ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯಗೆ ಎರಡು ವರ್ಷ ನಿಷೇಧ ಹೇರಿದ ಐಸಿಸಿ!

ಜಯಸೂರ್ಯ ಅವರು ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಆರ್ಟಿಕಲ್ 2.4.6 ಹಾಗೂ 2.4.7 ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಐಐಸಿ ನಿಷೇಧ ಹೇರಿದೆ.

Last Updated : Feb 26, 2019, 08:24 PM IST
ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯಗೆ ಎರಡು ವರ್ಷ ನಿಷೇಧ ಹೇರಿದ ಐಸಿಸಿ! title=

ನವದೆಹಲಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್​ ಜಯಸೂರ್ಯ ಅವರನ್ನು ಕ್ರಿಕೆಟ್​ನ ಎಲ್ಲ ಪ್ರಕಾರಗಳಿಂದಲೂ ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ ಎರಡು ವರ್ಷಗಳ ಕಾಲ ನಿಷೇಧಿಸಿದೆ.

ಈ ಬಗ್ಗೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ಸನತ್ ಜಯಸೂರ್ಯ ಅವರು ಎರಡು ವಿಭಾಗಗಳಲ್ಲಿ ಭ್ರಷ್ಟಾಚಾರ ವಿರೋಧಿ ಕಾನೂನು(ACU)ಗಳನ್ನು ಉಲ್ಲಂಘಿಸಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಎಲ್ಲಾ ಪ್ರಕಾರದ ಕ್ರಿಕೆಟ್ ನಿಂದ ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ" ಎಂದು ತಿಳಿಸಿದೆ. 

ಜಯಸೂರ್ಯ ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಆರ್ಟಿಕಲ್ 2.4.6 ಹಾಗೂ 2.4.7 ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಹಾಗೂ  ಜಯಸೂರ್ಯ ದಾಖಲೆಗಳನ್ನು ನಾಶಪಡಿಸುವ ಮೂಲಕ ತನಿಖೆಗೆ ಅಡೆತಡೆ ಉಂಟು ಮಾಡಿದ ಕಾರಣ ಐಸಿಸಿ ಈ ಶಿಕ್ಷೆ ವಿಧಿಸಿದೆ. 

ಸಾಮಾನ್ಯವಾಗಿ ಆರ್ಟಿಕಲ್ 2.4.6 ನಿಯಮ ಉಲ್ಲಂಘನೆಗೆ ಕನಿಷ್ಠ 6  ತಿಂಗಳ ಹಾಗೂ ಗರಿಷ್ಠ 5 ವರ್ಷದ ನಿಷೇಧದ ಶಿಕ್ಷೆ ವಿಧಿಸಲಾಗುತ್ತದೆ. 

Trending News