ICC ODI Ranking 2021 - ನವದೆಹಲಿ: ಐಸಿಸಿ (International Cricket Council) ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಇನ್ನೊಂದೆಡೆ ಬೌಲರ್ ಗಳ ಪಟ್ಟಿಯಲ್ಲಿ ಭಾರತೀಯ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ODI ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ (Virat Kohli) ಕ್ರಮವಾಗಿ 89 ಮತ್ತು 63 ರನ್ಸ್ ಗಳನ್ನು ಗಳಿಸಿ ಒಟ್ಟು 870 ಅಂಕಗಳೊಂದಿಗೆ ಈ ಪಟ್ಟಿಯಲ್ಲಿ (ICC ODI Ranking 2021 Batsman) ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.
ಇನ್ನೊಂದೆಡೆ ಗಾಯದ ಸಮಸ್ಯೆ ಇರುವ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸೀರಿಸ್ ನಿಂದ ರೋಹಿತ್ (Rohit Sharma) ತಂಡದಿಂದ ಹೊರಗುಳಿದಿದ್ದರು. ಕೊವಿಡ್-19 ಮಹಾಮಾರಿಯ ಆರಂಭದಿಂದಲೂ ಕೂಡ ರೋಹಿತ್ ಯಾವುದೇ ODI ಪಂದ್ಯವನ್ನಾಡಿಲ್ಲ. ಆದರೂ ಕೂಡ ಅವರು ಪಾಕಿಸ್ತಾನ ತಂಡದ ನಾಯಕ ಬಾಬರ್ (837) ಅವರಿಂದ ಐದು ಪಾಯಿಂಟ್ ಮೇಲಿದ್ದು, ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ನ್ಯೂಜಿಲೆಂಡ್ ತಂಡದ ರಾಸ್ ಟೇಲರ್ (818) ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಎರಾನ್ ಫಿಂಚ್ (791) ಈ ಪಟ್ಟಿಯ ಟಾಪ್ 5 ಸ್ಥಾನಗಳಲ್ಲಿ ಇರುವ ಇತರ ಆಟಗಾರರಾಗಿದ್ದಾರೆ.
ಇದನ್ನು ಓದಿ- ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ
ಐರ್ಲೆಂಡ್ ತಂಡದ ಆಲ್ರೌಂಡರ್ ಆಟಗಾರ ಪಾಲ್ ಸ್ಟಿರ್ಲಿಂಗ್, ಅಫ್ಘಾನಿಸ್ಥಾನದ ವಿರುದ್ಧ ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಶತಕ ಬಾರಿಸಿ, ಎರಡೂ ಪಂದ್ಯಗಳಲ್ಲಿ ಒಟ್ಟು 285 ರನ್ಸ್ ಗಳಿಸುವ ಮೂಲಕ 8 ಸ್ಥಾನಗಳ ಏರಿಕೆ ಕಂಡು 20ನೇ ಸ್ಥಾನಕ್ಕೆರಿದ್ದಾರೆ.
ಇದನ್ನು ಓದಿ- ICC Women's Cricket World Cup: ವೇಳಾಪಟ್ಟಿ ಬಿಡುಗಡೆ, ಈ ತಂಡಗಳ ವಿರುದ್ಧ ಟೀಂ ಇಂಡಿಯಾ ಸೆಣೆಸಾಟ
ಅಫ್ಘಾನಿಸ್ತಾನದ ಹಶ್ಮತುಲ್ಲಾ ಶಾಹಿದಿ, ರಶೀದ್ ಖಾನ್ ಮತ್ತು ಜಾವೇದ್ ಅಹ್ಮದಿ ಅವರ ಶ್ರೇಯಾಂಕದಲ್ಲಿಯೂ ಕೂಡ ಸುಧಾರಣೆಯಾಗಿದೆ. ಅತ್ಯುತ್ತಮ ಬೌಲರ್ ಗಳ ಪಟ್ಟಿಯಲ್ಲಿ (ICC ODI Ranking 2021 Bowler) ಬುಮ್ರಾ (Jasprit Bumrah) ಅತ್ಯುತ್ತಮ ಭಾರತೀಯ ಬೌಲರ್ ಆಗಿದ್ದು, 700 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ (722) ಮತ್ತು ಅಫ್ಘಾನಿಸ್ತಾನ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ (701) ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಬಾಂಗ್ಲಾದೇಶದ ಸ್ಪಿನ್ನರ್ ಮೆಹದಿ ಹಸನ್ ಮಿರಾಜ್ ಒಂಬತ್ತು ಸ್ಥಾನಗಳ ಜಿಗಿತ ಕಂಡು ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ.
ಇದನ್ನು ಓದಿ-ಈ ಕ್ರಿಕೆಟ್ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಇಲ್ಲ: ICC ಘೋಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.