ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: 23ರ ಹರೆಯದ ಸ್ಟಾರ್ ಕ್ರಿಕೆಟಿಗ ದೋಷಿ ಎಂದು ಸಾಬೀತು

Sandeep Lamichhane Rape Case: ನೇಪಾಳದ ಮಾಜಿ ನಾಯಕ ಸಂದೀಪ್ ಲಮಿಚಾನೆ (23) ಅವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶುಕ್ರವಾರ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

Written by - Bhavishya Shetty | Last Updated : Dec 30, 2023, 07:50 PM IST
    • ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ನೇಪಾಳದ ಮಾಜಿ ನಾಯಕ ಸಂದೀಪ್ ಲಮಿಚಾನೆ
    • ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ
    • ನೇಪಾಳದ ಕಠ್ಮಂಡು ಜಿಲ್ಲಾ ನ್ಯಾಯಾಲಯ ಶಿಕ್ಷೆಯ ಕುರಿತು ತೀರ್ಪು ಪ್ರಕಟಿಸಿಲ್ಲ
ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: 23ರ ಹರೆಯದ ಸ್ಟಾರ್ ಕ್ರಿಕೆಟಿಗ ದೋಷಿ ಎಂದು ಸಾಬೀತು title=
Sandeep Lamichhane

Sandeep Lamichhane Case: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ನೇಪಾಳದ ಮಾಜಿ ನಾಯಕ ಸಂದೀಪ್ ಲಮಿಚಾನೆ, ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದೆ. ನೇಪಾಳದ ಕಠ್ಮಂಡು ಜಿಲ್ಲಾ ನ್ಯಾಯಾಲಯ ಆತನ ಶಿಕ್ಷೆಯ ಕುರಿತು ಇನ್ನೂ ತೀರ್ಪು ಪ್ರಕಟಿಸಿಲ್ಲ.

ಇದನ್ನೂ ಓದಿ: ಅನಧಿಕೃತ ಕಟ್ಟಡಗಳ ತೆರವು: 150 ಕೋಟಿ ಬೆಲೆಬಾಳುವ ಜಾಗ ವಶಕ್ಕೆ ಪಡೆದ ಬಿಡಿಎ

ನೇಪಾಳದ ಮಾಜಿ ನಾಯಕ ಸಂದೀಪ್ ಲಮಿಚಾನೆ (23) ಅವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶುಕ್ರವಾರ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಕಠ್ಮಂಡುವಿನ ಹೊಟೇಲ್ ಕೊಠಡಿಯಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ಲಾಮಿಚಾನೆ ಅವರನ್ನು ನೇಪಾಳದ ನ್ಯಾಯಾಲಯ ಜನವರಿಯಲ್ಲಿ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಮುಸ್ಲಿಂನನ್ನು ಮದುವೆಯಾದ ಕರೀನಾ ಈಗ ಅನುಸರಿಸುತ್ತಿರುವ ಧರ್ಮ ಯಾವುದು ಗೊತ್ತಾ?

ಐಪಿಎಲ್‌’ನಲ್ಲಿ ಆಡಿದ ನೇಪಾಳದ ಮೊದಲ ಕ್ರಿಕೆಟಿಗ:

ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ (ಐಪಿಎಲ್) ಆಡಿದ ನೇಪಾಳದ ಮೊದಲ ಕ್ರಿಕೆಟಿಗ ಸಂದೀಪ್ ಲಮಿಚಾನೆ. 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಪಾದಾರ್ಪಣೆ ಮಾಡಿದರು. ನ್ಯಾಯಮೂರ್ತಿ ಶಿಶಿರ್ ರಾಜ್ ಧಕಲ್ ಅವರ ಏಕ ಪೀಠ ಶುಕ್ರವಾರ ಈ ಆದೇಶ ನೀಡಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ಭಾನುವಾರದಂದು ಅಂತಿಮ ವಿಚಾರಣೆ ಆರಂಭವಾಗಿದ್ದು, ಬಳಿಕ ತೀರ್ಪು ಪ್ರಕಟಿಸಲಾಗಿದೆ. ಕಠ್ಮಂಡು ಜಿಲ್ಲಾ ನ್ಯಾಯಾಲಯ ಶುಕ್ರವಾರ ಲಮಿಚಾನೆ ಅತ್ಯಾಚಾರದ ಅಪರಾಧಿ ಎಂದು ತೀರ್ಪು ನೀಡಿದೆ. ಜನವರಿ 12 ರಂದು ಪಟಾನ್ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಲಮಿಚಾನೆ ಅವರ ಮರುಪರಿಶೀಲನಾ ಅರ್ಜಿಯ ಮೇಲೆ, ನ್ಯಾಯಾಧೀಶ ಧ್ರುವ ರಾಜ್ ನಂದಾ ಮತ್ತು ರಮೇಶ್ ದಹಲ್ ಅವರ ಜಂಟಿ ಪೀಠವು ಷರತ್ತುಗಳೊಂದಿಗೆ 20 ಲಕ್ಷ ರೂಪಾಯಿಗಳ ಜಾಮೀನು ಬಾಂಡ್‌’ನಲ್ಲಿ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News