India vs South Africa 2021: ಟ್ರೋಲ್ ಮಾಡಿದ ಮೈಕಲ್ ವಾನ್ ಗೆ ವಾಸೀಂ ಜಾಫರ್ ನೀಡಿದ ತಿರುಗೇಟು ಏನು ಗೊತ್ತಾ?

ಶುಕ್ರವಾರದಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವು ಭಾರತವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ.

Written by - Zee Kannada News Desk | Last Updated : Jan 14, 2022, 09:40 PM IST
  • ಶುಕ್ರವಾರದಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವು ಭಾರತವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ.
 India vs South Africa 2021: ಟ್ರೋಲ್ ಮಾಡಿದ ಮೈಕಲ್ ವಾನ್ ಗೆ ವಾಸೀಂ ಜಾಫರ್ ನೀಡಿದ ತಿರುಗೇಟು ಏನು ಗೊತ್ತಾ?  title=

ನವದೆಹಲಿ: ಶುಕ್ರವಾರದಂದು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವು ಭಾರತವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿದೆ.

ಭಾರತ ಮೊದಲ ಟೆಸ್ಟ್‌ನಲ್ಲಿ 113 ರನ್‌ಗಳಿಂದ ಗೆದ್ದಿತ್ತು, ಆದರೆ ದಕ್ಷಿಣ ಆಫ್ರಿಕಾ ಎರಡನೇ ಮತ್ತು ಮೂರನೇ ಟೆಸ್ಟ್‌ನಲ್ಲಿ ಗೆಲುವು ದಾಖಲಿಸಿ ಸರಣಿಯನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: Budget 2022 : PPF ಖಾತೆದಾರರಿಗೆ ಭರ್ಜರಿ ಸಿಹಿ ಸುದ್ದಿ! ಹೊಸ ಬಜೆಟ್‌ನಲ್ಲಿ ಹಣಕಾಸು ಸಚಿವರಿಂದ ಸಿಗಲಿದೆ ಈ ಬಿಗ್ ನ್ಯೂಸ್

4 ನೇ ದಿನದ ಊಟದ ನಂತರ ಗೆಲುವಿಗೆ 41 ರನ್‌ಗಳ ಅಗತ್ಯವಿತ್ತು, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಮತ್ತು ಟೆಂಬಾ ಬವುಮಾ ಅವರು ಶುಕ್ರವಾರದಂದು ದಕ್ಷಿಣ ಆಫ್ರಿಕಾವನ್ನು ಸುಲಭವಾಗಿ ಗೆಲುವಿನ ದಡಕ್ಕೆ ತಲುಪಿಸಿದರು.ಇದರಿಂದಾಗಿ ಭಾರತ ತಂಡವು ಈಗ ದಕ್ಷಿಣಾ ಆಫ್ರಿಕಾದಲ್ಲಿ ಚೊಚ್ಚಲ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ.

ಇದನ್ನೂ ಓದಿ: ರಾತ್ರಿ 10 ಗಂಟೆಯಿಂದ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಬ್ರೇಕ್

ಇದಾದ ನಂತರ ಇಂಗ್ಲೆಂಡಿನ ಮೈಕಲ್ ವಾನ್ ಅವರು ವಾಸಿಂ ಜಾಫರ್ ಅವರನ್ನು ಟ್ಯಾಗ್ ಮಾಡಿ ಸರಿಯಾಗಿದ್ದೀರಾ? ಎಂದು ಕೇಳಿದರು.ಇದಕ್ಕೆ ತಕ್ಷಣ ಉತ್ತರಿಸಿದ ಜಾಫರ್ ಹಾ ಆಲ್ ಗುಡ್ ಮೈಕೆಲ್, ನಾವು ಇನ್ನೂ 2-1 ರಿಂದ ನಿಮ್ಮನ್ನು ಮುನ್ನಡೆಸುತ್ತಿದ್ದೇವೆ ಎಂಬುದನ್ನು ಮರೆಯಬೇಡಿ' ಎಂದು ಟಾಂಗ್ ನೀಡಿದ್ದಾರೆ.

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 
 

 

Trending News