India vs Bangladesh: ಭಾರತದ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರ, 150ಕ್ಕೆ ಆಲೌಟ್

ಇಂದೋರ್ ನಲ್ಲಿ ಪ್ರಾರಂಭವಾದ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ 150 ರನ್ ಗಳಿಗೆ ಸರ್ವಪತನ ಕಂಡಿದೆ.

Updated: Nov 14, 2019 , 04:54 PM IST
India vs Bangladesh: ಭಾರತದ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರ, 150ಕ್ಕೆ ಆಲೌಟ್
Photo courtesy: Twitter

ನವದೆಹಲಿ: ಇಂದೋರ್ ನಲ್ಲಿ ಪ್ರಾರಂಭವಾದ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತದ ಬೌಲರ್ ಗಳ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡ 150 ರನ್ ಗಳಿಗೆ ಸರ್ವಪತನ ಕಂಡಿದೆ.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶದ ತಂಡಕ್ಕೆ ಉಮೇಶ್ ಯಾದವ್ ತಂಡದ ಮೊತ್ತ 12 ಆಗಿದ್ದಾಗ ಇಮ್ರುಲ್ ಕೆಯ್ಸ್ ಅವರ ವಿಕೆಟ್ ಪಡೆದರು.ಇದಾದ ಬೆನ್ನಲ್ಲೇ ಶಾದ್ಮನ್ ಇಸ್ಲಾಂ ಕೂಡ ವಿಕೆಟ್ ಒಪ್ಪಿಸಿದರು, ಹೀಗೆ ಆರಂಭಿಕ ಆಘಾತ ಕಂಡ ಬಾಂಗ್ಲಾ ತಂಡವು ನಂತರ ಚೇತರಿಸಿಕೊಳ್ಳಲೇ ಇಲ್ಲ. ಬಾಂಗ್ಲಾದೇಶದ ಪರವಾಗಿ ಮುಷ್ಪಿಕರ್ ರಹಿಮ್ 43 ಹಾಗೂ ಮೊಮಿನುಲ್ ಹಕ್ 37 ರನ್ ಗಳಿಸಿದ್ದು, ಅಧಿಕವಾಗಿತ್ತು. 

ಭಾರತ ತಂಡದ ಪರವಾಗಿ ಮೊಹಮ್ಮದ್ ಶಮಿ ಮೂರು ವಿಕೆಟ್ ಗಳನ್ನು ಪಡೆದು ಮಿಂಚಿದರೆ, ಉಳಿದ ಉಮೇಶ್ ಯಾದವ್ ,ಅಶ್ವಿನ್, ಇಶಾಂತ್ ಶರ್ಮಾ ಅವರು ತಲಾ ಎರಡು ವಿಕೆಟ್ ಗಳನ್ನು ಪಡೆದರು. ಸದ್ಯ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡಕ್ಕೂ ಸಹಿತ ರೋಹಿತ್ ಶರ್ಮಾ ಅವರ ವಿಕೆಟ್ ನ್ನು ತಂಡದ ಮೊತ್ತ 14 ಆಗಿದ್ದಾಗ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತ್ತು. ಸದ್ಯ ಕ್ರಿಸ್ ನಲ್ಲಿ ಮಾಯಂಕ್ ಅಗರವಾಲ್ ಅಜೇಯ್ 29 ಹಾಗೂ ಚೇತೆಶ್ವರ್ ಪೂಜಾರ್ ಅವರು 36 ರನ್ ಗಳಿಸಿ ಆಡುತ್ತಿದ್ದಾರೆ.