ನವದೆಹಲಿ: ಅಹಮದಾಬಾದ್ ನಲ್ಲಿನ ಮೋಟೆರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 205 ಕ್ಕೆ ಆಲೌಟ್ ಆಗಿದೆ.
ಇದನ್ನೂ ಓದಿ: IND vs ENG: ಪಿಚ್ ವಿವಾದದ ಬಗ್ಗೆ ಮೌನ ಮುರಿದ Virat Kohli
ಆರಂಭದಿಂದಲೇ ಭಾರತದ ಬೌಲರ್ ಗಳ ಎದುರು ಇಂಗ್ಲೆಂಡ್ ಬ್ಯಾಟ್ಸಮನ್ ಗಳು ಪರದಾಡಿದರು.ತಂಡದ ಮೊತ್ತ 30 ಆಗುವಷ್ಟರಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ ತಂಡವು ನಂತರದಲ್ಲಿ ಚೇತರಿಸಿಕೊಂಡರೂ ಸಹಿತ ಭಾರತದ ಬೌಲರ್ ಗಳು ಸ್ಟೋಕ್ಸ್,(55) ಡೆನಿಯಲ್ ಲಾರೆನ್ಸ್ ರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಇದನ್ನೂ ಓದಿ: ನೀವು ಆಟವನ್ನು ಗೆಲ್ಲಲು ಆಡುತ್ತೀರೋ ಅಥವಾ 5 ದಿನಗಳ ವರೆಗೆ ತಗೆದುಕೊಂಡು ಹೋಗುತ್ತಿರೋ?
ಭಾರತ ತಂಡದ ಪರವಾಗಿ ಅಕ್ಸರ್ ನಾಲ್ಕು ವಿಕೆಟ್ ಹಾಗೂ ಆಶ್ವಿನ್ ಮೂರು ವಿಕೆಟ್ ಗಳನ್ನು ಪಡೆದರು. ಮೊದಲನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಒಂದು ವಿಕೆಟ್ ಕಳೆದುಕೊಂಡು 24 ರನ್ ಗಳಿಸಿದೆ. ಭಾರತದ ಪರವಾಗಿ ರೋಹಿತ್ ಶರ್ಮಾ ಹಾಗೂ ಚೆತೆಶ್ವರ್ ಪೂಜಾರ್ ಕ್ರಮವಾಗಿ 8 ಹಾಗೂ 15 ರನ್ ಗಳಿಸಿ ಕ್ರಿಸ್ ನಲ್ಲಿ ಆಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.