ನವದೆಹಲಿ: ಟೀಂ ಇಂಡಿಯಾ ಮತ್ತು ಹಾಲಿ ಟಿ-20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯ ನಾಳೆ ಅಂದರೆ ಸೆಪ್ಟೆಂಬರ್ 20ರಂದು ಸಂಜೆ 7:30ಕ್ಕೆ ನಡೆಯಲಿದೆ. ಈ ಟಿ-20 ಸರಣಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. 2 ತಿಂಗಳ ಬಳಿಕ ಏಕಾಏಕಿ ತಂಡಕ್ಕೆ ಮಾರಕ ಆಟಗಾರ ಸೇರ್ಪಡೆಯಾಗಿದ್ದಾರೆ. ಈ ಆಟಗಾರ ಭಾರತಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಲು ಟೀಂ ಇಂಡಿಯಾ ಬಯಸಿದೆ. ಈ ಹಿನ್ನೆಲೆ ರೋಹಿತ್ ಈ ಟಿ-20 ಸರಣಿ ಗೆಲ್ಲಲು ದೊಡ್ಡ ಪ್ಲಾನ್ ಮಾಡಿದ್ದಾರೆ.
ಭಾರತ ತಂಡಕ್ಕೆ ಏಕಾಏಕಿ ಈ ಆಟಗಾರನ ಎಂಟ್ರಿ
ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಗಾಗಿ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಇದ್ದಕ್ಕಿದ್ದಂತೆ ಮರಳಿದ್ದಾರೆ. ಇದರಿಂದ ಆಸ್ಟ್ರೇಲಿಯಾ ತಂಡಕ್ಕೂ ಟುಕುಟುಕಿ ಶುರುವಾಗಿದೆ. ಈ ಆಟಗಾರನಿಗೆ ಇಡೀ ಪಂದ್ಯದ ಗತಿಯನ್ನೇ ಬದಲಿಸುವ ಶಕ್ತಿ ಇದೆ. ಈ ಮ್ಯಾಚ್ ವಿನ್ನರ್ ಬೇರೆ ಯಾರೂ ಅಲ್ಲ, ಬ್ಯಾಟಿಂಗ್ ಮತ್ತು ಬೌಲಿಂಗ್‌ನ ಮಾಸ್ಟರ್ ಹರ್ಷಲ್ ಪಟೇಲ್.
ಇದನ್ನೂ ಓದಿ: IND vs AUS: ಆಸ್ಟ್ರೇಲಿಯಾ ವಿರುದ್ಧದ T20 ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ದೊಡ್ಡ ಹೊಡೆತ!
ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಅಪಾಯಕಾರಿ
ಹರ್ಷಲ್ ಪಟೇಲ್ ವೇಗದ ಹೊರತಾಗಿ ಅತ್ಯುತ್ತಮ ಸ್ವಿಂಗ್ ಹೊಂದಿದ್ದಾರೆ. ಅವರು ತಮ್ಮ ವಿಶೇಷ ಬ್ಯಾಟಿಂಗ್‍ನಿಂದಲೂ ಹೆಸರುವಾಸಿಯಾಗಿದ್ದಾರೆ. ಹರ್ಷಲ್ ಪಟೇಲ್ ಆರಂಭಿಕ ಮತ್ತು ಕೊನೆಯ ಓವರ್‌ಗಳಲ್ಲಿ ಅತ್ಯಂತ ಮಾರಕ ಬೌಲಿಂಗ್‌ಗೆ ಖ್ಯಾತಿಯಾಗಿದ್ದಾರೆ. ಹರ್ಷಲ್ ನಿರಂತರವಾಗಿ ತಮ್ಮ ವೇಗವನ್ನು ಮಿಶ್ರಣ ಮಾಡುತ್ತಾರೆ ಮತ್ತು ವಿಭಿನ್ನ ಬದಲಾವಣೆಗಳೊಂದಿಗೆ ಬೌಲಿಂಗ್ ಮಾಡುವ ಕುಶಲತೆ ಹೊಂದಿದ್ದಾರೆ. ಇದು ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಎಲ್ಲಾ 3 ಟಿ-20 ಪಂದ್ಯಗಳಲ್ಲಿ ಆಡುವ XIನಲ್ಲಿ ಆಡಲು ಹರ್ಷಲ್ ಸಜ್ಜಾಗಿದ್ದಾರೆ.
ಸ್ಫೋಟಕ ಬ್ಯಾಟಿಂಗ್‍ನಲ್ಲೂ ನಿಷ್ಣಾತ
ಹರ್ಷಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್‌ಗೂ ಸಹ ಹೆಸರುವಾಸಿಯಾಗಿದ್ದಾರೆ. ಉತ್ತಮ ಆಲ್ ರೌಂಡರ್ ಆಗಿ ಹರ್ಷಲ್ ಟೀಂ ಇಂಡಿಯಾಗೆ ಬಲ ತುಂಬಲಿದ್ದಾರೆ.ಇದು ಭಾರತ ತಂಡಕ್ಕೆ ಉತ್ತಮ ಸಮತೋಲನ ನೀಡಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಹರ್ಷಲ್ ಭಾರತಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯರಂತೆ ಹರ್ಷಲ್ ಪಟೇಲ್ ಕೂಡ ಉತ್ತಮ ತಂಡಕ್ಕೆ ಉತ್ತಮ ಕೊಡುಗೆ ನೀಡಬಹುದು.
ಇದನ್ನೂ ಓದಿ: ‘ಆಸ್ಟ್ರೇಲಿಯಾವನ್ನು ಸೋಲಿಸಿ, ಇಲ್ಲವೇ ವಿಶ್ವಕಪ್ ಮರೆತುಬಿಡಿ..’: ರೋಹಿತ್ ಶರ್ಮಾಗೆ ಸವಾಲು!
ಆಸ್ಟ್ರೇಲಿಯಾ ತಂಡದಲ್ಲಿ ತಲ್ಲಣ!
ಹರ್ಷಲ್ ಪಟೇಲ್ 2 ತಿಂಗಳ ನಂತರ ಟಿ-20 ತಂಡಕ್ಕೆ ಮರಳುತ್ತಿದ್ದಾರೆ. ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಕೊನೆಯ T20 ಪಂದ್ಯ ಆಡಿದ್ದರು. ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಪಂದ್ಯ ಆಡಿದ ಬಳಿಕ ಹರ್ಷಲ್ ಪಟೇಲ್ ಟಿ-20 ತಂಡದಿಂದ ಹೊರಗುಳಿದಿದ್ದರು. ಆದರೆ ಇದೀಗ ಹರ್ಷಲ್ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಸಂಚಲನ ಮೂಡಿಸಲು ರೆಡಿಯಾಗಿದ್ದಾರೆ. ಹರ್ಷಲ್ ಪಟೇಲ್ ಆಗಮನದಿಂದ ಆಸ್ಟ್ರೇಲಿಯಾ ತಂಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.