ನವದೆಹಲಿ: ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಂತ್ಯಕ್ಕೆ ಆಸಿಸ್ ಪಡೆ ಭಾರತದ ವಿರುದ್ಧ ಎರಡು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಇದನ್ನೂ ಓದಿ: Australia vs India:ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ರೋಹಿತ್ ಶರ್ಮಾ ಉಪನಾಯಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸಿಸ್ ತಂಡವು ತಂಡದ ಮೊತ್ತ 6-1 ಆಗಿದ್ದಾಗ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು ಕಳೆದ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಸಿರಾಜ್ ವಾರ್ನರ್ ವಿಕೆಟ್ ನ್ನು ಕಬಳಿಸಿದರು.ತದನಂತರ ರಕ್ಷಣಾತ್ಮಕ ಆಟಕ್ಕೆ ಮೊರಹೋದ ಆಸಿಸ್ ಪಡೆಗೆ ವಿಲ್ ಪುಕೊವ್ಸ್ಕಿ,ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ರಮವಾಗಿ 62, ಹಾಗೂ 67 ರನ್ ಗಳನ್ನು ಗಳಿಸಿದರು.
🇦🇺 Debutant Will Pucovski and Marnus Labuschagne made fifties as Australia called the shots on a rain-interrupted first day in Sydney!
What was your favourite moment from the day's play? 🏏#AUSvIND report 👇https://t.co/WhsmGfmGea
— ICC (@ICC) January 7, 2021
ಇದನ್ನೂ ಓದಿ: ವಿರಾಟ್ ಕೊಹ್ಲಿ ಪಿತೃತ್ವ ರಜೆ ಬಗ್ಗೆ ಮಾಜಿ ಆಟಗಾರ ಫಾರೂಕ್ ಇಂಜನಿಯರ್ ಹೇಳಿದ್ದೇನು?
ಮೊದಲ ದಿನದಾಂತ್ಯಕ್ಕೆ ಆಸಿಸ್ ತಂಡವು ಈಗ 166 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದೆ.ಕ್ರಿಸ್ ನಲ್ಲಿ ಸದ್ಯ ಸ್ಟೀವ್ ಸ್ಮಿತ್ (31)ಮಾರ್ನಸ್ ಲ್ಯಾಬುಸ್ಚಾಗ್ನೆ(67) ಅಜೇಯರಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಭಾರತದ ಪರವಾಗಿ ಸಿರಾಜ್ (Mohammed Siraj) ಹಾಗೂ ಸೈನಿ ತಲಾ ಒಂದು ವಿಕೆಟನ್ನು ಕಬಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.