IPL: ಕ್ಯಾಪ್ಟನ್ ಆಗಿ ಮುಂಬೈ ತಂಡ ಸೇರಿದ ಹಾರ್ದಿಕ್: ಡ್ರೆಸ್ಸಿಂಗ್ ರೂಂನಲ್ಲಿ ಗಣಪತಿ ಪೂಜೆ

Mumbai Indians Video: ಮುಂಬೈನ ಡ್ರೆಸ್ಸಿಂಗ್ ರೂಂನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಅದಾದ ಬಳಿಕ ಗಣಪತಿಗೆ ಪೂಜೆ ಸಲ್ಲಿಸಿದ ಹಾರ್ದಿಕ್, ದೇವರಿಗೆ ಹೂವಿನ ಮಾಲೆ ಸಮರ್ಪಿಸಿದರು, ಇದೇ ಸಂದರ್ಭದಲ್ಲಿ ಮಾರ್ಕ್ ಬೌಚರ್ ಕೂಡ ಜೊತೆಗಿದ್ದರು.

Written by - Bhavishya Shetty | Last Updated : Mar 12, 2024, 07:13 PM IST
    • ಐಪಿಎಲ್ 17ನೇ ಸೀಸನ್ ಮಾರ್ಚ್ 22 ರಂದು ಆರಂಭ
    • ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ
    • ಮುಂಬೈನ ಡ್ರೆಸ್ಸಿಂಗ್ ರೂಂನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಅದ್ಧೂರಿ ಸ್ವಾಗತ
IPL: ಕ್ಯಾಪ್ಟನ್  ಆಗಿ ಮುಂಬೈ ತಂಡ ಸೇರಿದ ಹಾರ್ದಿಕ್: ಡ್ರೆಸ್ಸಿಂಗ್ ರೂಂನಲ್ಲಿ ಗಣಪತಿ ಪೂಜೆ title=
Hardik Pandya

Mumbai Indians Video: ಐಪಿಎಲ್ 17ನೇ ಸೀಸನ್ ಮಾರ್ಚ್ 22 ರಂದು ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಆರಂಭಿಕ ಪಂದ್ಯ ನಡೆಯಲಿದೆ. ಆ ಬಳಿಕ ಮಾರ್ಚ್ 24ರಂದು ಗುಜರಾತ್ ಟೈಟಾನ್ಸ್ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಐಪಿಎಲ್ ಆರಂಭಕ್ಕೂ ಮುನ್ನವೇ ಎಲ್ಲಾ ತಂಡಗಳ ಆಟಗಾರರು ಫ್ರಾಂಚೈಸಿ ಕ್ಯಾಂಪ್ ತಲುಪಿದ್ದು, ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಸೋಮವಾರ ತಂಡವನ್ನು ಸೇರಿಕೊಂಡಿದ್ದಾರೆ.

ಇದನ್ನೂ ಓದಿ: "ಇನ್ಮುಂದೆ ಪಾಕಿಸ್ತಾನದ ಹಿಂದೂಗಳು ಮುಕ್ತವಾಗಿ ಉಸಿರಾಡಬಹುದು": CAAಗೆ ಪಾಕ್ ಕ್ರಿಕೆಟಿಗನ ಬೆಂಬಲ

ಮುಂಬೈನ ಡ್ರೆಸ್ಸಿಂಗ್ ರೂಂನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಅದಾದ ಬಳಿಕ ಗಣಪತಿಗೆ ಪೂಜೆ ಸಲ್ಲಿಸಿದ ಹಾರ್ದಿಕ್, ದೇವರಿಗೆ ಹೂವಿನ ಮಾಲೆ ಸಮರ್ಪಿಸಿದರು, ಇದೇ ಸಂದರ್ಭದಲ್ಲಿ ಮಾರ್ಕ್ ಬೌಚರ್ ಕೂಡ ಜೊತೆಗಿದ್ದರು.

ಇದನ್ನೂ ಓದಿ: ಶ್ರೀರಸ್ತು ಶುಭಮಸ್ತು ಸೀರಿಯಲ್ ‘ದತ್ತಾ’ ಖ್ಯಾತಿಯ ವೆಂಕಟರಾವ್ ನಿಜವಾದ ವಯಸ್ಸೆಷ್ಟು?

ಹಾರ್ದಿಕ್ ಪಾಂಡ್ಯ 2022 ರಲ್ಲಿ ಗುಜರಾತ್ ಟೈಟಾನ್ಸ್ ಸೇರಿಕೊಂಡು, ಅದೇ ತಂಡದ ನಾಯಕತ್ವ ವಹಿಸಿದ್ದರು. ಎರಡು ಬಾರಿ ತಂಡವನ್ನು ಮುನ್ನಡೆಸಿದ್ದಲ್ಲದೆ, ಒಂದು ಬಾರಿ ಫೈನಲ್ ಪ್ರವೇಶ ಮತ್ತು ಮತ್ತೊಂದು ಬಾರಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ವರ್ಷ ಮತ್ತೆ ಮುಂಬೈ ಫ್ರಾಂಚೈಸಿ 15 ಕೋಟಿ ರೂ.ಗೆ ವ್ಯಾಪಾರ ಮಾಡುವ ಮೂಲಕ ಅವರನ್ನು ಮರಳಿ ತಂಡಕ್ಕೆ ತೆಗೆದುಕೊಂಡಿತು.

ಐಪಿಎಲ್ 17ನೇ ಸೀಸನ್ ಮಾರ್ಚ್ 22 ರಂದು ಆರಂಭ

ಮುಂಬೈ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ

ಮುಂಬೈನ ಡ್ರೆಸ್ಸಿಂಗ್ ರೂಂನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಅದ್ಧೂರಿ ಸ್ವಾಗತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News