ನವದೆಹಲಿ: ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಕ್ಷರಶಃ ಅಬ್ಬರಿಸಿದ್ದಾರೆ. ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಸೂರ್ಯಕುಮಾರ್ ಕಿವೀಸ್ ವಿರುದ್ಧ ಭರ್ಜರಿ ಶತಕ ಭಾರಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಅಬ್ಬರಕ್ಕೆ ನ್ಯೂಜಿಲ್ಯಾಂಡ್ ಬೌಲರ್‍ಗಳು ಕಂಗಾಲಾಗಿದ್ದಾರೆ. ಮೈದಾನದ ಮೂಲೆ ಮೂಲೆಗೂ ಭರ್ಜರಿ ಸಿಕ್ಸರ್ ಮತ್ತು ಬೌಂಡರಿಗಳ ಅಟ್ಟುವ ಮೂಲಕ ಸೂರ್ಯಕುಮಾರ್ ಶತಕ ಸಿಡಿಸಿ ಮಿಂಚಿದ್ದಾರೆ. 3ನೇ ಕ್ರಮಾಂಕದಲ್ಲಿ ಕ್ರೀಸ್‍ಗೆ ಆಗಮಿಸಿದ ಸೂರ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಇದನ್ನೂ ಓದಿ: IND vs NZ: ಟೀಂ ಇಂಡಿಯಾ ಎದುರು ಆ ವ್ಯಕ್ತಿ ದೊಣ್ಣೆ ಹಿಡಿದು ನಿಂತಾಗ ಪರಿಸ್ಥಿತಿ ಹೀಗಿತ್ತು!
51 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ 7 ಭರ್ಜರಿ ಸಿಕ್ಸರ್ ಮತ್ತು 11 ಬೌಂಡರಿ ಇದ್ದ ಅಜೇಯ 111 ರನ್ ಸಿಡಿಸಿದರು. ಬೌಂಡಿಗಳ ಮೇಲೆ ಬೌಂಡರಿ, ಸಿಕ್ಸರ್‍ಗಳ ಮೇಲೆ ಸಿಕ್ಸರ್ ಸಿಡಿಸುವ ಮೂಲಕ ಸೂರ್ಯಕುಮಾರ್ ನ್ಯೂಜಿಲ್ಯಾಂಡ್ ಬೌಲರ್‍ಗಳಿಗೆ ಮನಬಂದಂತೆ ದಂಡಿಸಿದರು. ಸೂರ್ಯನ ಅಬ್ಬರಕ್ಕೆ ಕಿವೀಸ್ ಬೌಲರ್‍ಗಳು ಬಸವಳಿದರು.
ಟಿ-20ಯಲ್ಲಿ ಅಮೋಘ ಶತಕ ಭಾರಿಸಿದ ಸೂರ್ಯಕುಮಾರ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 2018ರಲ್ಲಿ ರೋಹಿತ್ ಶರ್ಮಾ ನಂತರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 2 ಟಿ-20 ಶತಕ ಗಳಿಸಿದ 2ನೇ ಭಾರತೀಯ ಬ್ಯಾಟರ್ ಅನ್ನೋ ಹೆಗ್ಗಳಿಕೆಗೆ ಸೂರ್ಯಕುಮಾರ್ ಪಾತ್ರರಾದರು. ಇದು ಅವರ 2ನೇ ಟಿ-20 ಶತಕವಾಗಿದ್ದು, ಈ ಮಾದರಿಯಲ್ಲಿ ಸೂರ್ಯನಿಗಿಂತ ಮತ್ತೊಬ್ಬ ಉತ್ತಮ ಬ್ಯಾಟ್ಸ್ಮನ್ ಇಲ್ಲವೆನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
Innings Break!
A @surya_14kumar special here at the Bay Oval, Mount Maunganui! ⚡️ ⚡️#TeamIndia post a massive target of 192 against New Zealand 👏👏
Scorecard ▶️ https://t.co/mIKkpD4WmZ #NZvIND pic.twitter.com/uI9iSd7UDk
— BCCI (@BCCI) November 20, 2022
ಇದನ್ನೂ ಓದಿ: ಮಗಳ ಜೊತೆ ವಿರುಷ್ಕಾ ಉತ್ತರಾಖಂಡ ಪ್ರವಾಸ : ಕರೋಲಿ ಬಾಬಾ ಆರ್ಶೀವಾದ ಪಡೆದ ಸ್ಟಾರ್ ದಂಪತಿ
ಇನ್ನು ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 191 ರನ್‍ಗಳ ಬೃಹತ್ ಮೊತ್ತ ಪೇರಿಸಿದೆ. ಭಾರತದ ಪರ ಸೂರ್ಯಕುಮಾರ್ ಯಾದವ್ (ಅಜೇಯ 111) ಸ್ಫೋಟಕ ಶತಕ ಸಿಡಿಸಿದರೆ, ಆರಂಭಿಕ ಆಟಗಾರ ಈಶಾನ್ ಕಿಶನ್(36) ರನ್ ಗಳಿಸಿದರು. ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ(34ಕ್ಕೆ 3) ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.