ನವದೆಹಲಿ: ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಶನಿವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ 242 ರನ್ ಗಳಿಸಿತು, ಕಡ್ಡಾಯವಾಗಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪ್ರಭಾವಶಾಲಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಲು ಭಾರತ ತಂಡ ವಿಫಲವಾಗಿದೆ. ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ, ನಂಬರ್ ಒನ್ ಶ್ರೇಯಾಂಕಿತ ಭಾರತೀಯ ಟೆಸ್ಟ್ ತಂಡವು ನ್ಯೂಜಿಲೆಂಡ್‌ನಲ್ಲಿ ಎರಡು ಟೆಸ್ಟ್ ಸರಣಿಯನ್ನು 0-1 ಅಂತರದಲ್ಲಿ ಹಿಂದುಳಿದಿದೆ.
NZ giving India a lesson in how to play in conditions where the ball moves through the air ... They can’t be regarded as a great team till they start winning in places like NZ & England .. #NZvsIND
— Michael Vaughan (@MichaelVaughan) February 29, 2020
ಈ ಹಿನ್ನಲೆಯಲ್ಲಿ ಈಗ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಇದು ಭಾರತಕ್ಕೆ ಪಾಠ ಎಂದು ಕರೆದ ವಾನ್, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ನಂತಹ ಸ್ಥಳಗಳಲ್ಲಿ ಗೆಲ್ಲಲು ಪ್ರಾರಂಭಿಸುವವರೆಗೂ ಅವರನ್ನು ಶ್ರೇಷ್ಠರೆಂದು ಹೇಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. "ಚೆಂಡು ಗಾಳಿಯ ಮೂಲಕ ಚಲಿಸುವ ಪರಿಸ್ಥಿತಿಗಳಲ್ಲಿ ಹೇಗೆ ಆಡಬೇಕೆಂಬುದರ ಬಗ್ಗೆ ನ್ಯೂಜಿಲೆಂಡ್ ಭಾರತಕ್ಕೆ ಪಾಠ ನೀಡುತ್ತಿದೆ... ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ನಂತಹ ಸ್ಥಳಗಳಲ್ಲಿ ಅವರು ಗೆಲ್ಲಲು ಪ್ರಾರಂಭಿಸುವವರೆಗೂ ಅವರನ್ನು ಉತ್ತಮ ತಂಡವೆಂದು ಪರಿಗಣಿಸಲಾಗುವುದಿಲ್ಲ" ಎಂದು ವಾನ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಟಾಸ್ ಗೆದ್ದ ನಂತರ, ನ್ಯೂಜಿಲೆಂಡ್ ಕೈಲ್ ಜಾಮಿಸನ್ ಮಾರಕ ಬೌಲಿಂಗ್ ದಾಳಿಗೆ ಭಾರತವ 63 ಓವರ್‌ಗಳಲ್ಲಿ 242 ರನ್‌ಗಳಿಗೆ ಆಲೌಟ್ ಆಯಿತು. ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ತಲಾ ಎರಡು ವಿಕೆಟ್ ಕೊಡುಗೆ ನೀಡಿದರೆ, 33 ವರ್ಷದ ನೀಲ್ ವ್ಯಾಗ್ನರ್ ಹನುಮಾ ವಿಹಾರಿ ವಿಕೆಟ್ ಪಡೆದರು.