ನವದೆಹಲಿ: ಶಾರ್ಜಾದಲ್ಲಿ ನಡೆದ ವಿಶ್ವಕಪ್ ಟಿ 20 ಟೂರ್ನಿ ಯಲ್ಲಿನ ಸ್ಕಾಟ್ಲೆಂಡ್ ವಿರುದ್ಧ ಆಫ್ಘಾನಿಸ್ತಾನದ ತಂಡವು 130 ರನ್ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ್ ತಂಡವು ಭರ್ಜರಿ ಆರಂಭವನ್ನು ಕಂಡಿತು, ಹಜ್ರಾತುಲ್ಲಾ ಜಾಜೈ(44) ಗುರ್ಬಾಜ್ (46) ಹಾಗೂ ನಜಿಬುಲ್ಲಾ (59) ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಪತನಕ್ಕೆ 190 ರನ್ ಗಳ ಬೃಹತ್ ಗುರಿಯನ್ನು ನೀಡಿತು.
ಇದನ್ನೂ ಓದಿ: ಏಮ್ಸ್ ಗೆ ದಾಖಲಾದ ಬಂಗಾಳದ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್
ಈ ಗುರಿಯನ್ನು ಬೆನ್ನತ್ತಿದ್ದ ಸ್ಕಾಟ್ಲೆಂಡ್ ತಂಡವು ಕೇವಲ 10.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.ಆಫ್ಘಾನಿಸ್ತಾನದ ಪರವಾಗಿ ಮಾರಕ ಬೌಲಿಂಗ್ ದಾಳಿ ಮಾಡಿದ ಮುಜೀಬ್ ಉರ್ ರೆಹಮಾನ್ ಹಾಗೂ ರಶಿದ್ ಖಾನ್ ಕ್ರಮವಾಗಿ ಐದು ಹಾಗೂ ನಾಲ್ಕು ವಿಕೆಟ್ ಗಳನ್ನು ಪಡೆಯುವ ಮೂಲಕ ಸ್ಕಾಟ್ಲೆಂಡ್ ತಂಡವನ್ನು ಕಟ್ಟಿ ಹಾಕಿದರು.
🔹 Afghanistan's gung-ho batting 🏏
🔹 Spin twins weave their magic ✨The talking points as Mohammad Nabi's men begin their #T20WorldCup 2021 campaign in style 👇https://t.co/8eyEIOhLnn
— ICC (@ICC) October 25, 2021
ಇದನ್ನೂ ಓದಿ: 7th Pay Commission : ಕೇಂದ್ರ ನೌಕರರ ಸಂಬಳದಲ್ಲಿ ಸಿಗಲಿದೆ Double Bonanza! DA ಶೇ.3 ರಷ್ಟು ಮತ್ತು ಬಾಕಿ ಲೆಕ್ಕಾಚಾರ ನೋಡಿ
ಆಫ್ಘಾನಿಸ್ತಾನದ ಪರವಾಗಿ ಐದು ವಿಕೆಟ್ ಗಳನ್ನು ಕಬಳಿಸಿದ್ದ ಮುಜೀಬ್ ಉರ್ ರೆಹಮಾನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.