಪಟ್ಟ :
ನಾವು ಅವರನ್ನು ಆಸ್ಟ್ರೇಲಿಯಾಕ್ಕೆ ನಾಯಕನಾಗಿ ಕಳುಹಿಸಿದ್ದೇವೆ. ಅಲ್ಲಿಂದ ಹಿಂದಿರುಗುವಾಗ ಅವರು ನಾಯಕನಾಗಿ ಮುಂದುವರಿಯಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದರು ಎಂದು ಚಂದು ಬೋರ್ಡೆ ಹೇಳಿದ್ದಾರೆ.ಸಚಿನ್ ಪದೇ ಪದೇ ನಾಯಕ ಸ್ಥಾನವನ್ನು ನಿರಾಕರಿಸಿದ ಕಾರಣ ಆಯ್ಕೆ ಸಮಿತಿಯು ಗಂಗೂಲಿ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಿತು'ಎಂದು ಹೇಳಿದ್ದರು.
ಇದನ್ನೂ ಓದಿ : ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ಟಿ20 ನಾಯಕತ್ವಕ್ಕೆ ವನಿಂದು ಹಸರಂಗ ರಾಜೀನಾಮೆ!
2000ನೇ ಇಸವಿಯಲ್ಲಿ ನಾಯಕತ್ವ ತ್ಯಜಿಸಿದ್ದ ಸಚಿನ್ :
ಸಚಿನ್ ತೆಂಡೂಲ್ಕರ್ 98 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು. 2000ನೇ ಇಸವಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಸಚಿನ್ ಟೀಂ ಇಂಡಿಯಾ ನಾಯಕತ್ವಕ್ಕೆ ವಿದಾಯ ಹೇಳಿದ್ದರು.ಇದಾದ ಬಳಿಕ ಆಯ್ಕೆ ಸಮಿತಿ ಗಂಗೂಲಿ ಅವರನ್ನು ನೂತನ ನಾಯಕರನ್ನಾಗಿ ನೇಮಿಸಿತ್ತು. ಸೌರವ್ ಗಂಗೂಲಿ ಅವರು 49 ಟೆಸ್ಟ್ ಮತ್ತು 147 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ