ಶತಕ ಸಿಡಿಸಿ ವಿಶ್ವದಾಖಲೆ ಬರೆದರೂ ಟೆಸ್ಟ್’ನಲ್ಲಿ ಕೊಹ್ಲಿಗೆ ಆಘಾತ: ಫ್ಯಾನ್ಸ್ ಕಣ್ಣೀರಿಗೆ ಕಾರಣವಾಯ್ತು ಆ ಒಂದು ಎಸೆತ..!

Virat kohli News: ಕೊಹ್ಲಿ ಅಂತರಾಷ್ಟ್ರೀಯ ವೃತ್ತಿಜೀವನದ 76 ನೇ ಶತಕದ ಅವಧಿಯಲ್ಲಿ, ಅವರು ರವೀಂದ್ರ ಜಡೇಜಾ (61) ಅವರೊಂದಿಗೆ ಐದನೇ ವಿಕೆಟ್‌ಗೆ 159 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಬಲವಾದ ಪುನರಾಗಮನವನ್ನು ಮಾಡಿದರು.

Written by - Bhavishya Shetty | Last Updated : Jul 22, 2023, 06:56 AM IST
    • 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿರುವ ವಿರಾಟ್ ಕೊಹ್ಲಿ
    • ಟೆಸ್ಟ್ ವೃತ್ತಿ ಬದುಕಿನ 29ನೇ ಶತಕ ಬಾರಿಸಿದ ‘ಕಿಂಗ್’
    • ಸರ್ ಡಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ
ಶತಕ ಸಿಡಿಸಿ ವಿಶ್ವದಾಖಲೆ ಬರೆದರೂ ಟೆಸ್ಟ್’ನಲ್ಲಿ ಕೊಹ್ಲಿಗೆ ಆಘಾತ: ಫ್ಯಾನ್ಸ್ ಕಣ್ಣೀರಿಗೆ ಕಾರಣವಾಯ್ತು ಆ ಒಂದು ಎಸೆತ..! title=
Virat Kohli

IND vs WI 2nd Test Virat kohli: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 128 ಓವರ್‌ ಗಳಲ್ಲಿ 438 ರನ್ ಗಳಿಸಿದೆ. ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಇದು ಅವರ ಟೆಸ್ಟ್ ವೃತ್ತಿ ಬದುಕಿನ 29ನೇ ಶತಕವಾಗಿದೆ. ಇದರೊಂದಿಗೆ ಕೊಹ್ಲಿ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಪಟ್ಟ ಸರ್ ಡಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಮತ್ತು ಅವರ ಅಭಿಮಾನಿಗಳಿಗೆ ನೋವನ್ನು ಉಂಟುಮಾಡುವ ಘಟನೆಯೊಂದು ನಡೆದಿತ್ತು.

ಇದನ್ನೂ ಓದಿ: ಧರ್ಮದ ಹೇಳಿದಂತೆ ಬದುಕಲು 18ರ ಹರೆಯದಲ್ಲೇ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟರ್!

ಕೊಹ್ಲಿ ಅಂತರಾಷ್ಟ್ರೀಯ ವೃತ್ತಿಜೀವನದ 76 ನೇ ಶತಕದ ಅವಧಿಯಲ್ಲಿ, ಅವರು ರವೀಂದ್ರ ಜಡೇಜಾ (61) ಅವರೊಂದಿಗೆ ಐದನೇ ವಿಕೆಟ್‌ಗೆ 159 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಬಲವಾದ ಪುನರಾಗಮನವನ್ನು ಮಾಡಿದರು. ಆದರೆ ಈ ಅದ್ಭುತ ಇನ್ನಿಂಗ್ಸ್‌ನ ಅಂತ್ಯವು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ಈ ಪಂದ್ಯದಲ್ಲಿ ಸಮನ್ವಯ ಸಮಸ್ಯೆಯಿಂದ ವಿರಾಟ್ ರನ್ ಔಟ್ ಆಗಿದ್ದು, ಅಪರೂಪಕ್ಕೆ ಕಂಡು ಬರುತ್ತಿದೆ. ಅವರು ಈ ಹಿಂದೆ ಬಾರ್ಡರ್ ಗವಾಸ್ಕರ್ ಟ್ರೋಫಿ 2020 ರ ಸಮಯದಲ್ಲಿ ಕೂಡ ಇದೇ ರೀತಿ ರನ್ ಔಟ್ ಆಗಿದ್ದರು.

ಭಾರತ ಇನ್ನಿಂಗ್ಸ್ ನ 99ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಲೆಗ್ ಸೈಡ್ ನಲ್ಲಿ ಟ್ಯಾಪ್ ಮಾಡುವ ಮೂಲಕ ರನ್ ಕದಿಯಲು ಯತ್ನಿಸಿದರು. ಕೊಹ್ಲಿ ಕರೆಗೆ ಜಡೇಜಾ ಕೂಡ ಓಡಿ ಹೋದರು. ಆದರೆ ಎರಡು ಹೆಜ್ಜೆ ಹಾಕಿದ ವಿರಾಟ್ ಈ ರನ್ ತೆಗೆದುಕೊಳ್ಳಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದರು. ಆದರೆ, ರನ್ ಪೂರ್ಣಗೊಳಿಸಲು ಓಡಿ ರನ್ ಔಟ್ ಆದರು. ವಿರಾಟ್ ಕೊಹ್ಲಿ ರನ್ ಔಟ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ರವೀಂದ್ರ ಜಡೇಜಾ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ರವಿಚಂದ್ರನ್ ಅಶ್ವಿನ್ ಭರ್ಜರಿ ಅರ್ಧಶತಕ:

ಊಟದ ನಂತರ ರವಿಚಂದ್ರನ್ ಅಶ್ವಿನ್ (56) ಅರ್ಧಶತಕ ಗಳಿಸಿ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಸ್ಕೋರನ್ನು 438 ರನ್ ಗಳಿಗೆ ಕೊಂಡೊಯ್ದರು. ಅವರು ಔಟಾದ ತಕ್ಷಣ ಅಂಪೈರ್‌ಗಳು ಚಹಾ ವಿರಾಮ ಘೋಷಿಸಿದರು. ಅಶ್ವಿನ್, ಇಶಾನ್ ಕಿಶನ್ (25) ಅವರೊಂದಿಗೆ ಏಳನೇ ವಿಕೆಟ್‌ಗೆ 33 ಮತ್ತು ಜಯದೇವ್ ಉನದ್ಕತ್ (7) ಅವರೊಂದಿಗೆ ಎಂಟನೇ ವಿಕೆಟ್‌ ಗೆ 23 ರನ್ ಗಳಿಸಿ ತಂಡವನ್ನು 400 ರನ್‌ ಗಳ ಗಡಿ ದಾಟಿಸಿದರು. ತಮ್ಮ 78 ಎಸೆತಗಳ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳನ್ನು ಬಾರಿಸಿದ್ದರು.

ಇದನ್ನೂ ಓದಿ: WI vs IND: 29ನೇ ಶತಕ ಸಿಡಿಸಿ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

ವೆಸ್ಟ್ ಇಂಡೀಸ್ ಪರ ರೋಚ್ 104 ಹಾಗೂ ಜೋಮೆಲ್ ವಾರಿಕಾನ್ 89 ರನ್ ನೀಡಿ ಮೂರು ವಿಕೆಟ್ ಪಡೆದರು. ಪಂದ್ಯದ ಆರಂಭಿಕ ದಿನದಂದು ನಾಯಕ ರೋಹಿತ್ ಶರ್ಮಾ (80) ಮತ್ತು ಅವರ ಆರಂಭಿಕ ಜೊತೆಗಾರ ಯಶಸ್ವಿ ಜೈಸ್ವಾಲ್ (57) ಮೊದಲ ವಿಕೆಟ್‌ ಗೆ 139 ರನ್‌ಗಳ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ದೊಡ್ಡ ಸ್ಕೋರ್‌ಗೆ ಅಡಿಪಾಯ ಹಾಕಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News