ICC Test Team rankings: ಟೆಸ್ಟ್ ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಭಾರತ ತಂಡ

ಗುರುವಾರ ಬಿಡುಗಡೆಯಾದ ಐಸಿಸಿ ತಂಡದ ಶ್ರೇಯಾಂಕದ ವಾರ್ಷಿಕ ನವೀಕರಣದ ನಂತರ ಭಾರತವು ಟೆಸ್ಟ್ ತಂಡದಲ್ಲಿ ಪ್ರಥಮ ಸ್ಥಾನದಲ್ಲಿದೆ.24 ಪಂದ್ಯಗಳಿಂದ 2914 ಅಂಕಗಳನ್ನು ಗಳಿಸಿರುವುದಲ್ಲದೆ 121 ರೇಟಿಂಗ್ ಪಾಯಿಂಟ್ ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ.

Last Updated : May 13, 2021, 03:47 PM IST
  • ಗುರುವಾರ ಬಿಡುಗಡೆಯಾದ ಐಸಿಸಿ ತಂಡದ ಶ್ರೇಯಾಂಕದ ವಾರ್ಷಿಕ ನವೀಕರಣದ ನಂತರ ಭಾರತವು ಟೆಸ್ಟ್ ತಂಡದಲ್ಲಿ ಪ್ರಥಮ ಸ್ಥಾನದಲ್ಲಿದೆ.24 ಪಂದ್ಯಗಳಿಂದ 2914 ಅಂಕಗಳನ್ನು ಗಳಿಸಿರುವುದಲ್ಲದೆ 121 ರೇಟಿಂಗ್ ಪಾಯಿಂಟ್ ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ICC Test Team rankings: ಟೆಸ್ಟ್ ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಭಾರತ ತಂಡ title=
file photo

ನವದೆಹಲಿ: ಗುರುವಾರ ಬಿಡುಗಡೆಯಾದ ಐಸಿಸಿ ತಂಡದ ಶ್ರೇಯಾಂಕದ ವಾರ್ಷಿಕ ನವೀಕರಣದ ನಂತರ ಭಾರತವು ಟೆಸ್ಟ್ ತಂಡದಲ್ಲಿ ಪ್ರಥಮ ಸ್ಥಾನದಲ್ಲಿದೆ.24 ಪಂದ್ಯಗಳಿಂದ 2914 ಅಂಕಗಳನ್ನು ಗಳಿಸಿರುವುದಲ್ಲದೆ 121 ರೇಟಿಂಗ್ ಪಾಯಿಂಟ್ ಗಳಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇದನ್ನೂ ಓದಿ: BCCI ಎಚ್ಚರಿಕೆ : ಕೊರೋನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಸರಣಿಯಿಂದಲೇ ಔಟ್..!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್  ಫೈನಲ್ ನ ಎದುರಾಳಿಗಳಾದ ನ್ಯೂಜಿಲೆಂಡ್ 120 ರೇಟಿಂಗ್ ಹೊಂದಿದೆ. ಕಿವೀಸ್ 18 ಟೆಸ್ಟ್ ಪಂದ್ಯಗಳಿಂದ 2166 ಅಂಕಗಳನ್ನು ಗಳಿಸಿದೆ ಮತ್ತು ಎರಡು ರೇಟಿಂಗ್ ಅಂಕಗಳನ್ನು ಗಳಿಸಿದೆ.ಆಸ್ಟ್ರೇಲಿಯಾ ವಿರುದ್ಧ ಭಾರತದ 2-1 ಗೆಲುವು ಮತ್ತು ಕಳೆದ ವರ್ಷದಲ್ಲಿ ಇಂಗ್ಲೆಂಡ್ ವಿರುದ್ಧ 3-1 ಅಂತರದ ಗೆಲುವು ಮತ್ತು ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ 2-0 ಸರಣಿಯ ಗೆಲುವುಗಳು ಭಾರತ ತಂಡವು ರ್ಯಾಕಿಂಗ್ ನಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಾಯಕವಾಗಿವೆ.

ಇದನ್ನೂ ಓದಿ: IPL 2021: ಐಪಿಎಲ್‌ನ ಉಳಿದ ಪಂದ್ಯಗಳನ್ನು ಭಾರತದಲ್ಲೇ ನಡೆಸಬಹುದು!

ಐಸಿಸಿ (ICC) ಹೇಳಿಕೆಯ ಪ್ರಕಾರ, ಇತ್ತೀಚಿನ ವಾರ್ಷಿಕ ನವೀಕರಣವು 2017-18ರ ಫಲಿತಾಂಶಗಳನ್ನು ತೆಗೆದುಹಾಕುತ್ತದೆ. ಇತ್ತೀಚಿನ ನವೀಕರಣವು ಮೇ 2020 ರಿಂದ ಆಡಿದ ಎಲ್ಲಾ ಪಂದ್ಯಗಳನ್ನು ಶೇಕಡಾ 100 ಕ್ಕೆ ಮತ್ತು ಹಿಂದಿನ ಎರಡು ವರ್ಷಗಳ ಪಂದ್ಯಗಳನ್ನು ಶೇಕಡಾ 50 ಕ್ಕೆ ನಿಗದಿಪಡಿಸುತ್ತದೆ.

ಇದನ್ನೂ ಓದಿ: ದೀದಿ ಸರ್ಕಾರದಲ್ಲಿ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿಗೆ ಸಚಿವ ಸ್ಥಾನ

ಐಸಿಸಿ ತಂಡದ ಶ್ರೇಯಾಂಕದ ವಾರ್ಷಿಕ ನವೀಕರಣದಲ್ಲಿ ಇಂಗ್ಲೆಂಡ್ (109 ರೇಟಿಂಗ್) ಮೂರನೇ ಸ್ಥಾನಕ್ಕೆ ಏರಿದರೆ, ಆಸ್ಟ್ರೇಲಿಯಾ (108 ರೇಟಿಂಗ್) ಈಗ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.2017-18ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 0-4 ಅಂತರದ ಸೋಲಿನಿಂದ ಶ್ರೇಯಾಂಕದಿಂದ ಹೊರಗುಳಿದ ನಂತರ ಇಂಗ್ಲೆಂಡ್  ಏರಿಕೆಯನ್ನು ಕಂಡಿದೆ.ಜೂನ್ 18 ರಿಂದ 22 ರವರೆಗೆ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯಲಿರುವ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News