ವಿಂಡೀಸ್‌ ವಿರುದ್ಧ ಟೀಂ ಇಂಡಿಯಾ ಗೆಲುವು: ಧವನ್‌ ಪಡೆಯಲ್ಲಿ ಆರಂಭಿಕ ಆಟಗಾರರ ಕಮಾಲ್‌

ಅತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಟೀಂ ಇಂಡಿಯಾ ಗೆದ್ದಿದೆ. ಕೇವಲ ಮೂರು ರನ್‌ಗಳ ಅಂತರದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಟೀಂ ಇಂಡಿಯಾವು ಬಗ್ಗುಬಡೆದಿದೆ. 

Written by - Bhavishya Shetty | Last Updated : Jul 23, 2022, 09:08 AM IST
  • ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ
  • ವಲ ಮೂರು ರನ್‌ಗಳ ಅಂತರದಲ್ಲಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ಸೋಲು
  • ಶಿಖರ್‌ ಧವನ್‌ ನಾಯಕತ್ವದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
ವಿಂಡೀಸ್‌ ವಿರುದ್ಧ ಟೀಂ ಇಂಡಿಯಾ ಗೆಲುವು: ಧವನ್‌ ಪಡೆಯಲ್ಲಿ ಆರಂಭಿಕ ಆಟಗಾರರ ಕಮಾಲ್‌ title=
india west indies

ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಲಾಗಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಅತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಟೀಂ ಇಂಡಿಯಾ ಗೆದ್ದಿದೆ. ಕೇವಲ ಮೂರು ರನ್‌ಗಳ ಅಂತರದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಟೀಂ ಇಂಡಿಯಾವು ಬಗ್ಗುಬಡೆದಿದೆ. 

ಇದನ್ನೂ ಓದಿ: Lord Shiv Favrouite Flowers : ಶ್ರಾವಣದಲ್ಲಿ ಶಿವನಿಗೆ ಈ ಹೂವನ್ನು ಅರ್ಪಿಸಿ, ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತೆ! 

ಟ್ರೆನಿಡಾಡ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಜುಲೈ 22 ರಂದು ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ತಂಡ ಬ್ಯಾಟಿಂಗ್‌ ಆಯ್ದುಕೊಂಡರು. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆ ಹೊತ್ತಿದ್ದ ಶಿಖರ್‌ ಧವನ್‌ ಹಾಗೂ ಶುಭಮನ್‌ ಗಿಲ್‌ ಆರಂಭಿಕ ಆಟಗಾರರಾಗಿ ಕಣಕ್ಕಿಳಿದು ತಂಡಕ್ಕೆ ಭದ್ರ ಬುನಾದಿ ಹಾಕಿದರು. ಮೊದಲ ವಿಕೆಟ್‌ಗೆ 119 ರನ್‌ ಬಾರಿಸಿದ್ದ ಈ ಜೋಡಿ, ಭರ್ಜರಿ ಆಟವಾಡಿದ್ದರು. ಇನ್ನು ಶುಭಮನ್‌ ಗಿಲ್‌  64 ರನ್‌ ಬಾರಿಸಿ 18ನೇ ಓವರ್‌ನಲ್ಲಿ ರನ್‌ ಔಟ್‌ ಆದರು. 

ಬಳಿಕ ಶ್ರೇಯಸ್‌ ಅಯ್ಯರ್‌ ಜೊತೆ ಧವನ್‌ 94 ರನ್‌ ಜೊತೆಯಾಟವಾಡಿದರು. 99 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ ಬಾರಿಸುವ ಮೂಲಕ  97 ರನ್‌ ಗಳಿಸಿದ ಧವನ್‌ ಕೇವಲ ಮೂರು ರನ್‌ಗೆ ಶತಕ ಮಿಸ್‌ ಮಾಡಿಕೊಂಡರು. ಇನ್ನು ಶ್ರೇಯಸ್‌ ಅಯ್ಯರ್‌ 54 ರನ್‌ ಬಾರಿಸಿದರು. ಒಟ್ಟಾರೆಯಾಗಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 308 ರನ್‌ ಮಾಡಿತ್ತು. 

ಬಳಿಕ ಟೀಂ ಇಂಡಿಯಾ ನೀಡಿದ್ದ ಗುರಿ ಬೆನ್ನತ್ತಿದ್ದ ವಿಂಡೀಸ್‌ ಎಲ್ಲಾ ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 305 ರನ್‌ ಕಲೆ ಹಾಕಿತ್ತು. ಕೇವಲ 3 ರನ್‌ಗಳ ಅಲ್ಪ ಅಂತರದಿಂದ ಪೂರನ್‌ ಪಡೆ ಸೋಲೊಪ್ಪಿಕೊಂಡಿತು.  

ಇನ್ನು ಈ ರೋಚಕ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಸಹ ಸಾಕಷ್ಟು ರನ್ ಗಳಿಸಿದ್ದರು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಸ್ಟಾರ್ ಓಪನರ್‌ಗಳಾಗಿ ಶಿಖರ್‌ ಧವನ್‌ ಮತ್ತು ಶುಭಮನ್‌ ಗಿಲ್‌ ತಂಡಕ್ಕೆ ಬಂದಂತೆ ಆಗಿದೆ. 

​ಇದನ್ನೂ ಓದಿ: ದಿವಂಗತ ಸಂಚಾರಿ ವಿಜಯ್‌ ಸಿನಿಮಾಗೆ ಮತ್ತೊಂದು ರಾಷ್ಟ್ರಪಶಸ್ತಿ..!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ, ಶಿಖರ್ ಧವನ್ ಅವರೊಂದಿಗೆ ಶುಭಮನ್ ಗಿಲ್ ಓಪನಿಂಗ್ ಮಾಡಲು ಮೈದಾನಕ್ಕೆ ಬಂದರು. ಇಬ್ಬರೂ ಆಟಗಾರರು ಭಾರತ ತಂಡಕ್ಕೆ ಬಲಿಷ್ಠ ಆರಂಭ ನೀಡಿದ್ದು ಮಾತ್ರ ಅದ್ಭುತ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News