close

News WrapGet Handpicked Stories from our editors directly to your mailbox

ಹಾಂಗ್ ಕಾಂಗ್ ಬ್ಯಾಡ್ಮಿಂಟನ್ ಟೂರ್ನಿ :ದ್ವೀತಿಯ ಹಂತಕ್ಕೆ ಸಿಂಧು, ಸೈನಾ ಮತ್ತು ಪ್ರಣಯ್

                           

Updated: Nov 22, 2017 , 06:24 PM IST
ಹಾಂಗ್ ಕಾಂಗ್ ಬ್ಯಾಡ್ಮಿಂಟನ್ ಟೂರ್ನಿ :ದ್ವೀತಿಯ ಹಂತಕ್ಕೆ ಸಿಂಧು, ಸೈನಾ ಮತ್ತು ಪ್ರಣಯ್

ಹಾಂಗ್ ಕಾಂಗ್:  ಇಲ್ಲಿ ಬುಧುವಾರ ನಡೆಯುತ್ತಿರುವ ಹಾಂಗ್ ಕಾಂಗ್ ಓಪನ್ ಸೀರೀಸ್ನ ಸಿಂಗಲ್ಸ್ ವಿಭಾಗದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪಿ.ವಿ.ಸಿಂಧು, ಸೈನಾ ನೆಹವಾಲ್ ಮತ್ತು ಪ್ರಣಯ್ ಎರಡನೆಯ ಸುತ್ತಿಗೆ ಮುನ್ನಡಿ ಇಟ್ಟಿದ್ದಾರೆ.

ಸಿಂಧು  ಹಾಂಗ್ ಕಾಂಗ್ ನ ಲಿಯಾಂಗ್ ಯೇಟ್ ಯೀ ಅವರನ್ನು 21-18, 21-10 ನೇರ ಸೆಟ್ ಗಳ ಮೂಲಕ ಸೋಲಿಸಿದರೆ,ಸೈನಾ ಡೆನ್ಮಾರ್ಕನ ಮೆಟ್ಟೆ ಪೌಲ್ಸೋನ್ ವಿರುದ್ದ 21-19, 23-21 ಸೆಟ್ ಗಳ ಮೂಲಕ ಗೆಲುವನ್ನು ದಾಖಲಿಸಿದ್ದಾರೆ.

ಇನ್ನೊಂದಡೆಗೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ  ಹಾಂಗ್ ಕಾಂಗ್ ನ  ಹು ಯೂನ್ ರವರ ವಿರುದ್ದ ಸತತ ಒಂದು ಗಂಟೆ  ಒಂದು ನಿಮಿಷಗಳ ಹೋರಾಟದ ಪಂದ್ಯದಲ್ಲಿ 19-21, 21-17, 21-15 ಅಂತರದಲ್ಲಿ ಗೆಲುವು ಸಾಧಿಸಿ ಎರಡನೆಯ ಹಂತಕ್ಕೆ ಮುನ್ನುಗ್ಗಿದ್ದಾರೆ. 

ಮತ್ತೊಂದು ಕಡೆಗೆ ಪಿ ಕಶ್ಯಪ ತಮ್ಮ ಸಿಂಗಲ್ಸ್ ವಿಭಾಗದ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ,ಮಹಿಳೆಯ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಮೊದಲ ಹಂತದ ಪಂದ್ಯದಲ್ಲಿಯೇ ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ.