IND vs AUS: ಟೀಂ ಇಂಡಿಯಾದ ಈ ಆಟಗಾರ ಟಿ-20 ಪಂದ್ಯ ಆಡಲು ಫಿಟ್ ಅಲ್ಲ!

ಮಂಗಳವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಹರ್ಷಲ್ ಪಟೇಲ್ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ಮುಜುಗರದ ದಾಖಲೆ ನಿರ್ಮಿಸಿದ್ದಾರೆ.

Written by - Puttaraj K Alur | Last Updated : Sep 21, 2022, 05:27 PM IST
  • ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ತುಂಬಾ ದುಬಾರಿಯಾದ ಹರ್ಷಲ್ ಪಟೇಲ್
  • ಕಳಪೆ ಬೌಲಿಂಗ್ ಮೂಲಕ ಹೆಚ್ಚು ರನ್ ಬಿಟ್ಟುಕೊಟ್ಟ ಹರ್ಷಲ್ ಪಟೇಲ್‍ ಮುಜುಗರದ ದಾಖಲೆ
  • ಭಾರತದ ಫ್ಲಾಪ್ ಬೌಲರ್‌ಗಳ ಪಟ್ಟಿಗೆ ಸೇರಿಕೊಂಡ ಟೀಂ ಇಂಡಿಯಾದ ವೇಗದ ಬೌಲರ್
IND vs AUS: ಟೀಂ ಇಂಡಿಯಾದ ಈ ಆಟಗಾರ ಟಿ-20 ಪಂದ್ಯ ಆಡಲು ಫಿಟ್ ಅಲ್ಲ!   title=
ದುಬಾರಿಯಾದ ಹರ್ಷಲ್ ಪಟೇಲ್!

ನವದೆಹಲಿ: ಮಂಗಳವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಹರ್ಷಲ್ ಪಟೇಲ್ ಕಳಪೆ ಬೌಲಿಂಗ್ ಮಾಡಿದರು. ಕಾಂಗರೂ ಬ್ಯಾಟ್ಸ್‌ಮನ್‌ಗಳು ಇವರ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೂ ಬೌಂಡರಿ-ಸಿಕ್ಸರ್ ಅಟ್ಟಿದರು. ವಿಶ್ವದ ಯಾವುದೇ ಬೌಲರ್ ಮಾಡಲಾರದಂತಹ ಮುಜುಗರದ ದಾಖಲೆಯನ್ನು ಹರ್ಷಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್‌ಗಳಲ್ಲಿ 49 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ.

ಫ್ಲಾಪ್ ಬೌಲರ್‌ಗಳ ಪಟ್ಟಿಯಲ್ಲಿ ಹರ್ಷಲ್ ಪಟೇಲ್!

ಆಸೀಸ್ ವಿರುದ್ಧ ಹೆಚ್ಚು ರನ್ ಬಿಟ್ಟುಕೊಟ್ಟ ಹರ್ಷಲ್ ಪಟೇಲ್ ಇದೀಗ ಭಾರತದ ಫ್ಲಾಪ್ ಬೌಲರ್‌ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಈ ಸಾಲಿಗೆ ಸೇರಲು ಯಾವುದೇ ಬೌಲರ್ ಬಯಸುವುದಿಲ್ಲ. ಹರ್ಷಲ್ ಪಟೇಲ್ ಒಂದು ವರ್ಷದಲ್ಲಿ 5 ಬಾರಿ T20 ಇನ್ನಿಂಗ್ಸ್‌ನಲ್ಲಿ 40 ಅಥವಾ ಅದಕ್ಕಿಂತ ಹೆಚ್ಚು ರನ್‍ಗಳನ್ನು ಬಿಟ್ಟುಕೊಟ್ಟ ಭಾರತದ ಮೊದಲ ಬೌಲರ್ ಆಗಿದ್ದಾರೆ.

ಇದನ್ನೂ ಓದಿ: ʼಗೋವಾದಲ್ಲಿ ಯುವರಾಜ್ ಸಿಂಗ್ ಐಷಾರಾಮಿ ಮನೆ ಬಾಡಿಗೆಗೆ ಇದೆʼ

ಅತ್ಯಂತ ಮುಜುಗರದ ದಾಖಲೆ  

ಹರ್ಷಲ್ ಪಟೇಲ್ ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಕ್ರಮವಾಗಿ 46 ಮತ್ತು 52 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ನಂತರ ಜೂನ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 43 ಮತ್ತು ಐರ್ಲೆಂಡ್ ವಿರುದ್ಧ 54 ರನ್ ಬಿಟ್ಟುಕೊಟ್ಟಿದ್ದರು. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಅವೇಶ್ ಖಾನ್ ಮತ್ತು ಭುವನೇಶ್ವರ್ ಕುಮಾರ್ 2ನೇ ಸ್ಥಾನದಲ್ಲಿದ್ದಾರೆ. ಅವೇಶ್ ಖಾನ್ ಮತ್ತು ಭುವನೇಶ್ವರ್ ಕುಮಾರ್ ಈ ವರ್ಷ 4 ಬಾರಿ ಟಿ-20 ಇನ್ನಿಂಗ್ಸ್‌ನಲ್ಲಿ 40ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ.

40 ಅಥವಾ ಅದಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್‍ಗಳು

5 ಬಾರಿ - ಹರ್ಷಲ್ ಪಟೇಲ್ (ವರ್ಷ 2022)

4 ಬಾರಿ - ಅವೇಶ್ ಖಾನ್ (ವರ್ಷ 2022) / 4 ಬಾರಿ - ಭುವನೇಶ್ವರ್ ಕುಮಾರ್ (ವರ್ಷ 2022)

ಟೀಂ ಇಂಡಿಯಾ ಸೋಲಿಗೆ ದೊಡ್ಡ ವಿಲನ್

ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲಿಗೆ ಹರ್ಷಲ್ ಪಟೇಲ್ ದೊಡ್ಡ ವಿಲನ್ ಆದರು. 4 ಓವರ್ ಬೌಲಿಂಗ್ ಮಾಡಿದ ಅವರು 49 ರನ್ ನೀಡಿ ಒಂದೂ ವಿಕೆಟ್ ಪಡೆಯಲಿಲ್ಲ. ಹರ್ಷಲ್ ಪಟೇಲ್ ತಮ್ಮ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಸಹ ಕೈಬಿಟ್ಟರು. 23 ರನ್ ಗಳಿಸಿದ್ದಾಗ ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಹರ್ಷಲ್ ಪಟೇಲ್ ತಮ್ಮದೇ ಎಸೆತದಲ್ಲಿ ಮ್ಯಾಥ್ಯೂ ವೇಡ್ ಕ್ಯಾಚ್ ಕೈಬಿಟ್ಟರು. ಸಿಕ್ಕ ಜೀವದಾನವನ್ನು ಸರಿಯಾಗಿ ಬಳಸಿಕೊಂಡ ಮ್ಯಾಥ್ಯೂ ವೇಡ್ ಸ್ಫೋಟಕ ಬ್ಯಾಟಿಂಗ್ ಮೂಲಕ 21 ಎಸೆತಗಳಲ್ಲಿ 45 ರನ್ ಗಳಿಸಿ ಆಸ್ಟ್ರೇಲಿಯಾಕ್ಕೆ 4 ವಿಕೆಟ್‍ಗಳ ಜಯ ತಂದುಕೊಟ್ಟರು. ಭಾರತೀಯ ಬೌಲರ್‍ಗಳ ಕಳಪೆ ಬೌಲಿಂಗ್‍ನಿಂದಾಗಿ ಟೀಂ ಇಂಡಿಯಾ ಪದೇ ಪದೇ ಗೆಲ್ಲುವ ಪಂದ್ಯಗಳಲ್ಲಿ ಸೋಲು ಕಾಣುತ್ತಿದೆ. ಉತ್ತಮ ಬೌಲಿಂಗ್ ಮಾಡದ ಹರ್ಷಲ್ ಪಟೇಲ್ ಟೀಂ ಇಂಡಿಯಾದಲ್ಲಿ ಆಡಲು ಫಿಟ್ ಆಗಿದ್ದಾರಾ? ಅನ್ನೋ ಪ್ರಶ್ನೆಗಳು ಸಹ ಕೇಳಿಬರುತ್ತಿವೆ.  

ಇದನ್ನೂ ಓದಿ: 2022 Pro Kabaddi League season: ಬೆಂಗಳೂರಿಗೆ ಮತ್ತೆ ಬಂತು ವಿವೋ ಪ್ರೊ ಕಬಡ್ಡಿ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News