India vs West Indies : ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ ತಂಡವು ಅಬ್ಬರದಿಂದ ಗೆದ್ದುಬಿಗಿದೆ. ಈಗ ಎರಡನೇ ಏಕದಿನ ಪಂದ್ಯ (ಜುಲೈ 24 ರಂದು) ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಹಲವು ಹೊಸ ಆಟಗಾರರಿಗೆ ಅವಕಾಶ ಸಿಗಬಹುದು. ಭಾರತದ ಆಟಗಾರರ ಕಣ್ಣು ಈ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ನೆಟ್ಟಿದೆ. ಇದಕ್ಕಾಗಿ ಕ್ಯಾಪ್ಟನ್ ಶಿಖರ್ ಧವನ್ ಪ್ಲೇಯಿಂಗ್ XI ನಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದೆ.
ಓಪನರ್ ಆಗಿ ಜೋಡಿ ಎಂಟ್ರಿ
ಶಿಖರ್ ಧವನ್ ಜೊತೆ ಶುಭಮನ್ ಗಿಲ್ ಓಪನಿಂಗ್ ಮಾಡಲಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಧವನ್ 97 ರನ್ ಮತ್ತು ಗಿಲ್ 64 ರನ್ ಗಳಿಸಿದ್ದರು. ಇಬ್ಬರೂ ಆಟಗಾರರು ಮೊದಲ ವಿಕೆಟ್ಗೆ 119 ರನ್ಗಳ ಜೊತೆಯಾಟವಾಡಿದರು. ಶ್ರೇಯಸ್ ಅಯ್ಯರ್ ಮೂರನೇ ಸ್ಥಾನದಲ್ಲಿ ಕಣಕ್ಕೆ ಇಳಿಯುವುದು ಖಚಿತವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಅಯ್ಯರ್ 54 ರನ್ ಗಳಿಸಿದ್ದರು.
ಇದನ್ನೂ ಓದಿ : Shreyas Iyer: ವಿರಾಟ್-ಧವನ್ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಈ ದೊಡ್ಡ ದಾಖಲೆ ನಿರ್ಮಿಸಿದ ಶ್ರೇಯಸ್ ಅಯ್ಯರ್
ಇವರು ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕೆ ಎಂಟ್ರಿ
ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್ ನಾಲ್ಕನೇ ಕ್ರಮಾಂಕದಲ್ಲಿ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡಬಹುದು. ಸಂಜು ಸ್ಯಾಮ್ಸನ್ ಐದನೇ ಕ್ರಮಾಂಕಕ್ಕೆ ಸ್ಥಾನ ಪಡೆಯಬಹುದು. ಮೊದಲ ಏಕದಿನ ಪಂದ್ಯದಲ್ಲಿ ಸಂಜು ಅತ್ಯುತ್ತಮ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಸಂಜು ಅನೇಕ ಶ್ರೇಷ್ಠ ಕ್ಯಾಚ್ಗಳನ್ನು ಹಿಡದಿದ್ದಾರೆ. ದೀಪಕ್ ಹೂಡಾನನ್ನ ಆರನೇ ಸ್ಥಾನಕ್ಕೆ ಇಳಿಸುವ ಪ್ರಯತ್ನವಿದೆ.
ಈ ಆಟಗಾರರಿಗೆ ಕೊಕ್
ಮೊದಲ ODI ಪಂದ್ಯದಲ್ಲಿ, ಪ್ರಸಿದ್ಧ ಕೃಷ್ಣ ಅತ್ಯಂತ ಕಳಪೆ ಬೌಲಿಂಗ್ ಮತ್ತು ಅವರು ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ, ನಾಯಕ ಶಿಖರ್ ಧವನ್ ಅವರ ಜಾಗದಲ್ಲಿ ಅರ್ಷದೀಪ್ ಸಿಂಗ್ ಗೆ ಅವಕಾಶ ನೀಡಬಹುದು. ಹಾಗೆ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಇಳಿಯುವುದು ನಿಶ್ಚಿತವಾದಂತಿದೆ. ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ಅಕ್ಷರ್ ಪಟೇಲ್ ಅವಕಾಶ ಪಡೆಯಬಹುದು. ಈ ಇಬ್ಬರೂ ಬೌಲರ್ಗಳು ಮಿತವ್ಯಯದ ಬೌಲಿಂಗ್ನಲ್ಲಿ ಪರಿಣಿತ ಆಟಗಾರರು.
2ನೇ ODIಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಅರ್ಷದೀಪ್ ಸಿಂಗ್, ಅಕ್ಸರ್ ಪಟೇಲ್ ಮತ್ತು ಯುಜ್ವೇಂದ್ರ ಚಾಹಲ್.
ಇದನ್ನೂ ಓದಿ : ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಗೆಲುವು: ಧವನ್ ಪಡೆಯಲ್ಲಿ ಆರಂಭಿಕ ಆಟಗಾರರ ಕಮಾಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.