How RCB Can Qualify For WPL 2024 Playoffs: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಆದರೆ ಇದೀಗ WPL 2024ರಲ್ಲಿ ಅಂತಿಮ ಪ್ಲೇಆಫ್ ಸ್ಥಾನಕ್ಕಾಗಿ ಮೂರು ತಂಡಗಳ ಮಧ್ಯೆ ಪೈಪೋಟಿ ಶುರುವಾಗಿದೆ. ತಲಾ 10 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಾಯಿಂಟ್ ಟೇಬಲ್’ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಇದನ್ನೂ ಓದಿ: ಎಳನೀರಿಗೆ ಈ ಬೀಜ ಸೇರಿಸಿ ಕುಡಿಯಿರಿ… ಕರಗಿಸಲು ಕಠಿಣವೆನಿಸುವ ಸೊಂಟದ ಹಠಮಾರಿ ಬೊಜ್ಜು ಸುಲಭವಾಗಿ ಕರಗುತ್ತೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ಆರು ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ಜೊತೆಗೆ +0.027 ನ ಪಾಸಿಟಿವ್ ನೆಟ್ ರನ್ ರೇಟ್ (NRR) ಹೊಂದಿದೆ. ಇನ್ನೊಂದೆಡೆ ಯುಪಿ ವಾರಿಯರ್ಜ್ ಕೂಡ ಆರು ಪಾಯಿಂಟ್ ಹೊಂದಿದೆ, ಆದರೆ ಮೈನಸ್ ನೆಟ್ ರನ್ ರೇಟ್ ಹೊಂದಿರುವ ಕಾರಣ ಆರ್ ಸಿ ಬಿಗಿಂತ ಹಿಂದುಳಿದಿದೆ. ಇನ್ನು ಗುಜರಾತ್ ಜೈಂಟ್ಸ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, 4 ಅಂಕ ಪಡೆದಿದೆ.
ಎಲ್ಲಾ ಮೂರು ತಂಡಗಳು ಕೊನೆಯ ನಾಕೌಟ್ ಸ್ಥಾನದ ಓಟದಲ್ಲಿದ್ದು, ಪಾಸಿಟಿವ್ ನೆಟ್ ರನ್ ರೇಟ್ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಅಂದಹಾಗೆ ಈ ಕೆಳಗೆ ಇನ್ನೆಷ್ಟು ಪಂದ್ಯ ಗೆದ್ದರೆ, ಯಾವ ತಂಡ ನಾಕೌಟ್ ಹಂತ ತಲುಪಲಿದೆ ಎಂಬ ಲೆಕ್ಕಾಚಾರವನ್ನು ನೋಡೋಣ.
ಮಾರ್ಚ್ 12 ರಂದು ಅಂದರೆ ಇಂದು ಆರ್ ಸಿ ಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಇದರಲ್ಲಿ RCB ತಂಡ ಗೆದ್ದರೆ, ಪ್ಲೇಆಫ್’ಗೆ ಅರ್ಹತೆ ಪಡೆಯುತ್ತದೆ. ಇದುವರೆಗೆ ಆಡಿದ 7 ಪಂದ್ಯಗಳ ಪೈಕಿ ಆರ್’ಸಿಬಿ ತಂಡ 3 ಪಂದ್ಯ ಗೆದ್ದು 4ರಲ್ಲಿ ಸೋತಿದೆ. RCB ನಿವ್ವಳ ರನ್ ರೇಟ್ +0.027 ಆಗಿದೆ. ಹೀಗಿರುವಾಗ ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್’ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅದೇ ಸಮಯದಲ್ಲಿ,
ಇದಲ್ಲದೇ ಗುಜರಾತ್ ಜೈಂಟ್ಸ್ ಮಾರ್ಚ್ 13ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಇದರಲ್ಲಿ ಗುಜರಾತ್ ಭರ್ಜರಿ ಜಯಗಳಿಸಬೇಕಿದೆ. ಹೀಗಾದಲ್ಲಿ ಗುಜರಾತ್ ತಂಡವು ನೆಟ್ ರನ್ ರೇಟ್’ನಲ್ಲಿ ಯುಪಿಯನ್ನು ಹಿಂದಿಕ್ಕಿ ನಂತರ ಪ್ಲೇ ಆಫ್ಗೆ ಅರ್ಹತೆ ಪಡೆಯುತ್ತದೆ.
ಇದನ್ನೂ ಓದಿ: IPL: ಕ್ಯಾಪ್ಟನ್ ಆಗಿ ಮುಂಬೈ ತಂಡ ಸೇರಿದ ಹಾರ್ದಿಕ್: ಡ್ರೆಸ್ಸಿಂಗ್ ರೂಂನಲ್ಲಿ ಗಣಪತಿ ಪೂಜೆ
ಡಬ್ಲ್ಯುಪಿಎಲ್ 2024ರ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಸ್ಥಾನದಲ್ಲಿದೆ. ಆರ್’ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 1 ರನ್ ಅಂತರದ ಗೆಲುವು ಸಾಧಿಸಿದ ಬಳಿಕ 10 ಅಂಕಗಳನ್ನು ಪಡೆದಿದೆ. ಡೆಲ್ಲಿ ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ರಲ್ಲಿ ಸೋತಿದೆ. ಹೀಗಾಗಿ ನೆಟ್ ರನ್ ರೇಟ್ +0.918 ಆಗಿದೆ. ಆರ್ ಸಿ ಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನೊಂದಿಗೆ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ. ಅದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ WPL 2024 ರ ಪ್ಲೇ ಆಫ್ಗೆ ಪ್ರವೇಶಿಸಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ