India penalty overs : ಭಾರತವು ದಕ್ಷಿಣ ಆಫ್ರಿಖಾ ವಿರುಧ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ಬೆನ್ನಲ್ಲೆ ಐಸಿಸಿಯಿಂದ ಭಾರಿ ದಂಡಕ್ಕೆ ಒಳಗಾಗಿದೆ. ಐಸಿಸಿ ವಿಧಿಸಿದ ಈ ದಂಡವು, ಮೊದಲೇ ಸೋಲಿನಿಂದ ನಿರಾಷೆಯಾಗಿದ್ದ ಭಾರತಕ್ಕೆ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ. ಭಾರತವು ದಕ್ಷಿಣ ಆಫ್ರಿಕಾ ವಿರುಧ್ದ 32 ರನ್‌ಗಳಿಂದ ಹೀನಯಾ ಸೋಲನ್ನು ಅನುಭವಿಸಿತ್ತು, ಅಷ್ಟೇ ಅಲ್ಲದೇ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ಭಾರಿ ತಲೆದಂಡವನ್ನು ನೀಡಿದೆ.
ಭಾರತದ ತಂಡವು ತನ್ನ ನಿಧಾನ ಗತಿಯ ಬೌಲಿಂಗ್‌ನಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸ್ಥಾನದಲ್ಲಿ 2 ಅಂಕಗಳ ಖಡಿತಕ್ಕೆ ಒಳಪಟ್ಟಿದೆ. ಈ ಮೂಲಕ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ರಾಂಕಿಗ್ ಪಟ್ಟಿಯಿಂದ ಒಂದು ಸ್ಥಾನ ಕುಸಿತ ಕಂಡಿದೆ. ಪೆಣಾಲ್ಟಿಗೂ ಮೊದಲು ಭಾರತವು 5ನೇ ಸ್ಥಾನದಲ್ಲಿತ್ತು, ಈ ಭಾರಿ ದಂಡದಿಂದ ಒಂದು ಸ್ಥಾನವನ್ನು ಕಳೆದುಕೊಂಡು 6ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಈ ಬಗ್ಗೆ ಐಸಿಸಿ ಸ್ಷಷ್ಟ ಪಡಿಸಿದ್ದು, ಸಮಯ ಭತ್ಯಗಳನ್ನು ಪರಿಗಣಿಸಿದಾಗ ಭಾರತವು ನಿಗಧಿತ ಗುರಿಗಳಗಿಂತ ಎರಡು ಓವರ್‌ನಲ್ಲಿ ಹಿಂದೆ ಉಳಿದಿತ್ತು. ನಿಧಾನಗತಿಯ ಬೌಲಿಂಗ್ ಕಾರಣಕ್ಕೆ ಪಂದ್ಯದ ಶೇಕಡಾ 10ರಷ್ಟು ದಂಡವನ್ನು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಭಾರತದ 2 ಅಂಕಗಳನ್ನು ಖಡಿತ ಮಾಡಿರುವುದಾಗಿ ಐಸಿಸಿ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳ ಸಂದರ್ಭದಲ್ಲಿ, ಆಟಗಾರರು ತಮ್ಮ ತಂಡವು ನಿಗದಿತ ರೀತಿಯಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಐದು ಶೇಕಡಾ ದಂಡವನ್ನು ವಿಧಿಸಲಾಗುತ್ತದೆ. ಹಾಗೂ ಹೆಚ್ಚುವರಿ ಒಂದು ಒವರ್‌ನ ಸಮಯ ವ್ಯರ್ಥ ಮಾಡಿದರೆ ತಲಾ 1 ಅಂಕಗಲನ್ನು ಖಡಿತ ಮಾಡಲಾಗುತ್ತದೆ.
ಭಾರತವು ಈ ರೀತಿಯಲ್ಲಿ 2 ಒವರ್‌ಗಳಷ್ಟು ಸಮಯವನ್ನು ವ್ಯರ್ಥಮಾಡಿದ ಕಾರಣಕ್ಕೆ ಅವರಿಗೆ 2 ಅಂಕಗಳ ದಂಡವನ್ನು ವಿಧಿಸಿದೆ. ಇದರಿಂದ ಭಾರತಕ್ಕೆ ಒಂದು ಸ್ಥಾನದಲ್ಲಿ ಭಾರಿ ನಷ್ಟವಾಗಿದೆ. ಈ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ನಿಧಾನಗತಿಯ ಬೌಲಿಂಗ್ ಮಾಡಿದಕ್ಕೆ ತಪ್ಪೊಪ್ಪಿ ಕೊಂಡಿದ್ಧಾರೆ. ಪೆನಾಲ್ಟಿ ಹಾಕುವುದಕ್ಕೂ ಮೊದಲು ಭಾರತದ ಟೆಸ್ಟ್ ಅಂಕಗಳು 16 ಆಗಿದ್ದು, 5ನೇ ಸ್ಥಾನದಲ್ಲಿತ್ತು. ಆದರೆ ಇದೀಗ ದಂಡ ವಿಧಿಸಿದ ಕಾರಣಕ್ಕೆ 14ಕ್ಕೆ ಕುಸಿತ ಕಂಡಿದ್ದು 6ನೇ ಸ್ಥಾನಕ್ಕೆ ಇಳಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.