Badminton Asia Championships 2023: ಈ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ. ಈ ಮಧ್ಯೆ ಭಾರತಕ್ಕೆ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಈ ಶುಭ ಸುದ್ದಿಯನ್ನು ಭಾರತದ ಬ್ಯಾಡ್ಮಿಂಟನ್ ಜೋಡಿ ನೀಡಿದೆ. 58 ವರ್ಷಗಳ ನಂತರ ಭಾರತಕ್ಕೆ ಬ್ಯಾಡ್ಮಿಂಟನ್ ನಲ್ಲಿ ಜೋಡಿ ಚಿನ್ನ ಗೆದ್ದುಕೊಟ್ಟಿದೆ. ಈ ಗೆಲುವಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸಿಹಿ ಗೆಣಸುಗಳನ್ನು ತಿನ್ನುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ..?
ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಬಂದಿದೆ. ಈ ಸಾಧನೆ ಮಾಡಿದವರು ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ. ಈ ಮೂಲಕ 58 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ್ದಾರೆ.
ವಿಶ್ವ ಚಾಂಪಿಯನ್ ಶಿಪ್ 2022 ರ ಕಂಚಿನ ಪದಕ ವಿಜೇತ ಜೋಡಿಯು ಮಲೇಷ್ಯಾ ಜೋಡಿಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಯೀ ಯೀ ಅವರನ್ನು 16-21, 21-17, 21-19 ರಿಂದ ಸೋಲಿಸುವ ಮೂಲಕ ಅದ್ಭುತ ಪುನರಾಗಮನವನ್ನು ಮಾಡಿದರು. ಇದಕ್ಕೂ ಮೊದಲು, 1965 ರಲ್ಲಿ ಲಕ್ನೋದಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಥಾಯ್ಲೆಂಡ್ ನ ಸಂಗೋಬ್ ರಟ್ಟನುಸೋರ್ನ್ ಅವರನ್ನು ಸೋಲಿಸಿ ದಿನೇಶ್ ಖನ್ನಾ ಅವರು ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನ ಗೆದ್ದಿದ್ದರು.
ಬಾಸೆಲ್ ನಲ್ಲಿ ಸ್ವಿಸ್ ಓಪನ್ ಸೂಪರ್ 300 ಪ್ರಶಸ್ತಿ ಗೆದ್ದ ಸಾತ್ವಿಕ್ ಮತ್ತು ಚಿರಾಗ್ ಮೊದಲ ಗೇಮ್ ನಲ್ಲಿ ಸೋತರೂ ಹೋರಾಟವನ್ನು ಬಿಡದೆ ಎರಡನೇ ಗೇಮ್‌ನಲ್ಲಿ 7-13 ಮತ್ತು ಮೂರನೇ ಗೇಮ್ ನಲ್ಲಿ 11-15 ರಿಂದ ಮುನ್ನಡೆ ಸಾಧಿಸಿದರು. ಈ ಜೋಡಿಗೆ ಇದು ಈ ಋತುವಿನ ಎರಡನೇ ಪ್ರಶಸ್ತಿಯಾಗಿದೆ. ಅವರು ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಬಿಡಬ್ಲ್ಯೂಎಫ್ ಟೂರ್ ನಲ್ಲಿ ಐದು ಪ್ರಶಸ್ತಿಗಳನ್ನು ಗೆದ್ದಿದ್ದರು.
ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಬಗ್ಗೆ ಹೆಮ್ಮೆಯಿದೆ, ಶುಭಾಶಯಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗೆಲುವಿನ ನಂತರ ಚಿರಾಗ್-ಸಾತ್ವಿಕ್ ಹೇಳಿದ್ದೇನು?
“ನಾನು ಮತ್ತು ಸಾತ್ವಿಕ್ ಈ ಪದಕಕ್ಕಾಗಿ ಶ್ರಮಿಸಿದ್ದೆವು. ಪ್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ. ನಮ್ಮನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು ಗೆದ್ದಿರುವುದು ಸಂತಸದ ಅನುಭವವಾಗಿದೆ. ಭವಿಷ್ಯದಲ್ಲಿ ನಾವು ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲುತ್ತೇವೆ ಎಂದು ನನಗೆ ಖಾತ್ರಿಯಿದೆ. ಭಾರತದ ಧ್ವಜವನ್ನು ಉತ್ತುಂಗಕ್ಕೇರಿಸಲು ಶ್ರಮಿಸುವುದನ್ನು ಮುಂದುವರಿಸುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ: Photos: ನವಲಗುಂದದಲ್ಲಿ ಪ್ರಚಾರದ ವೇಳೆ ಕಾರ್ ಇಳಿದು ಸಾಮಾನ್ಯರ ಮನೆಗೆ ಪ್ರಿಯಾಂಕಾ ಗಾಂಧಿ ಎಂಟ್ರಿ
ಬಿರುಸಿನ ಪಂದ್ಯ
ಅಮಲಾಪುರಂನ 22 ವರ್ಷದ ಸಾತ್ವಿಕ್ ಮತ್ತು ಮುಂಬೈನ 25 ವರ್ಷದ ಚಿರಾಗ್ ಅತ್ಯಂತ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮೊದಲ ಗೇಮ್ ಡ್ರಾ ಆಗಿದ್ದು, ಇದರಲ್ಲಿ ಮಲೇಷ್ಯಾ ಜೋಡಿ ಮೇಲುಗೈ ಸಾಧಿಸಿತು. ಎರಡನೇ ಗೇಮ್ ನಲ್ಲೂ ಮಲೇಷ್ಯಾ ಜೋಡಿ ಮುನ್ನಡೆ ಸಾಧಿಸಿತು. 8-13ರಿಂದ ಹಿನ್ನಡೆ ಸಾಧಿಸಿದ ಭಾರತದ ಜೋಡಿ ಮತ್ತೆ ಮರಳಿತು. ಟಿಯೊ ಅವರ ತಪ್ಪಿನಿಂದಾಗಿ, ಸಾತ್ವಿಕ್ ಬ್ಯಾಕ್ ಹ್ಯಾಂಡ್‌ನಲ್ಲಿ ಪ್ರಬಲ ಸ್ಮ್ಯಾಷ್‌ನೊಂದಿಗೆ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು. ಭಾರತದ ಜೋಡಿ 18-15 ಮುನ್ನಡೆ ಸಾಧಿಸಿತು. ಇದಾದ ಬಳಿಕ ಮೂರು ಪಾಯಿಂಟ್ಸ್ ಪಡೆಯುವ ಮೂಲಕ ನಿರ್ಣಾಯಕ ಗೇಮ್ ನಲ್ಲಿ ಪಂದ್ಯ ಡ್ರಾಗೊಂಡಿತು. 11-8ರಲ್ಲಿ ಮುನ್ನಡೆ ಸಾಧಿಸಿದ ಮಲೇಷ್ಯಾ ಜೋಡಿ ನಿರ್ಣಾಯಕ ಆಟದಲ್ಲಿ ತಾಂತ್ರಿಕ ಕೌಶಲ್ಯ ಮೆರೆದದ್ದು ಶ್ಲಾಘನೀಯ. ಇದಾದ ಬಳಿಕ ಭಾರತದ ಜೋಡಿ 14-15 ಅಂತರದಲ್ಲಿ ಮುನ್ನಡೆ ಸಾಧಿಸಿ ನಂತರ 17-16ಕ್ಕೆ ಮುನ್ನುಗ್ಗಿತ್ತು. ಬ್ಯಾಕ್ ಹ್ಯಾಂಡ್ ನಲ್ಲಿ ಚಿರಾಗ್ ಅವರ ಸ್ಮ್ಯಾಶ್ ಭಾರತದ ಜೋಡಿಯು ಪಂದ್ಯವನ್ನು ಗೆಲ್ಲುವಂತೆ ಮಾಡಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ